ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಎಸ್.ಸಿ ಮೀಸಲು ಕ್ಷೇತ್ರದಿಂದ ಬಿಡಿಗಾಸು ಖರ್ಚಿಲ್ಲದೆ ಗೆಲ್ಲಬಹುದು ಎಂದು ಹೇಳುತ್ತಾರೆ. ಆದರೆ ಇದಕ್ಕೆ ತದ್ವಿರುದ್ದ ಎನ್ನುವಂತೆ ಹುಳಿಯಾರಿನ ಒಂದನೇ ಬ್ಲಾಕ್ ನ ಎಸ್.ಸಿ ಮೀಸಲು ಕ್ಷೇತ್ರದ ಒಂದು ಸ್ಥಾನಕ್ಕೆ ತೀವ್ರ ಪೈಪೋಟಿಯಿದ್ದು ೧೦ ಮಂದಿ ಸ್ಪರ್ಧಿಸಿದ್ದಾರೆ.
ಪಟ್ಟಣದ ಒಂದನೇ ಬ್ಲಾಕ್ ಗಾಂಧಿಪೇಟೆ ಬೀದಿಯ ಮನೆನಂ ೧ ರಿಂದ ೧೫೪ರ ವರೆಗಿದ್ದು ಇಲ್ಲಿ ಎಸ್.ಸಿ. ಸಮುದಾಯದ ಯಾರೊಬ್ಬರು ಇಲ್ಲ. ಆಗಿದ್ದು ಕೂಡ ಇಲ್ಲಿಗೆ ಎಸ್.ಸಿ. ಮೀಸಲು ಘೋಷಣೆಯಾಗಿದ್ದು ಪಟ್ಟಣದ ವಿವಿಧ ಬ್ಲಾಕ್ ನವರು ಇಲ್ಲಿ ಸ್ಪರ್ಧೆಗಿಳಿದಿದ್ದಾರೆ. ಹೆಚ್.ಬಿ.ಕೃಷ್ಣಯ್ಯ, ವಿಜಯನಗರ ಬಡಾವಣೆಯ ಅಂಜನಮೂರ್ತಿ, ಎಂ.ಗಣೇಶ್,ಮಾರುತಿನಗರದ ಅಂಜನಾಬೋವಿ, ಹರಿಶ್ ನಾಯ್ಕ, ಎ.ಕೆ.ಕಾಲೋನಿಯ ದುರ್ಗಯ್ಯ, ರಾಮಚಂದ್ರಯ್ಯ, ವಿನಾಯಕನಗರದ ದುರ್ಗರಾಜ,ಶಂಕರಪುರಬಡಾವಣೆಯ ಮೂರ್ತಿನಾಯ್ಕ,ಇಂದಿರಾನಗರದ ರಾಜನಾಯ್ಕ ಸೇರಿ ಒಟ್ಟು ೧೦ ಮಂದಿ ಸ್ಪರ್ಧಿಸಿದ್ದಾರೆ.
ಇವರ ಪೈಕಿ ಹೆಚ್.ಬಿ.ಕೃಷ್ಣಯ್ಯ ಹುಳಿಯಾರು ಗ್ರಾ.ಪಂ.ಯ ಮಾಜಿ ಅಧ್ಯಕ್ಷರಾಗಿದ್ದು ರಾಜಕೀಯದಲ್ಲಿ ಸಕ್ರೀಯರಾಗಿದ್ದರು. ತಾವು ಈ ಹಿಂದೆ ಮಾಡಿದ ಕಾರ್ಯ ಹಾಗೂ ರಾಜಕೀಯ ಅನುಭವವನ್ನು ಮುಂದಿಟ್ಟುಕೊಂಡು ಈ ಬಾರಿ ಸ್ಪರ್ಧಿಸಿದ್ದಾರೆ. ದುರ್ಗಯ್ಯ ಹಾಗೂ ರಾಮಚಂದ್ರಯ್ಯ ಸಹ ಗ್ರಾ.ಪಂ. ಮಾಜಿ ಸದಸ್ಯರಾಗಿದ್ದರೆ , ಅಂಜನಾಬೋವಿ,ಗಣೇಶ್, ಹರೀಶ್ ನಾಯ್ಕ ಅವರುಗಳು ಈ ಹಿಂದೆ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಿತರಾಗಿದ್ದರೂ ಸಹ ಈ ಬಾರಿ ಗೆಲ್ಲುವ ನಿರೀಕ್ಷೆಹೊಂದಿ ಸ್ಪರ್ಧಿಸಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆಯ ಸಂಚಾಲಕರಾಗಿರುವ ಅಂಜನಮೂರ್ತಿ ಪಟ್ಟಣದ ಅಭಿವೃದ್ದಿಯ ನಿಟ್ಟಿನಲ್ಲಿ ಸ್ಪರ್ಧಿಸಿದ್ದಾರೆ.
ಪ್ರಬಲ ಪೈಪೋಟಿ : ಮೂವರು ಗ್ರಾ.ಪಂ ಮಾಜಿ ಸದಸ್ಯರು ಹಾಗೂ ಈ ಹಿಂದೆ ಚುನಾವಣೆಯಲ್ಲಿ ಸೋತವರು ಕಣದಲಿದ್ದು ತಮ್ಮತಮ್ಮಲ್ಲೇ ಗೆಲುವಿಗಾಗಿ ತೀವ್ರ ಪೈಪೋಟಿಹೊಂದಿ ಪ್ರಚಾರ ನಡೆಸಿದ್ದಾರೆ. ಬಿಡಿಗಾಸು ಖರ್ಚಿಲ್ಲದೆ ಗೆಲ್ಲುತ್ತಿದ್ದ ಎಸ್.ಸಿ. ಮೀಸಲು ಕ್ಷೇತ್ರದ ಅಭ್ಯರ್ಥಿಗಳು ಸಹ ಚುನಾವಣೆಯಲ್ಲಿ ಗೆಲ್ಲಲು ಖರ್ಚು ಮಾಡುವಂತಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ