ಸ್ಥಳೀಯ ಗ್ರಾಮ ಪಂಚಾಯ್ತಿ ಚುನಾವಣೆಗೆ ದಿನಗಣನೆ ನಡೆಯುತ್ತಿದ್ದು ಚುನಾವಣಾ ಕಾವು ಹೆಚ್ಚಾಗಿರುವುದು ಪಟ್ಟಣದೆಲ್ಲೆಡೆ ಕಂಡುಬರುತ್ತಿದೆ.
![]() |
ಹುಳಿಯಾರಿನಲ್ಲಿ ಗ್ರಾ.ಪಂ. ಚುನಾವಣೆ ಕಾವು ಹೆಚ್ಚಿದ್ದು, ನಾಮಪತ್ರ ಸಲ್ಲಿಸಲು ಹೆಚ್ಚು ಜನ ಪಂಚಾಯ್ತಿಯಲ್ಲಿಗೆ ಆಗಮಿಸಿರುವುದು. |
ಪಟ್ಟಣದ ೧೩ ಬ್ಲಾಕ್ ಗಳಿಗೆ ೩೯ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು ಹೆಚ್ಚು ಜನ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಲು ಮುಗಿಬಿದಿದ್ದಾರೆ. ನಾಮಪತ್ರ ಅರ್ಜಿ ವಿತರಣೆಯ ಪ್ರಾರಂಭದ ದಿನವೇ ಸುಮಾರು ೬೦ ರಿಂದ ೭೦ ಮಂದಿ ನಾಮಪತ್ರದ ಅರ್ಜಿಗಳನ್ನು ಪಡೆದಿದ್ದು. ಪ್ರಾರಂಭದ ದಿನ ೩ ನಾಮಪತ್ರ ಸಲ್ಲಿಕೆಯಾಗಿದ್ದು ನಂತರದ ದಿನೇ ದಿನೇ ನಾಮಪತ್ರ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದ್ದು ಬುಧವಾರ ಒಂದೇ ದಿನ ೬೫ ನಾಮಪತ್ರಗಳು ಸಲ್ಲಿಕೆಯಾಗಿವೆ. ಕೆಲ ಅಭ್ಯರ್ಥಿಗಳು ಒಬ್ಬರೇ ಬಂದು ನಾಮಪತ್ರ ಸಲ್ಲಿಸಿದರೆ ಕಳೆದ ಬಾರಿ ಸದಸ್ಯರಾಗಿದ್ದವರು ಈ ಬಾರಿಯೂ ನಾಮಪತ್ರ ಸಲ್ಲಿಸಲು ತಮ್ಮ ನೂರಾರು ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.
ಈ ಬಾರಿ ಹುಳಿಯಾರು ಪಟ್ಟಣ ಪಂಚಾಯ್ತಿಯಾಗುತ್ತದೆ ಎಂದುಕೊಂಡು ಕೆಲವರು ಚುನಾವಣೆಯ ಸಹವಾಸ ಬೇಡ ಎಂದುಕೊಂಡವರು ಸಹ ಪ.ಪಂ. ಆಗಿಲ್ಲ ಈ ಬಾರಿಯೂ ಗ್ರಾ.ಪಂ. ಆಗಿಯೇ ಇರುತ್ತದೆ ಎಂದು ನಾಮುಂದು ತಾಮುಂದು ಎಂದು ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಕೆಲವರು ಚುನಾವಣ ಪಕ್ಷಗಳ ಹೆಸರನ್ನೇಳಿಕೊಂಡು ಮತ ಪಡೆಯುವ ಉಪಾಯ ಮಾಡಿದರೆ, ಮತ್ತೆ ಕೆಲವರು ಸ್ವಂತ ಬಲ ಹಾಗೂ ಅಭಿವೃದ್ದಿಯ ನಿಲುವುಹೇಳಿಕೊಂಡು ಮತಯಾಚನೆಗೆ ತೊಡಗಿದ್ದಾರೆ. ಎಲ್ಲಾ ಅಭ್ಯರ್ಥಿಗಳು ಈಗಾಗಲೇ ಒಂದು ಬಾರಿ ಮತದಾರರ ಮನೆಗಳಿಗೆ ಎಡತಾಕಿದ್ದಾರೆ.
ಕೆಲ ವಾರ್ಡ್ ಗಳ ಮೂರ್ನಾಲ್ಕು ಅಭ್ಯರ್ಥಿಗಳು ತಮ್ಮದೇ ಗುಂಫು ಮಾಡಿಕೊಂಡು ಒಟ್ಟಾಗಿ ಹೋಗಿ ಮತಯಾಚನೆ ಮಾಡಲು ಮಂದಾಗಿದ್ದಾರೆ.
ಪಂಚಾಯ್ತಿಯ ೩೯ ಸ್ಥಾನಗಳಿಗೆ ಐದಾರುಪಟ್ಟು ಹೆಚ್ಚು ಅಭ್ಯರ್ಥಿಗಳು ಸ್ಪರ್ಧೆಗೆ ಮುಂದಾಗಿ ನಾಮಪತ್ರಗಳನ್ನು ಸಲ್ಲಿಸಿದ್ದಾರಲ್ಲದೆ ಗೆಲ್ಲಬೇಕೆಂಬ ಹಂಬಲ ಹೊಂದಿ ನಾನಾ ರೀತಿಯಲ್ಲಿ ಮತಯಾಚನೆಗೆ ಮುಂದಾಗಿದ್ದಾರೆ. ಕಳೆದ ಸಾಲಿನಲ್ಲಿ ಸದಸ್ಯರಾಗಿ ಈ ಬಾರಿಯೂ ಅರ್ಜಿ ಹಾಕಿರುವವರಿಗೆ ಈ ಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ