ರಾಜ್ಯದ ಪ್ರತಿ ಹಳ್ಳಿಹಳ್ಳಿಗಳಲ್ಲೂ ಕುರಿ ಸಂಘಗಳನ್ನು ಮಾಡುವ ಮೂಲಕ ರಾಜ್ಯಾದ್ಯಂತ ಸಂಘಗಳನ್ನು ರಚಿಸಿಕೊಂಡು ಹಾಲು ಒಕ್ಕೂಟದ ರೀತಿ ಫೆಡರೇಷನ್ ಮಾಡಿ ಕುರಿ ಸಾಕಾಣಿಕೆಗೆ ಉತ್ತೇಜನ ನೀಡುವುದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಗುರಿಯಾಗಿದೆ ಎಂದು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಂಡಿತ್ ರಾವ್ ಛಿದ್ರಿ ತಿಳಿಸಿದರು.
ಹುಳಿಯಾರು ಹೋಬಳಿ ಕೆಂಕೆರೆಗೊಲ್ಲರಹಟ್ಟಿಯಲ್ಲಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ಪಶುಪಾಲನಾ ಇಲಾಖೆ, ಕುರಿ ಮತ್ತು ಉಣ್ಣೆ ನಿಗಮದಿಂದ ಬರಡು ರಾಸುಗಳ, ಕುರಿ ಮತ್ತು ಮೇಕೆಗಳಿಗೆ ಉಚಿತ ರೋಗನಿರೋಧಕ ಲಸಿಕೆ ಹಾಗೂ ಜಂತುನಾಶಕ ಔಷಧಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಳ್ಳಿಗಳಲ್ಲಿ ಈಗಾಗಲೇ ಇರುವ ಸಂಘಗಳಿಗೆ ಸಹಾಯಧನವಾಗಿ 5 ಲಕ್ಷ ರೂ. ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ 10 ಲಕ್ಷಕ್ಕೆ ಏರಿಸುವ ಹಾಗೂ ಸಂಘಗಳ ಸದಸ್ಯರಿಗೆ ಉಚಿತವಾಗಿ ಕುರಿ, ಮೇಕೆ ಕೊಡುವ ಮೂಲಕ ಅರ್ಥಿಕವಾಗಿ ಅಭಿವೃದ್ದಿಗೊಳಿಸುವ ಧ್ಯೇಯ ಹೊಂದಿರುವುದಾಗಿ ತಿಳಿಸಿದರು. ಇಂದಿನ ಆಧುನಿಕ ಯುಗದಲ್ಲಿಯೂ ಸಹ ಕುರಿ,ಮೇಕೆಗಳನ್ನು ಜಾತ್ರೆ, ಸಂತೆಗಳಲ್ಲಿ ತಮ್ಮ ಹಿಂದಿನ ಪದ್ದತಿಯಂತೆ ಅವೈಜ್ಞಾನಿಕವಾಗಿ ಮಾರುವ ಮೂಲಕ ಮಧ್ಯವರ್ತಿಗಳು ಲಾಭ ಪಡೆಯುತ್ತಿದ್ದಾರೆ. ಇದರ ಬದಲು ಕುರಿ,ಮೇಕೆಗಳನ್ನು ಅವುಗಳ ತೂಕದ ಆಧಾರದ ಮೇಲೆ ಮಾರಾಟ ಮಾಡುವ ವ್ಯವಸ್ಥೆ ರೂಪಿಸುವ ಮೂಲಕ ಕುರಿ ಸಾಕಣೆದಾರರಿಗೆ ಅನುಕೂಲ ಕಲ್ಪಿಸುವುದಾಗಿ ತಿಳಿಸಿದರು.
ಚಿಕ್ಕನಾಯಕನಹಳ್ಳಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ಗೋವಿಂದಯ್ಯ, ರೈತ ಸಂಘದ ಗೌರವಾಧ್ಯಕ್ಷ ಲಿಂಗರಾಜು, ಗಾಯಕ ಕೆಂಕೆರೆ ಮಲ್ಲಿಕಾರ್ಜುನ್ ಮಾತನಾಡಿದರು.
ಪಶು ಪಾಲನಾ ಇಲಾಖೆ ಉಪನಿರ್ದೆಶಕ ಡಾ.ರಾಜಶೇಖರ್, ತುಮಕೂರು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೆಶಕ ಡಾ.ಮಿಜಾì ಬಶೀರ್, ಡಾ.ಶಶಿಕುಮಾರ್, ಡಾ.ಸಂಜಯ್, ಡಾ.ಕಾಂತರಾಜು,ಗೊಲ್ಲರಹಟ್ಟಿ ಕೋಟ್ರೇಶ್, ಭಟ್ಟರಹಳ್ಳಿ ರಾಮಚಂದ್ರ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ