ಜ್ಞಾನ ದಾಸೋಹ ನೀಡುವ ಮಠಗಳಿಗಿಂತ ಅನ್ನ ದಾಸೋಹದ ಮಠಗಳು ಹೆಚ್ಚು ಪ್ರಾಮುಖ್ಯತೆ ಪಡೆದಿವೆ ಎಂದು ತುಮಕೂರು ಹಿರೇಮಠಾಧ್ಯಕ್ಷ ಶಿವಾನಂದಶಿವಾಚಾರ್ಯ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ವೀರಭದ್ರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಹೋಬಳಿ ವೀರಶೈವ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಬಸವೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಹುಳಿಯಾರಿನಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಹಿರೇಮಠಾಧ್ಯಕ್ಷ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಎಚ್.ಸಿ.ಬಸವರಾಜು, ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಜಿ.ಎಂ.ನೀಲಕಂಠಯ್ಯ, ಕೆಂಕೆರೆ ಸತೀಶ್, ಉಮೇಶ್ ಇತರರು ಇದ್ದರು.
|
ಪ್ರಸ್ತುತದಲ್ಲಿ ಗಮನಿಸಿದರೆ ಹೆಚ್ಚು ಭಕ್ತರು ಹಾಗೂ ರಾಜಕಾರಣಿಗಳು ಅನ್ನ ದಾಸೋಹ ನಡೆಯುವ ಮಠಗಳತ್ತಲೇ ಮುಖ ಮಾಡುತ್ತಾರೆ. ಆದರೆ ಇಂದಿನ ಸನ್ನಿವೇಶದಲ್ಲಿ ಅನ್ನ ದಾಸೋಹದ ಜತೆಗೆ ಜ್ಞಾನ ದಾಸೋಹವೂ ಅಗತ್ಯವಾಗಿದೆ ಎಂದರು. ವೀರಶೈವ ಧರ್ಮದ ಅನುಯಾಯಿಗಳು ಮುಖ್ಯವಾಗಿ ಹೃದಯ ಶ್ರೀಮಂತಿಕೆ ಉಳ್ಳವರಾಗಿದ್ದು ಅಂತಹ ಗುಣ ಇದ್ದುದರಿಂದಲೇ ಅನ್ಯ ಜಾತಿಯ ನೀತಿವಂತ, ವಿಚಾರವಂತ ಬಸವೇಶ್ವರರನ್ನು ಗುರುವೆಂದು ಸ್ವಿಕರಿಸಿ ತಲೆ ಮೇಲೆ ಹೊತ್ತು ಪೂಜಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ರಾಜ್ಯ ರೈತಸಂಘದ ಕಾರ್ಯದರ್ಶಿ ಕೆಂಕೆರೆ ಸತೀಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಉಮೇಶ್, ವಾಣಿಜ್ಯ ತೆರಿಗೆ ಇಲಾಖೆಯ ಎಚ್.ಸಿ.ಬಸವರಾಜು ಮಾತನಾಡಿದರು. ಕೆಂಕೆರೆ ಬಸವ ಕೇಂದ್ರದ ಎಂ.ಸಿ.ಗಂಗಾಧರಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೋಬಳಿ ವೀರಶೈವ ಸಮಾಜದ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೋಬಳಿ ವೀರಶೈವ ಸಮಾಜದ ಕಾರ್ಯದರ್ಶಿ ಕೆ.ಎಂ.ಗಂಗಾಧರಯ್ಯ ಸ್ವಾಗತಿಸಿದರು. ಉಪನ್ಯಾಸಕ ಯೋಗಾನಂದಮೂರ್ತಿ ವಂದಿಸಿದರು. ಕಾರ್ಯಕ್ರಮದ ನಂತರ ಬಸವೇಶ್ವರರ ಭಾವಚಿತ್ರದ ರಾಜಬೀದಿ ಉತ್ಸವ ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ವೈಭವಯುತವಾಗಿ ಜರುಗಿತು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ