ತುಮಕೂರು ಜಿಲ್ಲಾ ಪೊಲೀಸ್ : ಪತ್ರಿಕಾ ಪ್ರಕಟಣೆ :
----------------------------------------
ಶಾಲೆಗಳೇ ಟಾರ್ಗೆಟ್ - ಶಾಲೆಗಳಿಗೆ ಕನ್ನ ಹಾಕುತ್ತಿದ್ದ ಕಳ್ಳನ ಬಂಧನ :
ಕಳೆದ 02 ತಿಂಗಳಿನಿಂದ ಅಂಗನವಾಡಿ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳನ್ನು ಗುರಿಯಾಗಿರಿಸಿಕೊಂಡು ರಾತ್ರಿ ವೇಳೆ ಶಾಲೆಗಳ ಬೀಗ ಹೊಡೆದು ಸಿಲಿಂಡರ್ ಮತ್ತು ಇತರೆ ವಸ್ತುಗಳನ್ನು ಕಳವು ಮಾಡುತ್ತಿದ್ದ ಸಿಲಿಂಡರ್ ಕಳ್ಳನನ್ನು ಬಂದಿಸುವಲ್ಲಿ ತುಮಕೂರು ಗ್ರಾಮಾಂತರ ಉಪವಿಭಾಗದ ವಿಶೇಷ ತಂಡದ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ವ್ಯಕ್ತಿಯ ಹೆಸರು ಮತ್ತು ವಿಳಾಸ: ಮಂಜುನಾಥ ತಂದೆ ಭೀಮಪ್ಪ, 23 ವರ್ಷ, ಅಜ್ಜಿಹಳ್ಳಿ, ಕೊರಟಗೆರೆ ತಾಲ್ಲೂಕು, ತುಮಕೂರು ಜಿಲ್ಲೆ.
ತುಮಕೂರು ಜಿಲ್ಲೆಯ ಕೊರಟಗೆರೆ, ಚೇಳೂರು, ತುಮಕೂರು ಗ್ರಾಮಾಂತರ, ಮಧುಗಿರಿ, ಕೊಡಿಗೇನಹಳ್ಳಿ, ಬಡವನಹಳ್ಳಿ, ಸಿರಾ ಪಟ್ಟಣ ಠಾಣೆ, ಕ್ಯಾತಸಂದ್ರ ಮತ್ತು ಬೆಳ್ಳಾವಿ ಠಾಣಾ ಸರಹದ್ದಿನಲ್ಲಿ ಅಂಗನವಾಡಿ, ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಗಳಲ್ಲಿ ಅನ್ನ ದಾಸೋಹಕ್ಕೆಂದು ಇಡಲಾಗಿದ್ದ ಸಿಲಿಂಡರ್ ಕಳ್ಳತನ ಕಳೆದ 04 ತಿಂಗಳಿನಿಂದ ಅವ್ಯಾಹತವಾಗಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸುಮಾರು 33 ಶಾಲೆಗಳಲ್ಲಿ ಕನ್ನಕಳವು ಪ್ರಕರಣಗಳು ವರದಿಯಾಗಿದ್ದವು.
ಸಿಲಿಂಡರ್ ಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಶಾಲೆಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಕಳ್ಳನನ್ನು ಬಂಧಿಸಲು ಶ್ರೀ ಚಂದ್ರಶೇಖರ್, ಪಿ.ಐ., ಕೊರಟಗೆರೆ, ಶ್ರೀ ರವಿ ಪಿ, ಸಿ.ಪಿ.ಐ., ತುಮಕೂರು ಗ್ರಾಮಾಂತರ ವೃತ್ತ, ಶ್ರೀ ಅವಿನಾಶ್, ಪಿ.ಎಸ್.ಐ., ಕೋರ ಠಾಣೆ, ಸಿಬ್ಬಂದಿಯವರಾದ ಉಮೇಶ್, ರಾಮಕೃಷ್ಣ, ಶಾಂತರಾಜು, ಮಾಲತೇಶ್, ಸುರೇಶ್, ವಾಸು ಇವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ವಿಶೇಷ ತಂಡದವರು 33 ಸ್ಥಳಗಳಲ್ಲಿ ಕಳ್ಳತನ ಮಾಡಲಾಗಿದ್ದ ಸ್ಥಳಗಳಿಗೆ ಭೇಟಿ ಕೊಟ್ಟು ಅಪರಾಧಗಳ ಕುರಿತು ಮಾಹಿತಿ ಸಂಗ್ರಹಿಸಿ ಆರೋಪಿತನ ಜಾಡು ಪತ್ತೆಹಚ್ಚಲು ಇಂತಹುದೇ ಅಪರಾಧಗಳನ್ನು ಈ ಹಿಂದೆ ಮಾಡುತ್ತಿದ್ದ ಅಪರಾಧಿಗಳ ಚಲನವಲನಗಳ ಮೇಲೆ ನಿಗಾ ವಹಿಸಿದ್ದರು.
ಮೇಲ್ಕಂಡ ಆರೋಪಿ ತನ್ನ ಲಗೇಜ್ ಆಟೋ ಮತ್ತು ಟಾಟಾಸುಮೊದಲ್ಲಿ ಇಬ್ಬರು ಹೆಂಗಸರನ್ನು ಜೊತೆಯಲ್ಲಿ ಕರೆದುಕೊಂಡು ಓಡಾಡುತ್ತಿದ್ದುದರಿಂದ ಅನುಮಾನ ಬಂದು ಆತನನ್ನು ಬಂದಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಈ ಹಿಂದೆ 2009 ರಲ್ಲಿ 03 ಶಾಲೆಗಳಿಗೆ ರಾತ್ರಿ ವೇಳೆ ಕನ್ನ ಹಾಕಿ ಕಳ್ಳತನ ಮಾಡಿದ ಪ್ರಕರಣಗಳು ಹೆಬ್ಬೂರು, ಗುಬ್ಬಿ ಮತ್ತು ಕ್ಯಾತಸಂದ್ರ ಠಾಣಾ ವ್ಯಾಪ್ತಿಯಲ್ಲಿ ಶಾಲೆಗಳ ಕಳ್ಳತನ ಮಾಡಿ, ಸಿಲಿಂಡರ್ಗಳನ್ನು ಕಳವು ಮಾಡುತ್ತಿದ್ದ ಆರೋಪದ ಅಡಿಯಲ್ಲಿ ದಸ್ತಗಿರಿ ಮಾಡಲಾಗಿತ್ತು. ಆತನು ಒಂದು ವರ್ಷ ಜೈಲಿನಲ್ಲಿದ್ದು ನಂತರ ಜೈಲಿನಿಂದ ಬಿಡುಗಡೆ ಹೊಂದಿ ಎಳೆ ನೀರು ವ್ಯಾಪಾರ ಮಾಡಿಕೊಂಡು ಅಜ್ಜಿಹಳ್ಳಿ ಗ್ರಾಮದಲ್ಲಿ ವಾಸ ಮಾಡಿಕೊಂಡಿದ್ದನು ಈ 03 ಶಾಲೆಗಳ ಕಳ್ಳತನವನ್ನು ಆತನ ಮೊದಲನೆ ಹೆಂಡತಿ ಸೌಭಾಗ್ಯ ಎಂಬುವವಳು ಅಂಗಡಿವಾಡಿಯಲ್ಲಿ ಕೆಲಸ ಮಾಡುತ್ತಿದ್ದಳು, ಹೆಂಡತಿಯೇ ತನಗೆ ಶಾಲೆಗಳಲ್ಲಿ ಸಿಲಿಂಡರ್ ಕಳ್ಳತನ ಮಾಡುವಂತೆ ಪ್ರೇರೆಪಿಸುತ್ತಿದ್ದಳು ಎಂದು ಪೊಲೀಸರಿಗೆ ವಿಚಾರಣೆ ಕಾಲದಲ್ಲಿ ತಿಳಿಸಿದ್ದಾನೆ.
ಆರೋಪಿತನನ್ನು ಕೂಲಂಕುಷ ವಿಚಾರಣೆಗೆ ಒಳಪಡಿಸಿದಾಗ ಆತನು ಕೊರಟಗೆರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮಾವತ್ತೂರು ಶಾಲೆಯಲ್ಲಿ 02 ಬಾರಿ, ಗೊಡ್ಡರಹಳ್ಳಿ, ರಾಯವಾರ, ತುಂಬಾಡಿ, ಬಸವನಹಳ್ಳಿ, ಚಿಕ್ಕಣ್ಣನಪಾಳ್ಯ, ತೊಗರಿಘಟ್ಟ, ಲಿಂಗಾಪುರ, ಇರಕಸಂದ್ರ ಕಾಲೋನಿ, ತೀತಾ, ಹುಲಿಕುಂಟೆ, ಸೋಪಂಪುರ, ಕಂಬದಹಳ್ಳಿ, ಜಟ್ಟಿ ಅಗ್ರಹಾರ ಒಟ್ಟು 14 ಶಾಲೆಗಳಲ್ಲಿ, ಚೇಳೂರು ಠಾಣೆಯ ಅಳಿಲುಘಟ್ಟ, ನಾಗೇನಹಳ್ಳಿಯ 2 ಶಾಲೆಗಳು, ಕೋರ ಠಾಣೆಯ ನಾಯಕನಪಾಳ್ಯ, ಓಬಳಾಪುರ, ಸಿಂಗನೋಹಳ್ಳಿಯ 3 ಶಾಲೆಗಳು, ತುಮಕೂರು ಗ್ರಾಮಾಂತರ ಠಾಣೆಯ ದಿಬ್ಬೂರು ಹೊಸಹಳ್ಳಿಯ 1 ಶಾಲೆ, ಮಧುಗಿರಿ ಠಾಣೆಯ ಗುಡಿಕೊಪ್ಪ ಶಾಲೆ 01 ಪ್ರಕರಣ, ಕೊಡಿಗೇನಹಳ್ಳಿ ಠಾಣೆಯ ಕೊಂಡವಾಡಿಯಲ್ಲಿ 01 ಪ್ರಕರಣ, ಬಡವನಹಳ್ಳಿ ಪೊಲೀಸ್ ಠಾಣೆಯ ರಂಗಾಪುರ, ವೀರಶಾನಹಳ್ಳಿ, ದೊಡ್ಡೇರಿ ಗ್ರಾಮಗಳಲ್ಲಿ 03 ಪ್ರಕರಣ, ಸಿರಾ ನಗರ ಠಾಣೆಯ ಕುರುಬರಹಳ್ಳಿ, ಹುಯಿಲ್ದೊರೆ, ಮೂಗನಹಳ್ಳಿ, ಸಿರಾ ನಗರದಲ್ಲಿ 04 ಪ್ರಕರಣಗಳು, ಕ್ಯಾತಸಂದ್ರ ಪೊಲೀಸ್ ಠಾಣೆಯ ಮೂಕನಹಳ್ಳಿ ಗ್ರಾಮದಲ್ಲಿ 01 ಪ್ರಕರಣ ಮತ್ತು ಬೆಳ್ಳಾವಿ ಪೊಲೀಸ್ ಠಾಣೆಯ ಗೌಡಿಹಳ್ಳಿ, ಮುದಿಗೆರೆ, ಬುಗುಡನಹಳ್ಳಿಯ ವ್ಯಾಪ್ತಿಯಲ್ಲಿ 03 ಶಾಲೆಗಳನ್ನು ರಾತ್ರಿ ವೇಳೆ ಬೀಗ ಹೊಡೆದು ತನ್ನ ಲಗೇಜ್ ಆಟೋ ಮತ್ತು ಟಾಟಾ ಸುಮೋದಲ್ಲಿ ಕಳವು ಮಾಲುಗಳನ್ನು ತುಂಬಿಕೊಂಡು ಸಿಲಿಂಡರ್ಗಳನ್ನು 600 ರೂ, 700ರೂ ಮತ್ತು 800 ರೂಪಾಯಿಗಳಿಗೆ ಬೇಕಾಬಿಟ್ಟಿ ರಸ್ತೆ ಬದಿಯಲ್ಲಿ ತಿಂಡಿ ತಿನಸು ಮಾರಾಟ ಮಾಡುವವರಿಗೆ, ಹೋಟೆಲ್ಗಳಿಗೆ ಮಾರಾಟ ಮಾಡಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ. ಆರೋಪಿ ಕೊಟ್ಟ ಮಾಹಿತಿ ಮೇರೆಗೆ ತುಮಕೂರು, ಶಿರಾ, ಗುಬ್ಬಿ ಗೇಟ್, ನವಿಲೆಹಳ್ಳಿ, ಊರುಕೆರೆ, ಬೀಡಿಪುರ, ಬುಗಡನಹಳ್ಳಿ, ಶಿರಾ ಗೇಟ್, ಬೆಳಗುಂಬ ಮತ್ತು ದ್ಯಾನ: ಪ್ಯಾಲೇಸ್ ಹತ್ತಿರ ಮಾರಾಟ ಮಾಡಲಾಗಿದ್ದ ಕಳವು ಮಾಲುಗಳನ್ನು ಹಾಗೂ 58 ಅಡುಗೆ ಅನಿಲ್ ಸಿಲಿಂಡರ್, 24 ವೋಲ್ಸ್ಡ್ 02 ಬ್ಯಾಟರಿ, 12 ವೋಲ್ಸ್ಡ್ 05 ಬ್ಯಾಟರಿ, 03 ಹೊಲಿಗೆ ಯಂತ್ರಗಳು, 01 ಯುಪಿಎಸ್, ಜನರೇಟರ್, 03 ತೂಕ ಯಂತ್ರಗಳು, 01 ಧ್ವನಿವದ್ರಕ, 01 ಎಲ್ಜಿ ಟಿವಿ, 03 ಎಲ್ಸಿಡಿ ಮಾನಿಟರ್ಗಳು, 01 ಸ್ಟೆಬಿಲೈಜರ್, 01 ಮಿಕ್ಸಿ ಮತ್ತು ಕೃತ್ಯಕ್ಕೆ ಉಪಯೋಗಿಸುತ್ತಿದ್ದ ಲಗೇಜ್ ಆಟೋ ಒಟ್ಟು 03 ಲಕ್ಷ ಬೆಲೆ ಬಾಳುವ ಕಳವು ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿತನು ಹಗಲು ವೇಳೆ ಶಾಲೆಗಳನ್ನು ನೋಡಿಕೊಂಡು ರಾತ್ರಿ ವೇಳೆ ಶಾಲೆಗಳ ಬೀಗ ಹೊಡೆದು ಒಳ ಪ್ರವೇಶಿಸಿ, ಶಾಲೆಯಲ್ಲಿ ಅನ್ನದಾಸೋಹಕ್ಕೆ ಉಪಯೋಗಿಸುತ್ತಿದ್ದ ಸಿಲಿಂಡರ್ ಮತ್ತಿತರೆ ವಸ್ತುಗಳನ್ನು ಕಳವು ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. ಆರೋಪಿತನ ಉಪಟಳದಿಂದ 04 ತಿಂಗಳಿನಿಂದ ಶಾಲೆಯಲ್ಲಿ ಅನ್ನದಾಸೋಹ ಮಾಡಲು ಅನಾನುಕೂಲ ಉಂಟಾಗಿತ್ತು. ಆರೋಪಿತನ ದಸ್ತಗಿರಿಯಿಂದ 33 ಕನ್ನಕಳವು ಪ್ರಕರಣಗಳು ಪತ್ತೆಯಾದಂತೆ ಆಗಿದೆ. ಆರೋಪಿತನನ್ನು ದಿ: 06/05/15 ರಿಂದ 11/05/15 ರವರೆಗೆ ಪೊಲೀಸ್ ಅಭಿರಕ್ಷೆ ತೆಗೆದುಕೊಳ್ಳಲಾಗಿದೆ. ಆರೋಪಿತನು ಈ ಹಿಂದೆ 2009 ರಲ್ಲಿ ಸಿಲಿಂಡರ್ ಕಳುವು ಪ್ರಕರಣಗಳಲ್ಲಿ ಜೈಲಿನಿಂದ ಬಿಡುಗಡೆ ಹೊಂದಲು ಆತನ ತಾಯಿ ಅಜ್ಜಿಹಳ್ಳಿಯಲ್ಲಿ ಪರಿಚಯಸ್ಥರಿಂದ 25 ಸಾವಿರ ರೂ ಸಾಲ ಮಾಡಿ, ಆರೋಪಿತನನ್ನು ಜೈಲಿನಿಂದ ಬಿಡುಗಡೆ ಮಾಡಿಸಿದ್ದರು ಎಂದು ತಿಳಿದು ಬಂದಿದೆ. ಸಾಲವನ್ನು ತೀರಿಸಲು ಆರೋಪಿ ಮತ್ತೆ ಶಾಲೆಗಳಲ್ಲಿ ಕಳ್ಳತನ ಮಾಡಲು ಪ್ರಾರಂಭ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.
----------------------------------------
ಶಾಲೆಗಳೇ ಟಾರ್ಗೆಟ್ - ಶಾಲೆಗಳಿಗೆ ಕನ್ನ ಹಾಕುತ್ತಿದ್ದ ಕಳ್ಳನ ಬಂಧನ :
ಕಳೆದ 02 ತಿಂಗಳಿನಿಂದ ಅಂಗನವಾಡಿ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆಗಳನ್ನು ಗುರಿಯಾಗಿರಿಸಿಕೊಂಡು ರಾತ್ರಿ ವೇಳೆ ಶಾಲೆಗಳ ಬೀಗ ಹೊಡೆದು ಸಿಲಿಂಡರ್ ಮತ್ತು ಇತರೆ ವಸ್ತುಗಳನ್ನು ಕಳವು ಮಾಡುತ್ತಿದ್ದ ಸಿಲಿಂಡರ್ ಕಳ್ಳನನ್ನು ಬಂದಿಸುವಲ್ಲಿ ತುಮಕೂರು ಗ್ರಾಮಾಂತರ ಉಪವಿಭಾಗದ ವಿಶೇಷ ತಂಡದ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಿಲಿಂಡರ್ ಗಳನ್ನು ಗುರಿಯಾಗಿಸಿಕೊಂಡು ರಾತ್ರಿ ವೇಳೆ ಶಾಲೆಗಳ ಬೀಗ ಮುರಿದು ಕಳವು ಮಾಡುತ್ತಿದ್ದ ಕಳ್ಳನನ್ನು ಬಂಧಿಸಲು ಶ್ರೀ ಚಂದ್ರಶೇಖರ್, ಪಿ.ಐ., ಕೊರಟಗೆರೆ, ಶ್ರೀ ರವಿ ಪಿ, ಸಿ.ಪಿ.ಐ., ತುಮಕೂರು ಗ್ರಾಮಾಂತರ ವೃತ್ತ, ಶ್ರೀ ಅವಿನಾಶ್, ಪಿ.ಎಸ್.ಐ., ಕೋರ ಠಾಣೆ, ಸಿಬ್ಬಂದಿಯವರಾದ ಉಮೇಶ್, ರಾಮಕೃಷ್ಣ, ಶಾಂತರಾಜು, ಮಾಲತೇಶ್, ಸುರೇಶ್, ವಾಸು ಇವರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು.
ವಿಶೇಷ ತಂಡದವರು 33 ಸ್ಥಳಗಳಲ್ಲಿ ಕಳ್ಳತನ ಮಾಡಲಾಗಿದ್ದ ಸ್ಥಳಗಳಿಗೆ ಭೇಟಿ ಕೊಟ್ಟು ಅಪರಾಧಗಳ ಕುರಿತು ಮಾಹಿತಿ ಸಂಗ್ರಹಿಸಿ ಆರೋಪಿತನ ಜಾಡು ಪತ್ತೆಹಚ್ಚಲು ಇಂತಹುದೇ ಅಪರಾಧಗಳನ್ನು ಈ ಹಿಂದೆ ಮಾಡುತ್ತಿದ್ದ ಅಪರಾಧಿಗಳ ಚಲನವಲನಗಳ ಮೇಲೆ ನಿಗಾ ವಹಿಸಿದ್ದರು.
ಮೇಲ್ಕಂಡ ಆರೋಪಿ ತನ್ನ ಲಗೇಜ್ ಆಟೋ ಮತ್ತು ಟಾಟಾಸುಮೊದಲ್ಲಿ ಇಬ್ಬರು ಹೆಂಗಸರನ್ನು ಜೊತೆಯಲ್ಲಿ ಕರೆದುಕೊಂಡು ಓಡಾಡುತ್ತಿದ್ದುದರಿಂದ ಅನುಮಾನ ಬಂದು ಆತನನ್ನು ಬಂದಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿ ಈ ಹಿಂದೆ 2009 ರಲ್ಲಿ 03 ಶಾಲೆಗಳಿಗೆ ರಾತ್ರಿ ವೇಳೆ ಕನ್ನ ಹಾಕಿ ಕಳ್ಳತನ ಮಾಡಿದ ಪ್ರಕರಣಗಳು ಹೆಬ್ಬೂರು, ಗುಬ್ಬಿ ಮತ್ತು ಕ್ಯಾತಸಂದ್ರ ಠಾಣಾ ವ್ಯಾಪ್ತಿಯಲ್ಲಿ ಶಾಲೆಗಳ ಕಳ್ಳತನ ಮಾಡಿ, ಸಿಲಿಂಡರ್ಗಳನ್ನು ಕಳವು ಮಾಡುತ್ತಿದ್ದ ಆರೋಪದ ಅಡಿಯಲ್ಲಿ ದಸ್ತಗಿರಿ ಮಾಡಲಾಗಿತ್ತು. ಆತನು ಒಂದು ವರ್ಷ ಜೈಲಿನಲ್ಲಿದ್ದು ನಂತರ ಜೈಲಿನಿಂದ ಬಿಡುಗಡೆ ಹೊಂದಿ ಎಳೆ ನೀರು ವ್ಯಾಪಾರ ಮಾಡಿಕೊಂಡು ಅಜ್ಜಿಹಳ್ಳಿ ಗ್ರಾಮದಲ್ಲಿ ವಾಸ ಮಾಡಿಕೊಂಡಿದ್ದನು ಈ 03 ಶಾಲೆಗಳ ಕಳ್ಳತನವನ್ನು ಆತನ ಮೊದಲನೆ ಹೆಂಡತಿ ಸೌಭಾಗ್ಯ ಎಂಬುವವಳು ಅಂಗಡಿವಾಡಿಯಲ್ಲಿ ಕೆಲಸ ಮಾಡುತ್ತಿದ್ದಳು, ಹೆಂಡತಿಯೇ ತನಗೆ ಶಾಲೆಗಳಲ್ಲಿ ಸಿಲಿಂಡರ್ ಕಳ್ಳತನ ಮಾಡುವಂತೆ ಪ್ರೇರೆಪಿಸುತ್ತಿದ್ದಳು ಎಂದು ಪೊಲೀಸರಿಗೆ ವಿಚಾರಣೆ ಕಾಲದಲ್ಲಿ ತಿಳಿಸಿದ್ದಾನೆ.
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಕಾರ್ತೀಕ್ ರೆಡ್ಡಿ ಐ.ಪಿ.ಎಸ್. ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಆರ್. ಲಕ್ಷ್ಮಣ ಮತ್ತು ತುಮಕೂರು ಗ್ರಾಮಾಂತರ ಉಪ ವಿಭಾಗದ ಆರಕ್ಷಕ ಉಪಾಧೀಕ್ಷಕರಾದ ಶ್ರೀ ರಾಮಾನಾಯ್ಕ್ ರವರುಗಳ ಮಾರ್ಗದರ್ಶನದಲ್ಲಿ ಶ್ರೀ ಚಂದ್ರಶೇಖರ್, ಪಿ.ಐ., ಕೊರಟಗೆರೆ, ಶ್ರೀ ರವಿ ಪಿ, ಸಿ.ಪಿ.ಐ., ತುಮಕೂರು ಗ್ರಾಮಾಂತರ ವೃತ್ತ, ಶ್ರೀ ಅವಿನಾಶ್, ಪಿ.ಎಸ್.ಐ., ಕೋರ ಠಾಣೆ, ಸಿಬ್ಬಂದಿಯವರಾದ ಉಮೇಶ್, ರಾಮಕೃಷ್ಣ, ಶಾಂತರಾಜು, ಮಾಲತೇಶ್, ಸುರೇಶ್, ವಾಸು ಇವರನ್ನೊಳಗೊಂಡ ವಿಶೇಷ ತಂಡದ ಪೊಲೀಸರು ಆರೋಪಿತನನ್ನು ಬಂಧಿಸಿ ಕಳವು ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ