ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ಹೊನ್ನಪ್ಪ( ಕಲ್ಲೇಶ್) ಹೋಬಳಿ ಕೆಂಕೆರೆ ಗ್ರಾಮ ಪಂಚಾಯತಿ ಚುನಾವಣಾ ಕಣದಲ್ಲಿ ಸ್ಪರ್ಧಿಸುವ ಮೂಲಕ ಗಮನಸೆಳೆದಿದ್ದಾರೆ.
ಕೆಂಕೆರೆಯ ೨ ನೇ ಬ್ಲಾಕ್ ನ ಸಾಮಾನ್ಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಈತ ಕಳೆದ ಗ್ರಾ.ಪಂ.ಚುನಾವಣೆಯಲ್ಲೂ ಸಹ ಇದೇ ಬ್ಲಾಕ್ ನಿಂದಲೇ ಸ್ಪರ್ಧಿಸಿದ್ದು ಪರಾಜಿತರಾಗಿದ್ದರು. ಕಳೆದ ಚುನಾವಣೆಯ ಅನುಭವದ ಹಿನ್ನಲೆಯಲ್ಲಿ ಈ ಬಾರಿ ಮತ್ತೆ ಸ್ಪರ್ಧಿಸಿದ್ದು ಹೆಚ್ಚಿನ ಸ್ನೇಹಿತರ ಬೆಂಬಲದಿಂದ ಗೆಲ್ಲುವ ಭರವಸೆ ಹೊಂದಿದ್ದಾರೆ. ಈತ ಎಬಿವಿಪಿಯ ಸಂಚಾಲಕನಾಗಿದ್ದು ಹಲವು ಹೋರಾಟಗಳಲ್ಲಿ ಪಾಲ್ಗೊಂಡಿದ್ದರಲ್ಲದೆ ಮಹಾತ್ಮಗಾಂಧಿ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿಗಳಲ್ಲಿನ ಅವ್ಯವಹಾರದ ಬಗ್ಗೆ ಧ್ವನಿಎತ್ತಿದ್ದರು. ಮತದಾರರಿಗೆ ಯಾವುದೇ ಆಮಿಷವೊಡ್ಡದೆ ಮತಯಾಚನೆ ಮಾಡುತ್ತಿದ್ದು ಮತದಾರರು ತಮ್ಮನ್ನು ಒಪ್ಪಿ ಚುನಾಯಿಸುತ್ತಾರೆಂಬ ನಂಬಿಕೆಯಿದೆ ಎನ್ನುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ