ಹುಳಿಯಾರು ಸಮೀಪದ ಗೋಪಾಲಪುರದ ಶ್ರೀ ಆಜನೇಯಸ್ವಾಮಿಯ ನೂತನ ದೇವಾಲಯ, ಬಲಮುರಿ ವಿನಾಯಕ ಸ್ವಾಮಿ ದೇವಾಲಯದ ಪ್ರಾರಂಭೋತ್ಸವ ಹಾಗೂ ಧ್ವಜ ಸ್ತಂಭ ಪ್ರತಿಷ್ಠಾಪನೆ, ಮಹಾಕುಂಭಾಷೇಕ ಕಾರ್ಯ ಶುಕ್ರವಾರ ಶ್ರದ್ದಾಭಕ್ತಿಯಿಂದ ನಡೆಯಿತು.
ಹುಳಿಯಾರು ಸಮೀಪದ ಗೋಪಾಲಪುರದ ಆಂಜನೇಯಸ್ವಾಮಿ ದೇವಾಲಯದ ಪ್ರಾರಂಭೋತ್ಸವದ ಅಂಗವಾಗಿ ನಡೆದ ಹೋಮ. |
ಹುಳಿಯಾರು ಸಮೀಪದ ಗೋಪಾಲಪುರದ ಆಂಜನೇಯಸ್ವಾಮಿ ದೇವಾಲಯದ ಧರ್ಮದರ್ಶಿ ವಾಸುದೇವ ರಾವ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. |
ದೇವಾಲಯ ಪ್ರಾರಂಭೋತ್ಸವದ ಅಂಗವಾಗಿ ಗುರುವಾರ ಮುಂಜಾನೆಯಿಂದ ವಿವಿಧ ಪೂಜಾ ಕೈಂಕರ್ಯಗಳು ಪ್ರಾರಂಭಗೊಂಡು, ವೇದ ಪಾರಾಯಣ, ಕಲಶ ಸ್ಥಾಪನೆ, ಸುವಾಸಿನಿ ಪೂಜೆ,ಅಗ್ನಿ ಪ್ರತಿಷ್ಠೆ, ಮಹಾಗಣಪತಿ, ಆದಿತ್ಯಾದಿ ನವಗ್ರಹ ಪುರಸ್ಸರ ಮೃತ್ಯುಂಜಯ ಹೋಮ,ಪವಮಾನ ಹೋಮ, ಬಿಂಬ ಶುದ್ಧಿ,ಜಲಾಧಿವಾಸ, ಕ್ಷೀರಾಧಿವಾಸ, ಧಾನ್ಯಧಿವಾಸದ ನಂತರ ಮಹಾಮಂಗಳಾರತಿ ನಡೆದು ಪ್ರಸಾದ ವಿತರಿಸಲಾಯಿತು.
ಶುಕ್ರವಾರ ಮುಂಜಾನೆ ವೇದಿಕಾರ್ಚನೆ, ತತ್ವನ್ಯಾಸ,ಕಳಾನ್ಯಾಸ ಹೋಮ,ನೇತ್ರೋನ್ಮಿಲನ,ಪ್ರಾಣ ಪ್ರತಿಷ್ಠೆ, ಮಹಾಗಣಪತಿ ಹೋಮ, ಆಂಜನೇಯ ಸ್ವಾಮಿ ಮೂಲಮಂತ್ರ ಹೋಮ, ರಾಮ ತಾರಕ ಹೋಮ ಹಾಗೂ ಪೂರ್ಣಾಹುತಿ ನಡೆಯಿತು. ನಂತರ ಕುಂಭಾಭಿಷೇಕ , ಮಹಾಮಂಗಳಾರತಿ ಹಾಗೂ ಅನ್ನಸಂತರ್ಪಣೆ ನಡೆಸಲಾಯಿತು.
ದೇವಾಲಯ ಪ್ರಾರಂಭೋತ್ಸವಕ್ಕೆ ಲಕ್ಷ್ಮಿಪುರ, ಸೀಗೆಬಾಗಿ,ನಿರುವಗಲ್ ಗ್ರಾಮದ ದೇವರುಗಳನ್ನು ಕರೆದುತಂದಿದ್ದರು, ದೇವಾಲಯದ ಧರ್ಮದರ್ಶಿಗಳಾದ ವಾಸುದೇವ ರಾವ್ ಅವರನ್ನು ಗ್ರಾಮಸ್ಥರೆಲ್ಲಾ ಸೇರಿ ಸನ್ಮಾನಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ