ರಾಜ್ಯಾದ್ಯಂತ ಎರಡು ಹಂತದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯಲಿದ್ದು ವಿವಿಧ ಪಂಚಾಯ್ತಿ ವ್ಯಾಪ್ತಿಯ ಮೀಸಲಾತಿ ಪಟ್ಟಿ ಕೂಡ ಪ್ರಕಟವಾಗಿದೆ. ಹುಳಿಯಾರು ಹೋಬಳಿಯಲ್ಲಿ ೨ ನೇ ಹಂತದ ಮತದಾನದ ದಿನವಾದ ಜೂನ್ ೨ ರಂದು ಚುನಾವಣೆ ನಡೆಯಲಿದೆ.
ಜಿಲ್ಲೆಯ ಅತಿದೊಡ್ಡ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆಯ ಹುಳಿಯಾರು ಪಂಚಾಯ್ತಿಯಲ್ಲಿ ಸ್ಥಾನಗಳ ಹಂಚಿಕೆ ಹಾಗೂ ಮೀಸಲಾತಿ ಪಟ್ಟಿ ಹೀಗಿದೆ
ಹುಳಿಯಾರು ಗ್ರಾ.ಪಂ.ನ ೧೩ ಬ್ಲಾಕ್ ಗಳಲ್ಲಿ ಈ ಹಿಂದೆ ೩೩ ಸ್ಥಾನಗಳಿದ್ದು ಈ ಬಾರಿ ಆ ಸ್ಥಾನಗಳನ್ನು ಹೆಚ್ಚಿಸಲಾಗಿದ್ದು ಒಟ್ಟು ೩೯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ೧ನೇ ವಾರ್ಡ್ ನಲ್ಲಿ ೨ ಸ್ಥಾನ, ೨ನೇ ವಾರ್ಡ್ ನಲ್ಲಿ ೨ ಸ್ಥಾನ,೩ನೇ ವಾರ್ಡ್ ನಲ್ಲಿ ೩ ಸ್ಥಾನ,೪ನೇ ವಾರ್ಡ್ ನಲ್ಲಿ ೨ ಸ್ಥಾನ, ೫ನೇ ವಾರ್ಡ್ ನಲ್ಲಿ ೪ ಸ್ಥಾನ, ೬ನೇ ವಾರ್ಡ್ ನಲ್ಲಿ ೩ ಸ್ಥಾನ, ೭ನೇ ವಾರ್ಡ್ ನಲ್ಲಿ ೩ ಸ್ಥಾನ, ೮ನೇ ವಾರ್ಡ್ ನಲ್ಲಿ ೪ ಸ್ಥಾನ, ೯ ನೇ ವಾರ್ಡ್ ನಲ್ಲಿ ೪ ಸ್ಥಾನ, ೧೦ನೇ ವಾರ್ಡ್ ನಲ್ಲಿ ೪ ಸ್ಥಾನ, ೧೧ನೇ ವಾರ್ಡ್ ನಲ್ಲಿ ೨ ಸ್ಥಾನ, ೧೨ನೇ ವಾರ್ಡ್ ನಲ್ಲಿ ೨ ಸ್ಥಾನ, ೧೩ನೇ ವಾರ್ಡ್ ನಲ್ಲಿ ೪ ಸ್ಥಾನಗಳಂತೆ ಹಂಚಿಕೆಯಾಗಿದೆ.
ಹುಳಿಯಾರು ೧ : ಎಸ್.ಸಿ , ಸಾಮಾನ್ಯ , ಹುಳಿಯಾರು ೨ : ಸಾಮಾನ್ಯ , ಬಿಸಿಎಂ-ಎ ಮಹಿಳೆ, ಹುಳಿಯಾರು ೩ : ಎಸ್.ಸಿ ಮಹಿಳೆ, ಬಿಸಿಎಂ-ಎ ಮಹಿಳೆ, ಸಾಮಾನ್ಯ ಮಹಿಳೆ,ಹುಳಿಯಾರು ೪: ಬಿಸಿಎಂ-ಎ , ಸಾಮಾನ್ಯ ,ಹುಳಿಯಾರು:೫ ಎಸ್ ಟಿ ಮಹಿಳೆ, ಬಿಸಿಎಂ-ಎ, ಬಿಸಿಎಂ-ಎ ಮಹಿಳೆ, ಸಾಮಾನ್ಯ ಮಹಿಳೆ, ಹುಳಿಯಾರು ೬: ಬಿಸಿಎಂ-ಎ , ಸಾಮಾನ್ಯ ಮಹಿಳೆ, ಸಾಮಾನ್ಯ, ಹುಳಿಯಾರು ೭: ಬಿಸಿಎಂ-ಎ, ಸಾಮಾನ್ಯ, ಸಾಮಾನ್ಯ ಮಹಿಳೆ, ಹುಳಿಯಾರು ೮: ಸಾಮಾನ್ಯ, ಸಾಮಾನ್ಯ ಮಹಿಳೆ, ಬಿಸಿಎಂ-ಎ ಮಹಿಳೆ, ಬಿಸಿಎಂ-ಬಿ ಮಹಿಳೆ, ಹುಳಿಯಾರು ೯: ಬಿಸಿಎಂ-ಎ, ಬಿಸಿಎಂ-ಬಿ, ಸಾಮಾನ್ಯ, ಸಾಮಾನ್ಯ ಮಹಿಳೆ, ಹುಳಿಯಾರು ೧೦ ; ಎಸ್.ಸಿ.ಮಹಿಳೆ, ಬಿಸಿಎಂ-ಎ ಮಹಿಳೆ, ಸಾಮಾನ್ಯ, ಸಾಮಾನ್ಯ ಮಹಿಳೆ, ಹುಳಿಯಾರು ೧೧ : ಸಾಮಾನ್ಯ,ಸಾಮಾನ್ಯ ಮಹಿಳೆ, ಹುಳಿಯಾರು ೧೨ : ಬಿಸಿಎಂ-ಎ, ಸಾಮಾನ್ಯ ಮಹಿಳೆ, ಹುಳಿಯಾರು ೧೩ : ಬಿಸಿಎಂ-ಎ ಮಹಿಳೆ, ಬಿಸಿಎಂ-ಬಿ ಮಹಿಳೆ, ಸಾಮಾನ್ಯ ೨ ಸ್ಥಾನಗಳನ್ನು ಮೀಸಲಿರಿಸಲಾಗಿದೆ.
ಹೋಬಳಿ ವ್ಯಾಪ್ತಿಯ ದಸೂಡಿ, ಹೊಯ್ಸಳಕಟ್ಟೆ, ಗಾಣಧಾಳು, ಕೆಂಕೆರೆ,ಯಳನಡು, ಕೋರಗೆರೆ,ದೊಡ್ಡಬಿದರೆ, ಬರಕನಹಾಲ್ ಹಾಗೂ ಹಂದನಕೆರೆ ಹೋಬಳಿಯ ದೊಡ್ಡಎಣ್ಣೆಗೆರೆ, ಹಂದನಕೆರೆ, ಚೌಳಕಟ್ಟೆ,ತಿಮ್ಲಾಪುರ ಪಂಚಾಯ್ತಿಗಳ ಸ್ಥಾನ ಹಂಚಿಕೆ ಇಂತಿದೆ.
ದಸೂಡಿ : ಒಟ್ಟು ೬ ಬ್ಲಾಕ್ ಗೆ ೨೦ ಸ್ಥಾನ, ಹೊಯ್ಸಳಕಟ್ಟೆ : ಒಟ್ಟು ೮ ಬ್ಲಾಕ್ ಗೆ ೨೦ ಸ್ಥಾನ, ಗಾಣದಾಳು : ಒಟ್ಟು ೭ ಬ್ಲಾಕ್ ಗೆ ೧೯ ಸ್ಥಾನ, ಕೆಂಕೆರೆ : ಒಟ್ಟು ೫ ಬ್ಲಾಕ್ ಗೆ ೧೭ ಸ್ಥಾನ, ಯಳನಡು : ಒಟ್ಟು ೬ ಬ್ಲಾಕ್ ಗೆ ೧೭ ಸ್ಥಾನ, ಕೋರಗೆರೆ : ಒಟ್ಟು ೭ ಬ್ಲಾಕ್ ಗೆ ೧೫ ಸ್ಥಾನ, ದೊಡ್ಡಎಣ್ಣೇಗೆರೆ : ಒಟ್ಟು ೧೦ ಬ್ಲಾಕ್ ಗೆ ೨೧ ಸ್ಥಾನ, ಹಂದನಕೆರೆ : ಒಟ್ಟು ೭ ಬ್ಲಾಕ್ ಗೆ ೧೮ ಸ್ಥಾನ, ಚೌಳಕಟ್ಟೆ : ಒಟ್ಟು ೬ ಬ್ಲಾಕ್ ಗೆ ೧೫ ಸ್ಥಾನ, ತಿಮ್ಲಾಪುರ : ಒಟ್ಟು ೭ ಬ್ಲಾಕ್ ಗೆ ೧೭ ಸ್ಥಾನ, ದೊಡ್ಡಬಿದರೆ : ಒಟ್ಟು ೮ ಬ್ಲಾಕ್ ಗೆ ೧೭ ಸ್ಥಾನ,ಬರಕನಹಾಲ್ : ಒಟ್ಟು ೭ ಬ್ಲಾಕ್ ಗೆ ೧೬ ಸ್ಥಾನಗಳು ಹಂಚಿಕೆಯಾಗಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ