ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮ ಪಂಚಾಯ್ತಿಯ ಗೊಲ್ಲರಹಟ್ಟಿಯ ೪ ನೇ ಬ್ಲಾಕ್ ನಲ್ಲಿ ಸಾಮಾನ್ಯ ಮಹಿಳೆ ೧ ಸ್ಥಾನಕ್ಕೆ ಅತ್ತೆ-ಸೊಸೆ ಸೇರಿದಂತೆ ಒಟ್ಟು ೪ ಮಂದಿ ಸ್ಪರ್ಧಿಸಿದ್ದಾರೆ.
ಗೊಲ್ಲರಹಟ್ಟಿಯ ರುದ್ರಪ್ಪ ಅವರ ಪತ್ನಿ ಮಂಗಳಮ್ಮ ಮತ್ತು ಸತೀಶ್ ಅವರ ಪತ್ನಿ ಮಂಜುಳಾ ಇವರಿಬ್ಬರು ಅತ್ತೆ-ಸೊಸೆಯಾಗಿದ್ದು ಚುನಾವಣಾ ಕಣದಲ್ಲಿದ್ದಾರೆ. ಇವರಿಗೆ ಸ್ಪರ್ಧೆ ನೀಡಲು ಅದೇ ಗ್ರಾಮದ ಕೊಟ್ಟುರಯ್ಯನವರ ಪತ್ನಿ ವೀಣಾ ಹಾಗೂ ನಟರಾಜ್ ಅವರ ಪತ್ನಿ ಪವಿತ್ರ ಕೂಡ ಸ್ಪರ್ಧೆಗೆ ಮುಂದಾಗಿದ್ದಾರೆ. ಅತ್ತೆ-ಸೊಸೆ ಹಾಗೂ ಸಂಬಂಧಿಕರೇ ಈರೀತಿ ನಾಮುಂದು ತಾಮುಂದು ಎಂದು ಸ್ಪರ್ಧಿಸಿರುವುದು ಮತದಾರರಲ್ಲಿ ಕುತೂಹಲ ಉಂಟುಮಾಡಿದೆ. ಈ ನಾಲ್ವರು ಸಹ ತಮ್ಮ ಗಂಡಂದಿರೊಂದಿದೆ ಬಿರುಸಿನ ಪ್ರಚಾರ ಸಹ ನಡೆಸಿದ್ದು ಇವರಲ್ಲಿ ವಿಜಯ ಮಾಲೆ ಯಾರಿಗೆ ಲಭಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ