ಎಸ್.ಎಸ್.ಎಲ್.ಸಿ.ಫಲಿತಾಂಶ ಮಂಗಳವಾರ ಮಧ್ಯಾಹ್ನ ಆನ್ ಲೈನ್ ನಲ್ಲಿ ಪ್ರಕಟವಾದ ಹಿನ್ನಲೆಯಲ್ಲಿ ಫಲಿತಾಂಶ ವೀಕ್ಷಣೆಗೆ ಪಟ್ಟಣದ ಕಂಪ್ಯೂಟರ್ ಕೇಂದ್ರಗಳು ವಿದ್ಯಾರ್ಥಿಗಳಿಂದ ಗಿಜಿಗುಟ್ಟುತಿತ್ತು.
ಹುಳಿಯಾರಿನ ಸೈಬರ್ ಕೇಂದ್ರದಲ್ಲಿ ಫಲಿತಾಂಶ ವೀಕ್ಷಿಸುತ್ತಿರುವ ವಿದ್ಯಾರ್ಥಿಗಳು. |
ಪಟ್ಟಣ ಕಿಯೋನಿಕ್ಸ್ ಯುವ ಡಾಟ್ ಕಾಮ್ , ಮಂಜುನಾಥ ಸೈಬರ್ ಸೆಂಟರ್, ಮೈಸ್ ಕಂಪ್ಯೂಟರ್ಸ್, ನ್ಯೂ ಕಿಂಗ್ ಡಂ, ನೈಸ್ ಕಂಪ್ಯೂಟರ್ ಕೇಂದ್ರಗಳಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳು ತುಂಬಿದ್ದರು.
ಮಂಗಳವಾರ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗುತ್ತದೆ ಎಂದು ಪತ್ರಿಕೆ ಹಾಗೂ ಮಾಧ್ಯಮದಲ್ಲಿ ಪ್ರಚಾರವಾಗಿದ್ದು ಫಲಿತಾಂಶ ನೋಡಲು ವಿದ್ಯಾರ್ಥಿಗಳು ಹಾತೊರೆಯುತ್ತಿದ್ದು ಮಂಗಳವಾರ ಬೆಳೆಗ್ಗಿನಿಂದಲೇ ಯಾವಾಗ ರಿಸಲ್ಟ್ ಬರುತ್ತದೆ ಎಂದು ಕಂಪ್ಯೂಟರ್ ಸೆಂಟರ್ ಗಳಲ್ಲಿಗೆ ಬಂದು ಕೇಳುತ್ತಿದ್ದರು. ಸರ್ಕಾರಿ ವೆಬ್ ಸೈಟ್ ನಲ್ಲಿ ಮಧ್ಯಾಹ್ನ ೩ ಕ್ಕೆ ರಿಸಲ್ಟ್ ಎಂದು ಹಾಕಿದ್ದನ್ನು ನೋಡಿದ ವಿದ್ಯಾರ್ಥಿಗಳು ೩ ಗಂಟೆ ಆಗುವುದನ್ನು ಕಾತುರದಿಂದ ಕಾಯುತ್ತಿದ್ದು ಕಂಡುಬಂತು.
ಇಲಾಖೆ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಿದ್ದೆ ತಡ ವಿದ್ಯಾರ್ಥಿಗಳು ನಾಮುಂದು , ತಾಮುಂದು ಎಂದು ಫಲಿತಾಂಶ ನೋಡಲು ಮುಗಿಬಿದಿದ್ದರು. ವಿದ್ಯಾರ್ಥಿಗಳ ಜೊತೆಗೆ ಪೋಷಕರು ಸಹ ಆಗಮಿಸಿದ್ದರು. ಎಲ್ಲರೂ ಒಮ್ಮೆಲೆ ಫಲಿತಾಂಶ ನೋಡಲು ಮುಗಿಬಿದಿದ್ದರಿಂದ ಸರ್ವರ್ ಬಿಸಿಯಾಗಿ ತಕ್ಷಣ ಫಲಿತಾಂಶ ದೊರೆಯದೆ ಆತಂಕದಿಂದ ಕಾಯುತಿದ್ದು ಕಂಡುಬಂತು. ಕೆಲ ಪೋಷಕರು ತಮ್ಮ ಮೊಬೈಲ್ ನಲ್ಲೇ ಫಲಿತಾಂಶ ಸಹ ನೋಡಿದರು. ರೀಸಲ್ಟ್ ನೋಡಿದ ವಿದ್ಯಾರ್ಥಿಗಳು ಸ್ನೇಹಿತರೊಂದಿಗೆ ಸಂತಸ ಹಂಚಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ