ಹುಳಿಯಾರು ಪಟ್ಟಣದ ಶ್ರೀಜ್ಞಾನಜ್ಯೋತಿ ವಿದ್ಯಾಸಂಸ್ಥೆಯ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ತನ್ನ ಮೊದಲನೇ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.೧೦೦ ರಷ್ಟು ಫಲಿತಾಂಶ ಬಂದಿದೆ.
ಶಾಲೆಯ ಒಟ್ಟು ೨೦ ವಿದ್ಯಾರ್ಥಿಗಳ ಪೈಕಿ ಎಲ್ಲಾ ವಿದ್ಯಾಥಿಗಳು ತೇರ್ಗಡೆಯಾಗಿದ್ದು ಇಬ್ಬರು ಅತ್ಯುನ್ನತ ಶ್ರೇಣಿಯಲ್ಲಿ, ೧೫ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ೩ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
![]() |
ಜ್ಞಾನಜ್ಯೋತಿ ಶಾಲೆಯ ಪುನಿತಾ , ಹರ್ಷನ್,ಕಾವ್ಯಶ್ರೀ, ದರ್ಶನ್,ನಂದೀಶ್ ,ಕಾರ್ತಿಕ್, |
ಪುನಿತಾ (೫೭೪), ಹರ್ಷನ್(೫೭೧) ಅಂಕಗಳಿಸಿ ಅತ್ಯುತ್ತಮ ಶ್ರೇಣಿ ಪಡೆದರೆ, ಕಾವ್ಯಶ್ರೀ(೫೪೬), ದರ್ಶನ್(೫೨೦),ನಂದೀಶ್(೫೦೮) ಕಾರ್ತಿಕ್(೫೦೫), ಆನಂದ್(೪೮೮), ರಮ್ಯ(೪೭೨),ದೀರಜ್(೪೪೭), ಪವನ್(೪೨೬), ಹರೀಶ್(೪೨೩), ದಿವ್ಯ(೪೧೮),ರುಚಿತಾ(೪೧೭), ತನುಶ್ರೀ(೪೧೧), ಭಾವನ(೪೦೫), ನಾಗರಾಜ(೩೫೬), ಸತೀಶ್(೩೮೩) ಅಂಕಗಳಿಸಿ ಪ್ರಥಮ ಶ್ರೇಣಿಯಲ್ಲಿ ಹಾಗೂ ಲಕ್ಷ್ಮಿ(೩೬೮), ಹಸೀನಾ ಉನ್ನಿಸಾ(೩೬೬), ಅಭಿಷೇಕ್ ಗೌಡ(೩೪೪) ಅಂಕ ಪಡೆಯುವ ಮೂಲಕ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ಮೊದಲ ಬ್ಯಾಚ್ ನಲ್ಲೇ ಶೇ.೧೦೦ ರಷ್ಟು ಫಲಿತಾಂಶ ಬರಲು ಶ್ರಮಿಸಿದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸಂಸ್ಥೆಯ ಅಧ್ಯಕ್ಷ ಶಿವಣ್ಣ ಹಾಗೂ ಕಾರ್ಯದರ್ಶಿ ಸುಧಾ ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ