ಹುಳಿಯಾರು ಪಟ್ಟಣದ ಟಿಪ್ಪು ಸುಲ್ತಾನ್ ಪತ್ತಿನ ಸಹಕಾರ ಸಂಘದಲ್ಲಿ ಮುಸ್ಲಿಂ ಸಮುದಾಯದವರು ಮಂಗಳವಾರ ಟಿಪ್ಪು ಜಯಂತಿಯನ್ನು ಆಚರಿಸಿದರು.
ಹುಳಿಯಾರಿನ ಟಿಪ್ಪು ಸುಲ್ತಾನ್ ಪತ್ತಿನ ಸಹಕಾರ ಸಂಘದಲ್ಲಿ ಟಿಪ್ಪು ಜಯಂತಿ ಅಂಗವಾಗಿ ಮುಸ್ಲಿಂ ಮಹಿಳಾ ಸಂಘದವರಿಗೆ ಸಾಲದ ಚೆಕ್ ವಿತರಿಸಲಾಯಿತು. |
ಈ ವೇಳೆ ಟಿಪ್ಪು ಸುಲ್ತಾನ್ ಸಹಕಾರ ಸಂಘದ ನಿರ್ದೇಶಕ ಇಮ್ರಾಜ್ ಮಾತನಾಡಿ ಬ್ರಿಟೀಷರ ವಿರುದ್ದ ಹೋರಾಡಿ ತನ್ನ ಜೀವವನ್ನೇ ನೀಡಿದ ಮಹಾನ್ ವ್ಯಕ್ತಿ ಟಿಪ್ಪುವಿನ ಜನ್ಮ ದಿನಾಚರಣೆ ಆಚರಿಸುವ ನಿಟ್ಟಿನಲ್ಲಿ ಸರ್ಕಾರಿ ಕಛೇರಿಗಳು ಮುಂದಾಗಿಲ್ಲ ಹಾಗೂ ಬಹುದಿನದ ಬೇಡಿಕೆಯಾದ ಟಿಪ್ಪು ಜಯಂತಿಯಂದು ರಜೆ ಘೋಷಿಸದಿರುವುದು ಬೇಸರದ ಸಂಗತಿ ಎಂದರು. ದೇಶಕ್ಕಾಗಿ ಹೋರಾಡಿ ವೀರ ಮರಣವನಪ್ಪಿದ ಮೈಸೂರು ಹುಲಿಯ ಜನ್ಮ ದಿನವನ್ನು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಆಚರಿಸುವಂತೆ ಸರ್ಕಾರ ಆದೇಶ ಹೊರಡಿಸಬೇಕಿದೆ ಎಂದರು.
ಈ ವೇಳೆ ಜಿಲ್ಲಾ ವಕ್ಫ್ ಬೋರ್ಡ್ ನ ನಿರ್ದೇಶಕ ಹಾಗೂ ಜಾಮೀಯ ಮಸೀದಿಯ ಮುತುವಲ್ಲಿ ಜಬಿಉಲ್ಲಾ, ಟಿಪ್ಪು ಸಹಕಾರ ಸಂಘದ ಇರ್ಫಾನ್, ಸಿಬ್ಬಂದಿಗಳಾದ ಇಮ್ರಾನ್,ರಫೀಸ್ ಸೇರಿದಂತೆ ಇತರರಿದ್ದರು. ಇದೇ ವೇಳೆ ಮುಸ್ಲಿಂ ಮಹಿಳಾ ಸಂಘಗಳಿಗೆ ಸಾಲದ ಚೆಕ್ ಗಳನ್ನು ವಿತರಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ