ಇದೀಗ ರಾಜ್ಯಾದ್ಯಂತ ಗ್ರಾಮ ಪಂಚಾಯ್ತಿ ಚುನಾವಣೆಯ ಕಾವು ಹತ್ತಿದ್ದು ಜೂನ್ ೨ ರಂದು ನಡೆಯಲಿರುವ ಹುಳಿಯಾರು ಗ್ರಾ.ಪಂ.ಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅರ್ಜಿ ಪಡೆಯಲು ಶುಕ್ರವಾರದಂದು ಪಂಚಾಯ್ತಿ ಕಛೇರಿಗೆ ಅಭ್ಯರ್ಥಿಗಳು ಮುಗಿಬಿದಿದ್ದರು.
ಹುಳಿಯಾರು ಗ್ರಾ.ಪಂ.ನ ಚುನಾವಣೆಗೆ ನಾಮಪತ್ರಸಲ್ಲಿಸಲು ಬೇಕಾದ ಅರ್ಜಿಪಡೆಯುತ್ತಿರುವ ಅಭ್ಯರ್ಥಿಗಳು. |
ಹುಳಿಯಾರು ಪಂಚಾಯ್ತಿಯ ೧೩ ಬ್ಲಾಕ್ ಗೆ ಒಟ್ಟು ೩೯ ಸದಸ್ಯರ ಆಯ್ಕೆಯಾಗಬೇಕಿದ್ದು , ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಮಂದಿ ಸ್ಪರ್ಧಿಸುವುದಿದ್ದು ಪ್ರಾರಂಭದ ದಿನವೇ ಹೆಚ್ಚು ಅಭ್ಯರ್ಥಿಗಳು ಆಗಮಿಸಿದ್ದರು. ಮೊದಲ ದಿನವೇ ೫೦ ರಿಂದ ೬೦ಕ್ಕೂ ಅಧಿಕ ಅರ್ಜಿಗಳನ್ನು ಪಡೆದಿದ್ದು, ೩ ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಹುಳಿಯಾರು ಗ್ರಾ.ಪಂ.ನ ಚುನಾವಣಾಧಿಕಾರಿಯಾಗಿ ಶಿವಾನಂದ್, ಸಹಾಯಕ ಅಧಿಕಾರಿಗಳಾಗಿ ಮತ್ತಿಘಟ್ಟ ಗ್ರಾ.ಪಂ.ನ ಪಿಡಿಓ ದಶರಥ, ದೊಡ್ಡಎಣ್ಣೆಗೆರೆ ಪಿಡಿಓ ವಿಜಯ್ ಕುಮಾರ್ ಅವರನ್ನು ನಿಯೋಜಿಸಲಾಗಿದ್ದು, ಹುಳಿಯಾರು ಪಿಡಿಓ ಅಡವೀಶ್ ಕುಮಾರ್ ಸಹ ಇದ್ದಾರೆ. ತಾ.೨೨ರ ಶುಕ್ರವಾರದ ವರೆಗೆ ಸಾರ್ವಜನಿಕ ರಜಾ ದಿನಗಳನ್ನು ಹೊರತು ಪಡಿಸಿ ನಾಮಪತ್ರದ ಅರ್ಜಿಗಳನ್ನು ಪಡೆದು ಪ್ರತಿ ನಿತ್ಯ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೩ರ ಒಳಗಾಗಿ ಚುನಾವಣಾಧಿಕಾರಿಗೆ ಸಲ್ಲಿಸಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ