ಹುಳಿಯಾರು ಹೋಬಳಿ ಜೋಡಿತಿರುಮಲಾಪುರದ ಶ್ರೀಕೊಲ್ಲಾಪುರಿ ಮಹಾಲಕ್ಷ್ಮಿ ಅಮ್ಮನವರ ಜಾತ್ರಾ ಮಹೋತ್ಸವ ನಾಳೆ(ತಾ.೫) ಮಂಗಳವಾರದಿಂದ ತಾ.೯ರ ಶನಿವಾರದವರೆಗೆ ನಡೆಯಲಿದೆ.
ತಾ.೫ರ ಮಂಗಳವಾರ ಬೆಳಿಗ್ಗೆ ಧ್ವಜಾರೋಹಣ, ಸಂಜೆ ಹೊಸಳ್ಳಿ ಹನುಮಂತಯ್ಯ ಅವರ ಮನೆಯಲ್ಲಿ ಅಮ್ಮನವರ ಮದುವಣಗಿತ್ತಿ ಕಾರ್ಯ ನಡೆದು ನಂತರ ಆರತಿಬಾನದೊಂದಿಗೆ ಮೂಲಸ್ಥಾನಕ್ಕೆ ಕರೆದೊಯ್ಯಲಿದ್ದಾರೆ. ತಾ.೬ರ ಬುಧವಾರ ರಾಟ್ರಿ ಹೊಸಹಳ್ಳಿ ಕೊಲ್ಲಾಪುರದಮ್ಮ,ಹುಳಿಯಾರು ದುರ್ಗಮ್ಮ, ಹೊಸಹಳ್ಳಿ ಪಾಳ್ಯದ ಅಂತರಘಟ್ಟೆ ಅಮ್ಮ ಆಗಮನದೊಂದಿಗೆ ಕೂಡುಭೇಟಿ ನಡೆದು ನಂತರ ಗಂಗಾಸ್ನಾನ ಕಾರ್ಯ ನಡೆಯಲಿದೆ.
ತಾ.೭ರ ಗುರುವಾರ ಬೆಳಿಗ್ಗೆ ಅಮ್ಮನವರ ನಡೆಮುಡಿ ಕಳಸ ಮಹೋತ್ಸವ , ಮಧ್ಯಾಹ್ನ ಅನ್ನ ಸಂತರ್ಪಣೆ , ತಾ.೮ರ ಶುಕ್ರವಾರ ಬೆಳಿಗ್ಗೆ ರಥೋತ್ಸವ ನಂತರ ಸಿಡಿ ಕಾರ್ಯ ಹಾಗೂ ಓಕಳಿ ಸೇವೆ, ಕಂಕಣ ವಿಸರ್ಜನೆ, ತಾ.೯ರ ಶನಿವಾರ ಮಡಿಲಕ್ಕಿ ಸೇವೆ ಹಾಗೂ ಮಹಾಮಂಗಳಾರತಿಯೊಂದಿಗೆ ಜಾತ್ರೆಗೆ ತೆರೆಬೀಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ