ಹುಳಿಯಾರು ಗ್ರಾಮ ಪಂಚಾಯ್ತಿಯಲ್ಲಿ ಕಳೆದ ಐದು ವರ್ಷದಿಂದ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿದ ಅಧ್ಯಕ್ಷರು ಹಾಗೂ ಸದಸ್ಯರುಗಳಿಗೆ ಗ್ರಾ.ಪಂವತಿಯಿಂದ. ಪ್ರಭಾರ ಪಿಡಿಓ ಅಡವೀಶ್ ಕುಮಾರ್ ಸೋಮವಾರ ಬೀಳ್ಕೊಡುಗೆ ಸಮಾರಂಭ ನಡೆಸಿದರು.
ಹುಳಿಯಾರು ಗ್ರಾ.ಪಂ.ನಲ್ಲಿ ನಡೆದ ಸದಸ್ಯರ ಬೀಳ್ಕೊಡುಗೆ ಸಮಾರಂಭ. |
ಗ್ರಾಮ ಪಂಚಾಯ್ತಿ ಚುನಾವಣೆ ಘೋಷಣೆಯಾಗಿದ್ದು ಹುಳಿಯಾರು ಗ್ರಾ.ಪಂ.ನಲ್ಲಿ ೨೦೧೦-೧೧ ನೇ ಸಾಲಿನಿಂದ ೨೦೧೪-೧೫ರ ಐದು ವರ್ಷದವರೆಗೆ ಕಾರ್ಯ ನಿರ್ವಹಿಸುತ್ತಿದ್ದ ಎಲ್ಲಾ ೩೩ ಮಂದಿ ಚುನಾಯಿತ ಸದಸ್ಯರುಗಳ ಅಧಿಕಾರವಧಿ ಮುಗಿದ ಹಿನ್ನಲೆಯಲ್ಲಿ ಈ ಅವಧಿಯಲ್ಲಿ ನಡೆದ ಸಾಧನೆ ಹಾಗೂ ಅಭಿವೃದ್ದಿ ಬಗ್ಗೆ ಪರಾಮರ್ಶೆ ಮಾಡಲಾಯಿತು. ಸಾರ್ವಜನಿಕ ಹಿತಾದೃಷ್ಠಿಯಿಂದ ಪಕ್ಷಭೇದ ಮರೆತು ಗ್ರಾಮದ ಅಭಿವೃದ್ದಿಗೆ ಸ್ಪಂದಿಸಿದ ಸದಸ್ಯರುಗಳನ್ನು ಹಾಗೂ ಸಿಬ್ಬಂದಿ ವರ್ಗದವರನ್ನು ಈ ಸಮಯದಲ್ಲಿ ಅಭಿನಂದಿಸಲಾಯಿತು. ಇದೇ ಸಮಯದಲ್ಲಿ ಸದಸ್ಯರುಗಳಾದ ಧನುಷ್ ರಂಗನಾಥ್, ಜಹೀರ್ ಉಲ್ಲಾ ಮಾತನಾಡಿ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಸಹಕರಿಸಿದ ಪ್ರಭಾರ ಪಿಡಿಓ ಅಡವೀಶ್ ಕುಮಾರ್ ಅವರನ್ನು ಶ್ಲಾಘಿಸಿದರು.
ಗ್ರಾ.ಪಂ. ಅಧ್ಯಕ್ಷೆ ಕಾಳಮ್ಮ, ಉಪಾಧ್ಯಕ್ಷೆ ಅಬೀದುನ್ನಿಸಾ, ಮಾಜಿ ಅಧ್ಯಕ್ಷರುಗಳಾದ ಅನ್ಸರ್ ಆಲಿ,ಪುಟ್ಟಿಬಾಯಿ, ಮಾಜಿ ಉಪಾಧ್ಯಕ್ಷೆ ವೆಂಕಟಮ್ಮ, ಸದಸ್ಯರಾದ ಅಶೋಕ್ ಬಾಬು, ಗೀತಾಬಾಬು, ರಾಘವೇಂದ್ರ,ಶಿವಕುಮಾರ್, ಬಡ್ಡಿಪುಟ್ಟರಾಜು, ಡಿಶ್ ಬಾಬು,ರೇವಣ್ಣ,ಬಾಲರಾಜ್ ಸೇರಿದಂತೆ ಇತರ ಸದಸ್ಯರು ಹಾಗೂ ಗ್ರಾ.ಪಂ. ಸಿಬ್ಬಂದಿ ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ