ಹಾಳುಬಾವಿಗೆ ಬಿದ್ದ ಕರಡಿಮರಿಯೊಂದನ್ನು ಅರಣ್ಯ ಇಲಾಖೆಯವರು ರಕ್ಷಿಸಿ ಮತ್ತೆ ಕಾಡಿಗೆ ಬಿಟ್ಟ ಘಟನೆ ಸಮೀಪದ ತಿಮ್ಮನಹಳ್ಳಿಯಲ್ಲಿ ಸೋಮವಾರ ಘಟಿಸಿದೆ.
ತಿಮ್ಮನಹಳ್ಳಿಯ ರಾಮೇಗೌಡ ಎಂಬುವರ ತೋಟದಲ್ಲಿದ್ದ ಹಾಳುಬಾವಿಗೆ ಭಾನುವಾರ ರಾತ್ರಿ ಕರಡಿಮರಿ ಬಿದ್ದಿದೆ. ಸೋಮವಾರದಂದು ತೋಟಕ್ಕೆ ಹೋದ ರಾಮೇಗೌಡ ಅದನ್ನು ಕಂಡು ತಕ್ಷಣ ಅರಣ್ಯ ಇಲಾಖೆಯವರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿಗಳು ಬಾವಿಯಲ್ಲಿ ಬಿದ್ದು ರೋದಿಸುತ್ತಿದ್ದ ಕರಡಿಮರಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಭಾನುವಾರ ರಾತ್ರಿ ತಾಯಿಕರಡಿಯೊಂದಿಗೆ ಮರಿಕರಡಿ ಆಹಾರಹುಡುಕಿಕೊಂಡು ಬಂದ ವೇಳೆ ಬಾವಿಗೆ ಬಿದ್ದಿರಬಹುದು ಎಂದು ಬುಕ್ಕಾಪಟ್ಟಣ ವಲಯ ಅರಣ್ಯಾಧಿಕಾರಿ ಶಾಂತರಾಜಯ್ಯ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ