ಇಲ್ಲಿನ ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 76 ರಷ್ಟು ಫಲಿತಾಂಶ ಬಂದಿರುವುದಾಗಿ ಕಾಲೇಜಿನ ಪ್ರಾಚಾರ್ಯ ನಟರಾಜು ತಿಳಿಸಿದ್ದಾರೆ.
ಪರೀಕ್ಷೆಗೆ ಕುಳಿತಿದ್ದ ಒಟ್ಟು ೧೯೭ ವಿದ್ಯಾರ್ಥಿಗಳ ಪೈಕಿ ೧೪೯ ಮಂದಿ ತೇರ್ಗಡೆಯಾಗಿದ್ದಾರೆ. ನಾಲ್ವರು ಅತ್ಯುತ್ತಮ ಶ್ರೇಣಿ ,೭೬ ಮಂದಿ ಪ್ರಥಮ, ೩೪ ಮಂದಿ ದ್ವಿತೀಯ ಹಾಗೂ ೩೫ ಮಂದಿ ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶಬ್ರಿನ್ ತಾಜ್ ೫೨೬ ಅಂಕ(ಶೇ.೮೭.೬), ಹೆಚ್.ಆರ್.ಅರ್ಪಿತ ೫೨೨ ಅಂಕ (ಶೇ.೮೭) ಹಾಗೂ ವಾಣಿಜ್ಯ ವಿಭಾಗದಲ್ಲಿ ಎಲ್.ಜಿ. ಯಮುನ ೫೨೫ ಅಂಕ (ಶೇ.೮೭.೬), ಎ.ಎನ್.ಮಣಿಕಂಠ ೫೨೨ ಅಂಕ (ಶೇ.೮೭) ಗಳಿಸುವ ಮೂಲಕ ಅತ್ಯುತ್ತಮ ಶ್ರೇಣಿ ಪಡೆದಿದ್ದಾರೆ. ಎ.ಎನ್.ಮಣಿಕಂಠ ಇತಿಹಾಸ ವಿಷಯದಲ್ಲಿ ೯೯ ಅಂಕ, ಲೆಕ್ಕಶಾಸ್ತ್ರದಲ್ಲಿ ೯೭ ಅಂಕ, ಖತೀಜಾ ಲೆಕ್ಕಶಾಸ್ತ್ರದಲ್ಲಿ ೯೮ ಅಂಕ,ಯತೀಶ ಜೀವಶಾಸ್ತ್ರದಲ್ಲಿ ೯೮ ಅಂಕ, ವಿಜ್ಞಾನ ವಿಭಾಗದಲ್ಲಿ ನವೀನ್ ಎಂ.ಎಸ್. ೪೯೮ (ಶೇ.೮೩) ಅಂಕಗಳಿಸಿದ್ದಾರೆ. ಹೆಚ್ಚು ಅಂಕಗಳಿಸುವ ಮೂಲಕ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಶಾಲಾ ಸಿಬ್ಬಂದಿವರ್ಗದವರು ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ