ಹೋಬಳಿ ಜೋಡಿತಿರುಮಲಾಪುರದಲ್ಲಿ ಶ್ರೀಕೊಲ್ಲಾಪುರಿ ಮಹಾಲಕ್ಷ್ಮಿ ಅಮ್ಮನವರ ಜಾತ್ರಾ ಮಹೋತ್ಸವ ತಾ.೨ರ ಶನಿವಾರದಿಂದ ಪ್ರಾರಂಭಗೊಂಡಿದ್ದು ತಾ.೯ರ ಶನಿವಾರದಂದು ಮಡಿಲಕ್ಕಿ ಸೇವೆಯೊಂದಿಗೆ ಜಾತ್ರೆಗೆ ತೆರೆ ಎಳೆಯಲಾಯಿತು.
ಕಳೆದ ಒಂದುವಾರದಿಂದ ನಡೆಯುತ್ತಿದ್ದ ಜಾತ್ರೆಗೆ ಹೊಸಹಳ್ಳಿ ಕೊಲ್ಲಾಪುರದಮ್ಮ,ಹುಳಿಯಾರು ದುರ್ಗಮ್ಮ, ಹೊಸಹಳ್ಳಿ ಪಾಳ್ಯದ ಅಂತರಘಟ್ಟೆ ಅಮ್ಮನವರು ಆಗಮಿಸಿದ್ದು ಧ್ವಜಾರೋಹಣ, ಮದುವಣಗಿತ್ತಿ ಕಾರ್ಯ,ಆರತಿಬಾನ ಹಾಗೂ ನಡೆಮುಡಿ ಕಳಸೋತ್ಸವ ನಡೆಸಲಾಯಿತು.
ಶುಕ್ರವಾರ ಬೆಳಿಗ್ಗೆ ರಥೋತ್ಸವ, ಮಧ್ಯಾಹ್ನ ಸಿಡಿ ಕಾರ್ಯ ಹಾಗೂ ಓಕಳಿ ಸೇವೆ, ಕಂಕಣ ವಿಸರ್ಜನೆ ನಡೆಸಿದ್ದಲ್ಲದೆ ಶನಿವಾರ ಗ್ರಾಮಸ್ಥರೆಲ್ಲ ದೇವರುಗಳಿಗೆ ಮಡಿಲಕ್ಕಿ ಹಾಕುವ ಮೂಲಕ ಪೂಜೆ ಸಲ್ಲಿಸುವ ಮೂಲಕ ಜಾತ್ರೆಗೆ ತೆರೆಬಿದ್ದಿತು. ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲ ಹಳ್ಳಿಯವರು, ಬಂಧುಗಳು ಆಗಮಿಸಿದ್ದರು.
ದೇವರುಗಳನ್ನು ಮಡಿಲಕ್ಕಿಯಾಡಲು ಕರೆದೊಯ್ಯುತ್ತಿರುವುದು. |
ಕಳೆದ ಒಂದುವಾರದಿಂದ ನಡೆಯುತ್ತಿದ್ದ ಜಾತ್ರೆಗೆ ಹೊಸಹಳ್ಳಿ ಕೊಲ್ಲಾಪುರದಮ್ಮ,ಹುಳಿಯಾರು ದುರ್ಗಮ್ಮ, ಹೊಸಹಳ್ಳಿ ಪಾಳ್ಯದ ಅಂತರಘಟ್ಟೆ ಅಮ್ಮನವರು ಆಗಮಿಸಿದ್ದು ಧ್ವಜಾರೋಹಣ, ಮದುವಣಗಿತ್ತಿ ಕಾರ್ಯ,ಆರತಿಬಾನ ಹಾಗೂ ನಡೆಮುಡಿ ಕಳಸೋತ್ಸವ ನಡೆಸಲಾಯಿತು.
ಶುಕ್ರವಾರ ಬೆಳಿಗ್ಗೆ ರಥೋತ್ಸವ, ಮಧ್ಯಾಹ್ನ ಸಿಡಿ ಕಾರ್ಯ ಹಾಗೂ ಓಕಳಿ ಸೇವೆ, ಕಂಕಣ ವಿಸರ್ಜನೆ ನಡೆಸಿದ್ದಲ್ಲದೆ ಶನಿವಾರ ಗ್ರಾಮಸ್ಥರೆಲ್ಲ ದೇವರುಗಳಿಗೆ ಮಡಿಲಕ್ಕಿ ಹಾಕುವ ಮೂಲಕ ಪೂಜೆ ಸಲ್ಲಿಸುವ ಮೂಲಕ ಜಾತ್ರೆಗೆ ತೆರೆಬಿದ್ದಿತು. ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲ ಹಳ್ಳಿಯವರು, ಬಂಧುಗಳು ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ