ಆಟೋ ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಆಟೋದಲ್ಲಿದ್ದ ಮೂವರಿಗೆ ತೀವ್ರ ಗಾಯಗಳಾಗಿರುವ ಘಟನೆ ಹೋಬಳಿ ದಸೂಡಿ ಸಮೀಪದ ಮರೆನಡುಪಾಳ್ಯದ ಬಳಿ ಗುರುವಾರ ಮಧ್ಯಾಹ್ನ ೧೨ರ ಸಮಯದಲ್ಲಿ ಘಟಿಸಿದೆ.
ಆಟೋ-ಟ್ರ್ಯಾಕ್ಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರು ದಸೂಡಿ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಾಗಿತ್ತು. |
ದಸೂಡಿಯಿಂದ ಹೊಯ್ಸಳಕಟ್ಟೆಗೆ ಮರೆನಡು ಮಾರ್ಗವಾಗಿ ಬರುತ್ತಿದ್ದ ಆಟೋ ಮರೆನಡುಪಾಳ್ಯದ ಸಮೀಪದ ರಸ್ತೆ ತಿರುವಿನಲ್ಲಿ ಎದುರಿನಿಂದ ಬಂದ ಟ್ಯ್ರಾಕ್ಟರ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಆಟೋದಲಿದ್ದ ಶೇಷಪ್ಪನಹಳ್ಳಿಯ ರೇವಣ್ಣ ಹಾಗೂ ಮಾರಕ್ಕ ,ಬಲ್ಲಪ್ಪನಹಳ್ಳಿಯ ಜಯಮ್ಮ ಎಂಬುವರಿಗೆ ಕೈಕಾಲು, ತಲೆ ಹಾಗೂ ಮುಖದ ಭಾಗದಲ್ಲಿ ತೀವ್ರಗಾಯಗಳಾಗಿವೆ. ಇವರೊಂದಿಗೆ ಆಟೋದಲಿದ್ದ ಎಂಟು ಮಂದಿಗೆ ಸಣ್ಣಪುಟ್ಟಗಾಯಗಳಾಗಿವೆ. ಆಟೋಚಾಲಕ ಪರಾರಿಯಾಗಿದ್ದಾನೆ.
ಗಾಯಗೊಂಡವರನ್ನು ಸ್ಥಳೀಯರೆಲ್ಲಾ ಸೇರಿ ದಸೂಡಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರಾದರೂ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಪರದಾಡುವಂತಾಗಿ ನಂತರ ಮಧ್ಯಾಹ್ನ ೨ ಗಂಟೆ ವೇಳೆಗೆ ಹುಳಿಯಾರಿನ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಮಾಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು.
ಸಾರ್ವಜನಿಕರ ಅಕ್ರೋಶ : ದಸೂಡಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಇಲ್ಲಿಗೆ ಬರುವ ರೋಗಿಗಳು ಪರದಾಡುವಂತಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಡಿಎಚ್ ಓ ಅವರು ಶೀಘ್ರವೇ ಗಮನಹರಿಸಿ ಖಾಯಂ ವೈದ್ಯರನ್ನು ನೇಮಕ ಮಾಡುವ ಮೂಲಕ ಈ ಭಾಗದ ಜನರ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ