ಹುಳಿಯಾರು ಹೋಬಳಿಯ ಚಿಕ್ಕಬಿದರೆಯ ಮಾಜಿ ಗ್ರಾ.ಪಂ.ಅಧ್ಯಕ್ಷ ಸಿ.ಎನ್.ಕೃಷ್ಣಪ್ಪ ಅವರ ನಿವಾಸದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಯೋಜಿಸಿದ್ದ ಮನೆಮನೆಗಳಲ್ಲಿ ಪಾಕ್ಷಿಕ ಕನ್ನಡ ಕವಿಕಾವ್ಯಗೋಷ್ಠಿ ಕಾರ್ಯಕ್ರಮದಲ್ಲಿ ಸರ್ವಜ್ಞನ ತ್ರಿಪದಿಗಳ ಸಂದೇಶ ಕುರಿತು ಉಪನ್ಯಾಸ ನಡೆಸಲಾಯಿತು.
ನಿವೃತ್ತ ಶಿಕ್ಷಕ ಕೋಡಿಹಳ್ಳಿ ಸಿದ್ದರಾಮಯ್ಯ ಅಧ್ಯಕ್ಷತೆವಹಿಸಿ ಮಾತನಾಡಿ, ಸರ್ವಜ್ಞನ ವಚನಗಳನ್ನು ಹೇಳಿದರಲ್ಲದೆ ಕವಿಯ ಪ್ರತಿಭೆ ಹಾಗೂ ವ್ಯಕ್ತಿತ್ವದ ಬಗ್ಗೆ ತಿಳಿಸಿದರು.ಕನ್ನಡದ ಆಡುನುಡಿಯಲ್ಲಿ ನಮ್ಮ ಬದುಕಿಗೆ ಮಾರ್ಗದರ್ಶನ ನೀಡಿದ ಮಹಾನ್ ಕವಿ ಸರ್ವಜ್ಞನಾಗಿದ್ದಾನೆಂದು ಬಣ್ಣಿಸಿದರು.
ಸಾಹಿತಿ ಹಾಗೂ ನಿವೃತ್ತ ಉಪನ್ಯಾಸಕರಾದ ಹುಳಿಯಾರಿನ ತ.ಶಿ.ಬಸವಮೂರ್ತಿ ಅವರು ತಮ್ಮ ಉಪನ್ಯಾಸದಲ್ಲಿ ಆಶುಕವಿ ಸರ್ವಜ್ಞ ಕುರಿತಂತೆ ವಿವರಗಳನ್ನು ತಿಳಿಸಿದರು. ವಿದ್ಯೆ,ಗುರು,ಗೃಹಸ್ಥ ಜೀವನ, ದಾನ,ಪರೋಪಕಾರ, ಕೃಷಿ,ಆರೋಗ್ಯ ಇತರೆ ವಿಷಗಳನ್ನು ಕುರಿತು ಸರ್ವಜ್ಞ ಹೇಳಿರುವ ವಚನಗಳನ್ನು ಉಲ್ಲೇಖಿಸಿ ಸರ್ವಜ್ಞನನ ಲೋಕಾನುಭವವನ್ನು ಸ್ಮರಿಸಿದರು.
ಆಶ್ರಯದಾತ ಕೋಡಿಹಳ್ಳಿ ಸಿದ್ದರಾಮಯ್ಯ ಅವರು ಕುಮಾರವ್ಯಾಸ ಭಾರತದ ಪೀಠಿಕಾ ಸಂಧಿಯನ್ನು ಗಮಕವಾಚನ ಮಾಡಿದರು. ಈ ವೇಳೆ ಶಿಕ್ಷಕ ಉಮೇಶ್,ಮುಖ್ಯಶಿಕ್ಷಕ ಜಯಣ್ಣ, ನಾಗರಾಜು ಸೇರಿದಂತೆ ಇತರರಿದ್ದರು. ಚೈತ್ರ,ಸಹನ,ಗಗನ ಪ್ರಾರ್ಥಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ