ಹುಳಿಯಾರು ಹೋಬಳಿ ದಸೂಡಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಹದ ಮಳೆಯಾಗಿದ್ದು ಮಳೆ ನೀರು ಹರಿಯಲು ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಹಾಗೂ ಇರುವ ಚರಂಡಿಯಲ್ಲಿ ಹೂಳು ತುಂಬಿಕೊಂಡಿರುವ ಪರಿಣಾಮ ಮಳೆ ನೀರು ಚರಂಡಿಯ ಕಸಕಡ್ಡಿಯೊಂದಿಗೆ ರಸ್ತೆಯಲ್ಲೆಲ್ಲಾ ಹರಿದು ಸಂಚಾರಕ್ಕೆ ತೊಡಕುಂಟಾಗಿದೆ.
ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಪೂಜಾರು ಗೋವಿಂದಪ್ಪನವರ ಮನೆಯ ಮುಂದೆ ಚರಂಡಿ ಕಡ್ಡಿಕೊಂಡು ರಸ್ತೆಯ ಮೇಲೆ ಮಳೆನೀರು ಕಸಕಡ್ಡಿ ಸಮೇತ ಹರಿದಿರುವುದು. |
ದಸೂಡಿ ಗ್ರಾಮದಲ್ಲಿರುವ ಚರಂಡಿಗಳ ತುಂಬ ಹೂಳು ತುಂಬಿಕೊಂಡು ತಿಂಗಳುಗಳೇ ಕಳೆದಿದ್ದರೂ ಸಹ ಅದನ್ನು ತೆಗೆಯುವ ಗೋಜಿಗೆ ಪಂಚಾಯ್ತಿಯವರು ಹೋಗಿಲ್ಲ. ಈ ಬಗ್ಗೆ ತಿಳಿಸಿದ್ದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಚರಂಡಿ ತುಂಬ ಪ್ಲಾಸ್ಟಿಕ್, ಕಸ,ಕಡ್ಡಿ ತುಂಬಿ ನೀರು ಹರಿಯದೆ ನಿಂತು ದುರ್ವಾಸನೆ ಬೀರುತ್ತಿದೆ. ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಮಳೆ ಬಂದರಂತೂ ಸಮಸ್ಯೆ ಮತ್ತಷ್ಟು ಹೆಚ್ಚಾಗಿ ಮಳೆ ನೀರು ಚರಂಡಿಯಲ್ಲಿ ಹರಿಯದೆ ರಸ್ತೆಯ ಮೇಲೆ ಹರಿದು ಚರಂಡಿಯಲ್ಲಿನ ಕಸಕಡ್ಡಿಯಲ್ಲಾ ರಸ್ತೆಯ ಮೇಲೆ ಬಂದು ಬೀಳಲಿದೆ ಎಂದು ಇಲ್ಲಿನ ನಿವಾಸಿ ಪ್ರಸನ್ನನಾಯಕ್ ದೂರಿದ್ದಾರೆ.
ಗ್ರಾಮದಲ್ಲಿನ ಚರಂಡಿಗಳು ಶಿಥಿಲವಾಗಿದ್ದು ಅವುಗಳ ದುರಸ್ಥಿಕಾರ್ಯವಾಗಬೇಕು ಹಾಗೂ ಆಶುದ್ದ ನೀರು ಹೋಗುವ ಚರಂಡಿ ಗ್ರಾಮದಿಂದ ಪೂಜಾರು ಗೋವಿಂದಪ್ಪನವರ ಮನೆಯ ಮುಂದಕ್ಕೆ ಕೊನೆಗೊಂಡಿದ್ದು ಅಲ್ಲಿಂದ ಮುಂದೆ ಹೋಗುವಂತೆ ಚರಂಡಿ ನಿರ್ಮಿಸುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ