ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹಾಗೂ ಪದವಿ ಪರೀಕ್ಷೆಯಲ್ಲಿ ಸಾಧನೆಗೈದ ಪಟ್ಟಣದ ವಿಪ್ರ ಸಮುದಾಯದ ವಿದ್ಯಾರ್ಥಿಗಳನ್ನು ಹೋಬಳಿಯ ವಿಪ್ರ ಪ್ರತಿಷ್ಠಾನ ಅಭಿನಂದಿಸಿದೆ.
ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕಗಳಿಸಿದ ವಿಪ್ರ ಸಮುದಾಯದ ೧.ವಿದ್ಯಾಶ್ರೀ, ೨.ಶ್ಯಾಮ್ ಭಾರದ್ವಾಜ್, ೩. ಪ್ರಮೋದ್ ಹಾಗೂ ಮನೋರೋಗ ಶಾಸ್ತ್ರದಲ್ಲಿ ಎಂ.ಡಿ ಪದವಿ ಪಡೆದ ೪. ನಿತಿನ್ ಅಂಬೇಕರ್. |
ಪಟ್ಟಣದ ಶ್ರೀಧರ್ ಅಂಬೇಕರ್ ಅವರ ಪುತ್ರ ನಿತಿನ್ ಅಂಬೇಕರ್ ಬೆಂಗಳೂರಿನ ನಿಮಾನ್ಸ್ ನಲ್ಲಿ ಮನೋರೋಗ ಶಾಸ್ತ್ರದಲ್ಲಿ ಎಂ.ಡಿ ಪದವಿ ಪಡೆದು ಸಾಧನೆ ಮಾಡಿದರೆ, ಹುಳಿಯಾರು -ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಜೋಡಿತಿರುಮಲಾಪುರದ ಸತ್ಯನಾರಾಯಣ್ ಅವರ ಪುತ್ರಿ ವಿದ್ಯಾಶ್ರೀ ೫೮೯ ಅಂಕ(ಶೇ.೯೪.೨೪), ಪಟ್ಟಣದ ವಸಂತನಗರದ ನಾಗಲಕ್ಷ್ಮಿನರೇಂದ್ರಬಾಬು ಅವರ ಮಗ ಶ್ಯಾಮ್ ಭಾರದ್ವಾಜ್ ಮೈಸೂರಿನ ಶ್ರೀರಾಮಕೃಷ್ಣ ವಿದ್ಯಾಶಾಲೆಯಲ್ಲಿ ಅಭ್ಯಾಸ ಮಾಡಿದ್ದು ೫೮೦ ಅಂಕ(ಶೇ.೯೨.೮) ಹಾಗೂ ಪಟ್ಟಣದ ಶಂಕರಪುರ ಬಡಾವಣೆಯ ಸ್ವಾಮಿ ಅವರ ಪುತ್ರ ಟಿ.ಎಸ್.ಪ್ರಮೋದ್ ವಾಸವಿಆಂಗ್ಲಶಾಲೆಯ ವಿದ್ಯಾರ್ಥಿಯಾಗಿದ್ದು ೪೪೨ ಅಂಕ(ಶೇ.೭೦.೭೨)ಗಳಿಸಿದ್ದಾರೆ. ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ವಿಪ್ರ ಪ್ರತಿಷ್ಠಾನದ ಅಧ್ಯಕ್ಷ ಡಿ.ಆರ್.ನರೇಂದ್ರಬಾಬು , ಕಾರ್ಯದರ್ಶಿ ಹು.ಕೃ.ವಿಶ್ವನಾಥ್ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ