ರಾಜ್ಯಾದ್ಯಂತ ಸೋಮವಾರ ಮಧ್ಯಾಹ್ನ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಪಟ್ಟಣದ ಬಾಲಕಿಯರ ಸ್ವತಂತ್ರ ಪದವಿ ಪೂರ್ವ ಕಾಲೇಜಿಗೆ ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೭೮ ರಷ್ಟು ಫಲಿತಾಂಶ ಬಂದಿರುವುದಾಗಿ ಕಾಲೇಜಿನ ಪ್ರಾಂಶುಪಾಲ ಬಾಲಾಜಿ ತಿಳಿಸಿದ್ದಾರೆ.
ಕಾಲೇಜಿನ ಕಲಾ ವಿಭಾಗ, ವಾಣಿಜ್ಯ ವಿಭಾಗ ಹಾಗೂ ವಿಜ್ಞಾನ ವಿಭಾಗದಿಂದ ಒಟ್ಟು ೧೬೫ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ಅದರಲ್ಲಿ ೧೧೯ ಮಂದಿ ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಂಜುಳಾ ೫೩೨ ಅಂಕ (ಶೇ.೮೮.೬) ಮತ್ತು ವೇದಾವತಿ ೫೧೯ ಅಂಕ(ಶೇ.೮೬.೫) ಹಾಗೂ ಕಲಾ ವಿಭಾಗದ ದೊಡ್ಡಬಿದರೆಯ ನೇತ್ರಾವತಿ ೫೧೬ ಅಂಕ (ಶೇ.೮೬) ಗಳಿಸುವ ಮೂಲಕ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸಾನಿಯಾ ೪೩೯ ಅಂಕ( ಶೇ.೭೩) ಗಳಿಸಿದ್ದಾರೆ. ಒಟ್ಟು ೩ ಅತ್ಯುತ್ತಮ, ೬೭ ಪ್ರಥಮ, ೪೦ ದ್ವಿತೀಯ ಹಾಗೂ ೯ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಧಿಕ ಅಂಕಗಳಿಸಿ ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತಂದ ವಿದ್ಯಾರ್ಥಿನಿಯರನ್ನು ಶಾಲಾ ಸಿಬ್ಬಂದಿಯವರು ಅಭಿನಂಧಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ