ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಬಿತ್ತನೆ ಬೀಜ ವಿತರಿಸಲಾಗುತ್ತಿದ್ದು ಸದ್ಯ ಹುಳಿಯಾರಿನ ರೈತ ಸಂಪರ್ಕ ಕೇಂದ್ರದಲ್ಲಿ ಅಲಸಂದೆ, ಜೋಳವನ್ನು ಮಾತ್ರ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ.
ಈ ಹಂಗಾಮಿಗೆ ಬೇಕಾದ ಬಿತ್ತನೆಬೀಜ, ಗೊಬ್ಬರದ ಪೂರೈಕೆಗೆ ಕ್ರಮ ಕೈಗೊಂಡಿದ್ದರು ಸಹ ಕೆಲವೊಂದು ಬಿತ್ತನೆಬೀಜದ ಕೊರತೆ ಹುಳಿಯಾರು ರೈತ ಸಂಪರ್ಕ ಕೇಂದ್ರದಲ್ಲಿ ಉಂಟಾಗಿದೆ.
ಈಗಾಗಲೇ ೩೫ ಕ್ವಿಂಟಾಲ್ ಹೆಸರುಕಾಳು ೪೦೪ ರೈತರಿಗೆ , ೩೭೫ ಕೆಜಿಯಷ್ಟು ತೊಗರಿ ೭೦ ಜನ ರೈತರಿಗೆ ಹಾಗೂ ಜೋಳ ೧೧೧ ಕೆಜಿ, ಅಲಸಂದೆ ೧೧೦ ಕೆಜಿ ವಿತರಿಸಲಾಗಿದೆ. ಸದ್ಯ ಅಲಸಂದೆ (ಸಿ-೧೫೨) ೫ ಕೆಜಿ ಚೀಲಕ್ಕೆ ಸಹಾಯಧನ ಕಳೆದು ರೈತರ ಬಾಬ್ತು ೨೨೫ರೂಪಾಯಿ ಹಾಗೂ ಜೋಳ ೩ಕೆಜಿಗೆ ೯೦ರೂಪಾಯಿಯಂತೆ ನೀಡಲಾಗುತ್ತಿದೆ. ಕೀಟನಾಶಕ ಸೇರಿದಂತೆ ರೈತರ ಕೃಷಿ ಚಟುವಟಿಕೆಗೆ ಅನುಕೂಲವಾಗುವ ಕಲ್ಟಿವೇಟರ್, ನೇಗಿಲು,ಪವರ್ ಸ್ಪೇಯರ್ ಇನ್ನಿತರ ಉಪಕರಣಗಳು ಲಭ್ಯವಿದ್ದು ರೈತರು ಖರೀದಿಸಬಹುದಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಹುಳಿಯಾರು ಹೋಬಳಿ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆ ಜರುಗುತ್ತಿದ್ದು ಇಲಾಖೆಯಲ್ಲಿ ಬಿತ್ತನೆ ಬೀಜದ ಕೊರತೆ ಕಂಡುಬಂದಿದೆ. |
ಈ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಬಿತ್ತನೆಬೀಜ, ಗೊಬ್ಬರ ಕೊರತೆಯಿಲ್ಲ ಎಂದು ಕೃಷಿ ಇಲಾಖೆಯವರು ಹೇಳುತ್ತರಾದರೂ ರೈತರಿಗೆ ಅಗತ್ಯ ಬೇಕಾದ ಹೆಸರು ಹಾಗೂ ತೊಗರಿ ಕೂಡ ಇಲ್ಲಿ ಲಭ್ಯವಿಲ್ಲ , ಬಿತ್ತನೆ ಬೀಜದ ಹೆಸರುಕಾಳು ಪಡೆಯಲು ರೈತರು ರೈತ ಸಂಪರ್ಕ ಕೇಂದ್ರದಲ್ಲಿಗೆ ಆಗಮಿಸಿದ್ದು ದಾಸ್ತಾನು ಇಲ್ಲದನ್ನು ಕೇಳಿ ಯಾವಾಗ ಬರುತ್ತದೆ, ಶೀಘ್ರವೇ ತರಿಸುವಂತೆ ಅಧಿಕಾರಿಗಳನ್ನು ಕೇಳಿಕೊಂಡು ವಾಪಸ್ಸಾಗುತ್ತಿದ್ದು ಸಹ ಕಂಡುಬಂತು.ಕೃಷಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ