ಹುಳಿಯಾರು ಸಮೀಪದ ಬೋರನಕಣಿವೆ ಜಯಚಂದ್ರನಗರದ ಸಾಯಿಬಾಬ ಮಂದಿರದಲ್ಲಿ ಸೋಮವಾರ ಬುದ್ದಪೂರ್ಣಿಮೆ ಅಂಗವಾಗಿ ಅರ್ಚನೆ ಹಾಗೂ ವಿಶೇಷ ಪೂಜೆ ನೆರವೇರಿಸಲಾಯಿತು.
ಜಯಚಂದ್ರನಗರದ ಸಾಯಿಬಾಬ ಮಂದಿರದಲ್ಲಿ ನಡೆದ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿದ್ದ ಭಕ್ತಾಧಿಗಳು. |
ಅರ್ಚಕ ನಂಜುಂಡರಾವ್ ಹಾಗೂ ರವಿಕುಮಾರ್ ಅವರ ಪೌರೋಹಿತ್ಯದಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಸಾಯಿಬಾಬನಿಗೆ ಕಾಕಡಾರತಿ, ಧೂಪದಾರತಿ ನಡೆದು ಮಹಾಮಂಗಳಾರತಿ ನಂತರ ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ತಿಪಟೂರು ಉಪವಿಭಾಗಾಧಿಕಾರಿ ಪ್ರಜ್ಞ ಅಂಬಳೆ , ಟ್ರಸ್ಟ್ ನ ವಿಠಲ್, ಮಾಜಿ.ತಾ.ಪಂ.ಸದಸ್ಯ ರುದ್ರೇಶ್,ದಬ್ಬಗುಂಟೆ ಶ್ರೀನಿವಾಸ್,ಅನ್ನದಾನ ಬಸ್ ಮಾಲೀಕ ರಂಗನಾಥ್ ಪ್ರಸಾದ್ ಸೇರಿದಂತೆ ಇನ್ನಿತರರು ಆಗಮಿಸಿದ್ದರು.
ಹುಳಿಯಾರಿನ ಬನಶಂಕರಿ ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ಅರ್ಚಕ ಶ್ರೀಧರ್ ನೇತೃತ್ವದಲ್ಲಿ ಸತ್ಯನಾರಾಯಣ ಪೂಜೆ ನಡೆದು ಪ್ರಸಾದವಿತರಿಸಲಾಯಿತು. ಈ ವೇಳೆ ಸಮಿತಿಯ ಅನಂತ್ ಕುಮಾರ್, ದಾಸಪ್ಪ ಸೇರಿದಂತೆ ದೇವಾಂಗ ಸಮಾಜದ ಭಕ್ತಾಧಿಗಳು ಉಪಸ್ಥಿತರಿದ್ದು ಅಮ್ಮನವರ ದರ್ಶನ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ