ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಫೆಬ್ರವರಿ, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡಾ. ಜಿ. ಪರಮೇಶ್ವರ್ ಗೆ ಅಭಿನಂದನೆ

ಚಿಕ್ಕನಾಯಕನಹಳ್ಳಿ ತಾಲ್ಲೂಕ್ ನ ಕಾಂಗ್ರೆಸ್ ಮುಂಖಂಡರಾದ ಸಾಸಲು ಸತೀಶ್ ಅವರನ್ನು ತುಮಕೂರು ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರನ್ನಾಗಿ ಆಯ್ಕೆ ಮಾಡಲು ಕಾರಣಿಕರ್ತರಾದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನು ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಅಭಿನಂದಿಸಿದರು. ಸಾಸಲು ಸತೀಶ್ ಅವರನ್ನು ತುಮಕೂರು ವಿವಿಯ ಸಿಂಡಿಕೇಟ್ ಸದಸ್ಯರನ್ನಾಗಿ ಆಯ್ಕೆ ಮಾಡಲು ಕಾರಣಿಕರ್ತರಾದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನು ತಾಲ್ಲೂಕಿನ ಮತ್ತು ಹುಳಿಯಾರಿನ ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು. ಚಿಕ್ಕನಾಯಕನಹಳ್ಳಿ ತಾಲ್ಲೂಕು ಅಭಿವೃದ್ದಿ ವಿಷಯದಲ್ಲಿ ಹಿಂದೆ ಉಳಿದಿದ್ದು ತಾಲ್ಲೂಕಿನ ಅಭಿವೃದ್ದಿಗೆ ಹೆಚ್ಚು ಒತ್ತು ಕೊಡುವ ಮೂಲಕ ತಾಲ್ಲೂಕನ್ನು ಪ್ರಗತಿಪಥದತ್ತ ಕೊಂಡೊಯ್ಯುವಂತೆ ಮನವಿ ಮಾಡಿದರು. ಈ ವೇಳೆ ಸಾಸಲು ಸತೀಶ್, ತುಮಕೂರು ಜಿಲ್ಲಾ ಕಾಂಗ್ರೆಸ್ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಯೂತ್ ಕಾಂಗ್ರೆಸ್ ಅಧ್ಯಕ್ಷ ಹೊಸಹಳ್ಳಿ ಅಶೋಕ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಕೆಂಕೆರೆ ಶಿವಕುಮಾರ್ ಸೇರಿದಂತೆ ಇನ್ನಿತರರಿದ್ದಾರೆ.

ರಸ್ತೆ ಗುಂಡಿ ಮುಚ್ಚುವ ಕಾರ್ಯ ಚಾಲನೆ

ಹುಳಿಯಾರು ಪಟ್ಟಣದ ಹೃದಯಭಾಗದಲ್ಲಿ ಹಾದು ಹೋಗಿರುವ ಹೆದ್ದಾರಿ ತುಂಬೆಲ್ಲಾ ಗುಂಡಿಗಳು ಬಿದ್ದು ವರ್ಷಗಳು ಕಳೆಯುತ್ತಾ ಬಂದು ಸಂಚಾರ ದುಸ್ಥರವಾಗಿದ್ದು ಇದೀಗ ಹೆದ್ದಾರಿಯ ಗುಂಡಿಗಳನ್ನು ಮುಚ್ಚುವ ಕಾರ್ಯ ಚಾಲನೆಗೊಂಡಿದ್ದು ಸಂಚಾರಕ್ಕೆ ತಕ್ಕ ಮಟ್ಟಿಗೆ ಅನುಕೂಲ ಕಲ್ಪಿಸಿಕೊಟ್ಟಂತಾಗಿದೆ. ಹುಳಿಯಾರು ಪಟ್ಟಣದಲ್ಲಿ ಹಾದುಗೋಗಿರುವ ಹೆದ್ದಾರಿಯ ಗುಂಡಿಗಳಿಗೆ ಜೆಲ್ಲಿ ಹಾಕಿ ಮುಚ್ಚಿರುವುದು. ಹುಳಿಯಾರು ಮಾರ್ಗವಾಗಿ ಮಂಗಳೂರು - ತಮಿಳುನಾಡಿನ ವಿಲ್ಲುಪುರಂವರೆಗಿನ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ರಸ್ತೆ ಅಭಿವೃದ್ದಿ ಕಾಮಗಾರಿ ಪ್ರಾರಂಭಗೊಂಡು ಅಲ್ಲಲ್ಲಿ ಸೇತುವೆಗಳ ನಿರ್ಮಾಣ ನಡೆದಿದ್ದು ಬಿಟ್ಟರೆ ಮತ್ಯಾವುದೇ ಕಾರ್ಯ ನಡೆಯದೆ ಸ್ಥಗಿತಗೊಂಡಿತ್ತು. ರಸ್ತೆ ತುಂಬ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವಂತಾಗಿತ್ತಲ್ಲದೆ, ಈ ಗುಂಡಿಗಿಳಿದ ಹಲವು ವಾಹನಗಳ ಬಿಡಿಭಾಗಗಳು ತುಂಡಾಗಿ ರಸ್ತೆ ಮಧ್ಯೆಯೇ ನಿಂತು ಸಂಚಾರಕ್ಕೆ ಮತ್ತಷ್ಟು ಅಡ್ಡಿಯುಂಟುಮಾಡಿದ್ದವು. ಈ ಬಗ್ಗೆ ಪಿಡಬ್ಯೂಡಿ ಇಲಾಖೆಯವರಿಗೆ ತಿಳಿಸಿದರೆ ಹೆದ್ದಾರಿಯ ಕಾರ್ಯ ನಡೆಯುತ್ತಿದೆ ಎಂದು ಹೇಳುತ್ತಿದ್ದರೆ ಹೊರತು ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿರಲಿಲ್ಲ. ಕಳೆದ ವಾರ ಸಂಸದರು ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ರಸ್ತೆಯಲ್ಲಿನ ಗುಂಡಿಗಳ ಬಗ್ಗೆ ಜನರು ತಿಳಿಸಿದಾಗ ಕೆಲ ದಿನಗಳಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಮಾಡಿಸುವ ಭರವಸೆ ನೀಡಿದ್ದರು. ಅದರಂತೆ

ಕೇಂದ್ರ ಬಜೆಟ್ : ಹುಳಿಯಾರಿನಲ್ಲಿ ವ್ಯಕ್ತವಾದ ಪ್ರತಿಕ್ರಿಯೆ

              ಅಭಿವೃದ್ದಿಯ ನಿಟ್ಟಿನಲ್ಲಿ ಜನರ ಹತ್ತುಹಲವಾರು ಭರವಸೆಗಳನ್ನು ಈಡೇರಿಸುವ ಅಂಶಗಳನ್ನೊಳಗೊಂಡಂತೆ ಮೋದಿ ಸಾರಥ್ಯದ ಎನ್ ಡಿಎ ಸರ್ಕಾರದ ಹಣಕಾಸು ಸಚಿವ ಅರುಣ್ ಜೇಟ್ಲಿ ಶನಿವಾರದಂದು ಕೇಂದ್ರದ ಬಜೆಟ್ ಮಂಡಿಸಿದ್ದು , ಬಜೆಟ್ ಬಗ್ಗೆ ಹುಳಿಯಾರಿನಲ್ಲಿ ಜನರಲ್ಲಿ ವ್ಯಕ್ತವಾದ ಪ್ರತಿಕ್ರಿಯೆ ವ್ಯಕ್ತವಾದ ಪ್ರತಿಕ್ರಿಯೆಗಳು:   ಬಿಪಿಎಲ್ ಕಾರ್ಡ್ ಹೊಂದಿದ ವಯೋವೃದ್ದರಿಗೆ ಸಂಪೂರ್ಣ ಚಿಕಿತ್ಸಾ ವೆಚ್ಚ ಭರಿಸಲು ಮುಂದಾಗಿರುವುದು ಸ್ವಾಗತಾರ್ಹ ವಿಷಯ. ದೇಶಾದ್ಯಂತ ಈಗಾಗಲೇ ಸ್ವಚ್ಚ ಭಾರತ್ ಹೆಸರಲ್ಲಿ ಶೌಚಾಲಯ ನಿರ್ಮಾಣ ಕಾರ್ಯ ನಡೆಯುತ್ತಿದೆ. ಅದಾಗ್ಯೂ ಸಹ ಮತ್ತೆ ೬ ಕೋಟಿ ಶೌಚಾಲಯ ನಿರ್ಮಾಣ ಗುರಿಹೊಂದಿರುವುದು ಯಶಸ್ವಿಯಾಗುತ್ತದೆಯೇ :  ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೆಂಕಟಾಛಲಪತಿ ಶೆಟ್ರು.   ದೇಶಾದ್ಯಂತ ಹಾಲಿ ಇರುವ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು , ಅನೇಕ ಶಾಲೆಗಳು ಮುಚ್ಚಿವೆ ಹೀಗಿದ್ದರೂ ಸಹ ಬಜೆಟ್ ನಲ್ಲಿ ಪ್ರತಿ ೫ ಕಿ.ಮೀ ಗೆ ಶಾಲೆ ನಿರ್ಮಾಣ ಮಾಡಲು ಮುಂದಾಗಿರುವುದು ಸರಿಯೇ? : ಸ್ಟುಡಿಯೋ ಸುದರ್ಶನ್    ಜನಸಾಮಾನ್ಯರಿಗೆ ನಿತ್ಯ ಅವಶ್ಯಕವಾಗಿರುವ ವಸ್ತುಗಳ ಬೆಲೆ ಹೆಚ್ಚಿಸಿರುವುದಲ್ಲದೆ, ಶಿಕ್ಷಣ ಶುಲ್ಕ, ಹೋಟೆಲ್ ಆಹಾರ , ವಾಟರ್ ಬಿಲ್ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆ ಏರಿಕೆಮಾಡಿರುವುದು ಜನ ಸಾಮಾನ್ಯರ ಆದಾಯದ ಮೇಲೆ ಹೊರೆ ಹೇರಿದಂತಾಗಿ

ಊರ ಐತಿಹ್ಯ ಸಾರುವ ನಾಯಿಗಲ್ಲಿನ ಸಂರಕ್ಷಣೆ ಮಾಡಿ ಅನಾಥವಾದ ನಾಯಿಗಲ್ಲಿನ ಅಕ್ಕಪಕ್ಕ ತ್ಯಾಜ್ಯದ ರಾಶಿ

ವರದಿ:ಡಿ.ಆರ್.ನರೇಂದ್ರಬಾಬು ------------- ಹುಳಿಯಾರು : ಪ್ರತಿಯೊಂದು ಗ್ರಾಮಗಳ ಹಿಂದೆ ಅವುಗಳದ್ದೇ ಆದ ಐತಿಹ್ಯವಿದ್ದು ಅದಕ್ಕೆ ತಕ್ಕಂತೆ ಕೆಲ ಕುರುಹುಗಳು ಇರುತ್ತವೆ. ಅಂತೆಯೇ ಹುಳಿಯಾರಿನ ಇತಿಹಾಸಕ್ಕೆ ಹೊಂದಿಕೊಂಡಂತಿರುವ ನಾಯಿಗಲ್ಲು ಹುಳಿಯಾರು ಕೆರೆ ಏರಿ ದಡದಲ್ಲಿದ್ದು ಅವನತಿಯತ್ತ ಸಾಗಿರುವ ಅದರ ಸಂರಕ್ಷಣೆ ಅತ್ಯಗತ್ಯವಾಗಿದೆ. ಹುಳಿಯಾರಿನ ಇತಿಹಾಸ ನೆನಪಿಸುವ ನಾಯಿಗಲ್ಲು . ಹುಳಿಯಾರು ಹೆಸರಿಗೆ ಈ ನಾಯಿಗಲ್ಲು ತಳುಕು ಹಾಕಿಕೊಂಡಿದ್ದು ವೀರರ ಭೂಮಿಯಾಗಿದ್ದ ಈ ನೆಲದಲ್ಲಿ ನಾಯಿಯೂ ಸಹ ಹುಲಿಯನ್ನು ಎದುರಿಸಿದ್ದರಿಂದ ಹುಲಿ ಯಾರು ಎಂಬ ಪ್ರಶ್ನೆ ಹುಟ್ಟಿ ಹುಲಿಯಾರು ಎಂದು ಕರೆಯಲ್ಪಟ್ಟು ಕ್ರಮೇಣ ಹುಳಿಯಾರಾಗಿ ಬದಲಾಗಿದೆ ಎನ್ನುತ್ತದೆ ಇತಿಹಾಸ, ಇದರ ದ್ಯೋತಕವಾಗಿ ಮಾರನಾಯಕ ಆಳ್ವಿಕೆಯಲ್ಲಿ ಗ್ರಾಮದ ಕೆರೆಯಲ್ಲಿ ಕಲ್ಲೊಂದು ಸ್ಥಾಪಿಸಲ್ಪಟ್ಟು ಹುಲಿ ಹಾಗೂ ನಾಯಿ ಕದನವಾಡುತ್ತಿರುವ ದೃಶ್ಯ ಕೆತ್ತಲ್ಪಟ್ಟಿದೆ. ನಾಯಿಗಲ್ಲಿನ ಐತಿಹ್ಯ : ಈ ನಾಯಿಗಲ್ಲಿನ ಇತಿಹಾಸ ಎಲ್ಲೂ ದಾಖಲಾಗದೆ ಕೇವಲ ಹಿರಿಯ ಬಾಯಲ್ಲೇ ಉಳಿದು ಕೊಂಡಿದ್ದು ಅಂತೆ, ಕಂತೆ ಎನ್ನುವಂತಾಗಿದೆ. ಕೆಲವರ ಪ್ರಕಾರ ಹುಳಿಯಾರು ಕೆರೆ ಕೋಡಿ ಬೀಳುವ ಮುನ್ಸೂಚನೆಯ ಸೂಚಕದ ಕಲ್ಲು ಇದಾಗಿದ್ದು, ಈ ನಾಯಿಗಲ್ಲ ನೆತ್ತಿಯವರೆಗೆ ನೀರು ಬಂತೆಂದರೆ ಕೆರೆ ಕೋಡಿ ಬೀಳುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಅಲ್ಲದೆ ಈ ಕಲ್ಲಿನ ಮೇಲೆ ಕಾಗೆಯೊಂದು ನೀರು ಕ

ಆರೋಗ್ಯ ತಪಾಸಣೆ ಶಿಬಿರ ಯಶಸ್ವಿ

ಹುಳಿಯಾರು ಪಟ್ಟಣದ ಆರ್ಯವೈಶ್ಯ ಮಂಡಳಿ, ಮಹಿಳಾ ಸಂಘ, ಕನ್ನಿಕಾಪರಮೇಶ್ವರಿ ಸಹಕಾರ ಸಂಘ , ವಾಸವಿ ವಿದ್ಯಾಸಂಸ್ಥೆ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಗುರುವಾರ ವಾಸವಿ ಕಲ್ಯಾಣ ಮಂದಿರದಲ್ಲಿ ಅಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಯಶಸ್ವಿಯಾಗಿ ನಡೆಯಿತು. ಹುಳಿಯಾರಿನ ಆರ್ಯವೈಶ್ಯ ಮಂಡಳಿ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ವಾಸವಿ ಕಲ್ಯಾಣ ಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣ ಶಿಬಿರ ನಡೆಯಿತು. ಆರ್ಯವೈಶ್ಯ ಮಂಡಳಿಯ ಉಪಾಧ್ಯಕ್ಷ ಎಲ್.ಆರ್.ಚಂದ್ರಶೇಖರ್ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಹೃದಯ ಸಂಬಂಧಿ, ಮೂತ್ರ ಪಿಂಡದ ಸಮಸ್ಯೆ ಸೇರಿದಂತೆ ಇನ್ನಿತರ ಖಾಯಿಲೆಗಳಿಗೆ ಜನ ಹೆಚ್ಚಿನ ಹಣ ಖರ್ಚುಮಾಡಲಾಗದೆ ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಅಂತಹವರಿಗೆ ನೆರವಾಗುವ ದೃಷ್ಠಿಯಿಂದ ಈ ಶಿಬಿರ ಅಯೋಜಿಸಿದ್ದು ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಶಿಬಿರದ ಯಶಸ್ಸಿಗೆ ನೆರವಾಗಿದ್ದಾರೆಂದರು. ಬೆಳಿಗ್ಗೆಯಿಂದ ಪ್ರಾರಂಭವಾದ ಶಿಬಿರಕ್ಕೆ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಿಂದ ಸಾಕಷ್ಟು ಜನ ಆಗಮಿಸಿದ್ದು ಸಂಜೆಯವರೆಗೂ ನಡೆದ ಶಿಬಿರದಲ್ಲಿ ನೂರಾರು ಮಂದಿಯನ್ನು ತಪಾಸಣೆಗೊಳಪಡಿಸಲಾಯಿತು. ಶಿಬಿರದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ಮೂತ್ರಪಿಂಡದಲ್ಲಿ ಕಲ್ಲು, ನರಗಳ ದೌರ್ಬಲ್ಯಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಿದರಲ್ಲದೆ ಇಸಿಜಿ, ಸ್ಕ್ಯಾನಿಂಗ್ , ಬಿ

ಓದಿದ ಶಾಲೆಯನ್ನು ಮರೆಯದಿರಿ : ಜಯಣ್ಣ

ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ತಾವು ಅಕ್ಷರ ಕಲಿತ ಶಾಲೆಯನ್ನು ಮರೆಯದೆ ತಮ್ಮಿಂದಾಗುವ ಸಹಕಾರವನ್ನು ಶಾಲೆಗೆ ನೀಡಿ ಶಾಲೆಯ ಬೆಳವಣಿಗೆಗೆ ನೆರವಾಗಿ ಎಂದು ಕೇಶವ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಜಯಣ್ಣ ತಿಳಿಸಿದರು. ಹುಳಿಯಾರಿನ ಕೇಶವ ವಿದ್ಯಾಮಂದಿರದ ಶಾಲಾವಾರ್ಷಿಕೋತ್ಸವ ಸಮಾರಂಭದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಟಿ.ಜಯಣ್ಣ ಮಾತನಾಡಿದರು. ಹುಳಿಯಾರಿನ ಕೇಶವ ವಿದ್ಯಾಮಂದಿರದಲ್ಲಿ ಬುಧವಾರ ಸಂಜೆ ನಡೆದ ೨೦೧೪-೧೫ ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಕೇಶವ ಶಾಲೆಯಲ್ಲಿ ಓದಿದ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲಿದ್ದಾರಲ್ಲದೆ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿರುವುದು ನಮ್ಮ ಶಾಲೆಗೆ ಹೆಮ್ಮೆ ತರುವಂತಹದ್ದು ಎಂದರು. ಮಕ್ಕಳು ಓದಿ ಸಮಯದಲ್ಲಿ ಇನ್ನಿತರ ಚಟುವಟಿಕೆಗಳತ್ತ ಗಮನಗೊಡದೆ ಓದನ್ನೇ ಮುಖ್ಯವಾಗಿಟ್ಟುಕೊಂಡು ಅಭ್ಯಾಸಿಸುವುದರಿಂದ ಯಶಸ್ಸು ಸಿಗುತ್ತದೆ ಎಂದರು. ಪೋಷಕರು ನಿತ್ಯ ತಮ್ಮ ಮಕ್ಕಳು ಶಾಲೆಯಲ್ಲಿ ಏನನ್ನು ಕಲಿಯುತ್ತಿದ್ದಾರೆ ಎಂಬುದರ ಬಗ್ಗೆ ಕೆಲ ಸಮಯ ವಿಚಾರ ಮಾಡುವಂತೆ ತಿಳಿಸಿದರು. ಗ್ರಾ.ಪಂ.ಸದಸ್ಯ ಅಶೋಕ್ ಬಾಬು ಮಾತನಾಡಿ, ಪಟ್ಟಣದಲ್ಲಿ ಅನೇಕ ಶಾಲೆಗಳಿದ್ದರೂ ಸಹ ಕೇಶವ ಶಾಲೆ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿದ್ದು ಇನ್ನಿತರ ಶಾಲೆಗಳಿಗೆ ಪೈಪೋಟಿ ನೀಡುತ್ತಾ ಬಂದಿದೆ ಹಾಗೂ ಉತ್ತಮ ಫಲಿತಾಂಶ ಸಹ ಶಾಲೆಯಲ್ಲಿ ಬರುತ

ಶಾಲಾ ವಾರ್ಷಿಕೋತ್ಸವ ಉದ್ಘಾಟನೆ

ಹುಳಿಯಾರಿನ ಬಸವೇಶ್ವರ ನಗರದ ಶ್ರೀಮಾರುತಿ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ನಿವೃತ್ತ ಶಿಕ್ಷಕ ಮಲ್ಲೇಶಯ್ಯ ನೆರವೇರಿಸಿದರು. ಮುಖ್ಯಶಿಕ್ಷಕ ದೇವೇಂದ್ರಪ್ಪ ಹಾಗೂ ಇತರರಿದ್ದಾರೆ. 

ಪದವಿ ವಿದ್ಯಾರ್ಥಿಗಳಿಗೆ ಕಾವ್ಯ ಸ್ಪರ್ಧೆ ಫೆ.೨೮ ಕಡೆ ದಿನ

ಪದವಿ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಮಕೂರು ವಿವಿಯ ಸಹಯೋಗದಲ್ಲಿ ಅಂತರ್ ಕಾಲೇಜು ಮಟ್ಟದ ಕಾವ್ಯ ಸ್ಪರ್ಧೆ ಏರ್ಪಡಿಸಿದ್ದಾರೆ. ಪದವಿ ಹಂತದ ವಿದ್ಯಾರ್ಥಿಗಳು ಸ್ವರಚಿತ ೩ ಕಾವ್ಯ ಅಥವಾ ಕವನಗಳನ್ನು ಹುಳಿಯಾರ್-ಕೆಂಕೆರೆ ಕಾಲೇಜಿಗೆ ಫೆ.೨೮ರ ಒಳಗಾಗಿ ಕಳುಹಿಸನಹುದಾಗಿದೆ. ಸ್ಪರ್ಧೆಗೆ ಬಂದ ಕಾವ್ಯಗಳಲ್ಲಿ ಅತ್ಯುನತ್ತ ೩ ಕಾವ್ಯಗಳಿಗೆ ತಲಾ ೧ ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ , ಪಾರಿತೋಷಕ ನೀಡಲಾಗುತ್ತದೆ. ತೀರ್ಪುಗಾರರ ಮೆಚುಗೆ ಪಡೆದ ೪ ಕವನಗಳಿಗೆ ತಲಾ ೨೫೦ರೂ ನಗದು, ಪ್ರಶಸ್ತಿ ಪತ್ರ ಹಾಗೂ ಪಾರಿತೋಷ ವಿತರಿಸಲಿದ್ದಾರೆ. ವಿದ್ಯಾರ್ಥಿಗಳು ತಾವು ರಚಿಸಿದ ಕವನ ಅಥವಾ ಕಾವ್ಯವನ್ನು ತಾವು ಓದುತ್ತಿರುವ ಕಾಲೇಜಿನ ಪ್ರಾಚಾರ್ಯರಿಂದ ದೃಢೀಕರಿಸಿದ ನಂತರ ಪ್ರಿನ್ಸಿಪಾಲರು , ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿ.ನಾ.ಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ , ಪಿನ್ : ೫೭೨೨೧೮ ವಿಳಾಸಕ್ಕೆ ನಿಗದಿತ ತಾರೀಕಿನೊಳಗಾಗಿ ಕಳುಹಿಸುವಂತೆ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹದಗೆಟ್ಟ ರಸ್ತೆ : ವಾಹನ,ಜನ ಸಂಚಾರಕ್ಕೆ ನಿತ್ಯ ಕಿರಿಕಿರಿ ಮೌನವಹಿಸಿದ ಸ್ಥಳೀಯ ಆಡಳಿತ : ನಿತ್ಯ ಬಿದ್ದೇಳುತ್ತಿರುವ ಜನ

ಗ್ರಾ.ಪಂ. ವ್ಯಾಪ್ತಿಗೆ ಬರುವ ಸೋಮಜ್ಜನಪಾಳ್ಯ ಹಾಗೂ ಕೆ.ಸಿ.ಪಾಳ್ಯ ಮಾರ್ಗದ ರಸ್ತೆಯ ತುಂಬೆಲ್ಲಾ ಕೊರಕಲುಂಟಾಗಿ ಆಳುದ್ದ ಗುಂಡಿಯಾಗಿ ವಾಹನ, ಜನ ಸಂಚಾರಕ್ಕೆ ದುಸ್ಥರವಾಗಿದ್ದರೂ ಸಹ ಸ್ಥಳೀಯ ಪಂಚಾಯ್ತಿಯವರು ಮೌನವಹಿಸಿದ್ದಾರೆಂದು ಗ್ರಾಮಸ್ಥರು ದೂರಿದ್ದಾರೆ. ಹುಳಿಯಾರು ಗ್ರಾ.ಪಂ.ವ್ಯಾಪ್ತಿಯ ಸೋಮಜ್ಜನಪಾಳ್ಯ-ಕೆ.ಸಿ.ಪಾಳ್ಯದ ಮಣ್ಣು ರಸ್ತೆಯಲ್ಲಿ ಕೊರಕಲುಂಟಾಗಿರುವುದನ್ನು ತೋರಿಸುತ್ತಿರುವ ಸ್ಥಳೀಯರು.  ಸೋಮಜ್ಜನಪಾಳ್ಯದಿಂದ ಕೆ.ಸಿ.ಪಾಳ್ಯಕ್ಕೆ ಹೋಗಲು ಮಣ್ಣು ದಾರಿಯಿದ್ದು ಈ ಹಿಂದೆ ದಾರಿಯ ಇಕ್ಕೆಲಗಳಲ್ಲಿ ಮಳೆ ನೀರು ಹರಿಯುವಂತೆ ಡ್ರೈನೇಜ್ ತೆಗೆದಿದ್ದರು. ಈ ಡ್ರೈನೇಜ್ ಗಳೆಲ್ಲಾ ಮುಚ್ಚಿದ್ದರಿಂದ ಮಳೆ ನೀರೆಲ್ಲಾ ಮಣ್ಣು ರಸ್ತೆಯಲ್ಲೇ ಹರಿದು ಕೊರಕಲು ಬಿದಿದ್ದೆ. ಈ ದಾರಿಯಲ್ಲಿ ನಿತ್ಯ ಶಾಲೆಗೆ ಮಕ್ಕಳು ಹೋಗುತ್ತಾರೆ, ಬೈಕ್ ಸವಾರರು, ಕಾರು ಸೇರಿದಂತೆ ಸಣ್ಣಪುಟ್ಟ ವಾಹನಗಳು ಸಂಚರಿಸುತ್ತಿದ್ದು ಗುಂಡಿಯ ಮಧ್ಯದಲ್ಲೇ ಸಾಗುವಂತಹ ಪರಿಸ್ಥಿತಿ ಎದುರಾಗಿದೆ. ಬೈಕ್ ಸವಾರರು ಈ ದಾರಿಯಲ್ಲಿ ಸಾಗುವಾಗ ಆಯಾತಪ್ಪಿ ಬೈಕ್ ಸಮೇತ ಬಿದ್ದು ಕೈಕಾಲು ಮುರಿದು ಕೊಂಡು ಆಸ್ಪತ್ರೆಗೆ ದಾಖಲಾದ ಪ್ರಸಂಗಗಳು ನಡೆದಿವೆ. ಟಾಟಾ ಎಸಿಯಂತಹ ವಾಹನಗಳು ಈ ಗುಂಡಿ ಮಧ್ಯ ಚಲಿಸುವಾಗ ಸಿಕ್ಕಿ ಹಾಕಿಕೊಂಡು ಗಂಟೆಗಟ್ಟಲ್ಲೇ ದಾರಿ ಮಧ್ಯೆ ನಿಂತು ಸಂಚಾರಕ್ಕೆ ಅಡ್ಡಿಯುಂಟುಮಾಡುತ್ತಿವೆ. ರಸ್ತೆ ದುರಸ್ಥಿ ಬಗ್ಗೆ ಸ್ಥಳಿಯ ಆಡಳಿತದವರ ಗಮನಕ್ಕೆ ತಂದಿದ್ದರೂ

ಮುಂದುವರಿದ ಧರಣಿ : ತಹಸೀಲ್ದಾರ್ ರ ನಿರೀಕ್ಷೆ : ಸಂಜೆಯಾದರೂ ಧರಣಿ ಸ್ಥಳಕ್ಕೆ ಆಗಮಿಸದ ಅಧಿಕಾರಿಗಳು

ಹುಳಿಯಾರು  ಪಟ್ಟಣದ ಕೆಇಬಿ ಎದುರಿನ ವಸತಿ ಪ್ರದೇಶದಲ್ಲಿ ಕೋಳಿ ಅಂಗಡಿ ತೆರೆಯ ಕೂಡದೆಂದು ಪಟ್ಟು ಹಿಡಿದು ಸೋಮವಾರ ಪ್ರಾರಂಭವಾದ ಧರಣಿ ಮಂಗಳವಾರವೂ ಸಹ ಮುಂದುವರೆದಿದ್ದು, ಸಂಜೆಯಾಗುತ್ತಾ ಬಂದರೂ ಸಹ ಜಾಗದ ಮಾಲೀಕರಾಗಲಿ, ಸಾರ್ವಜನಿಕ ಅಧಿಕಾರಿಗಳಾಗಲಿ ಧರಣಿ ಸ್ಥಳಕ್ಕೆ ಬಾರದೆ. ತಹಸೀಲ್ದಾರ್ ನಿರೀಕ್ಷೆಯಲ್ಲಿ ಧರಣಿ ಮುಂದುವರೆಯಿತು. ಅಧಿಕಾರಿಗಳ ನಿರೀಕ್ಷೆಯಲ್ಲಿ ಮಂಗಳವಾರವೂ ಧರಣಿ ಮುಂದುವರಿಸಿದ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಸಿದ್ದಪ್ಪನವರ ಕುಟುಂಬದವರು . ವಸತಿ ಪ್ರದೇಶದಲ್ಲಿ ಕೋಳಿ ಅಂಗಡಿ ಇಡುವುದನ್ನು ವಿರೋದಿಸಿ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಸಿದ್ದಪ್ಪನವರ ಕುಟುಂಬದವರು ಹಾಗೂ ಅಕ್ಕಪಕ್ಕದವ ಮನೆಯವರು ಸೇರಿ ಧರಣಿ ಪ್ರಾರಂಭಿಸಿದ್ದರು. ಧರಣಿ ವಿಷಯ ತಿಳಿದರೂ ಸಹ ಜಾಗದ ಮಾಲೀಕರಾಗಲಿ, ಸಾರ್ವಜನಿಕ ಅಧಿಕಾರಿಗಳಾಗಲಿ ಧರಣಿ ಸ್ಥಳಕ್ಕೆ ಬಾರದೆಯಿದ್ದು ಮಂಗಳವಾರ ಸಂಜೆಯಾಗುತ್ತಾ ಬಂದರೂ ಸಹ ಯಾರೂ ಇತ್ತ ಸುಳಿಯದ ಹಿನ್ನಲೆಯಲ್ಲಿ ಧರಣಿ ಮುಂದುವರೆದಿತ್ತು. ಧರಣಿ ನಿರತರ ಮನವೋಲಿಸಲು ಕೋಳಿ ಅಂಗಡಿದಾರರು ಮುಂದಾಗಿ, ಸಭೆ ಕರೆದು ಧರಣಿ ನಿರತ ಕುಟುಂಬದ ರಘು ಅವರೊಂದಿಗೆ ಮಾತುಕತೆ ನಡೆಸಲು ಮುಂದಾದರು. ಬಸ್ ಅಂಗಡಿ ತೆರವಿನಿಂದಾಗಿ ಕೋಳಿ ಅಂಗಡಿಯವರಿಗೆ ಪಟ್ಟಣದಲ್ಲಿ ಎಲ್ಲೂ ಸೂಕ್ತ ಜಾಗ ಸಿಗದೆ ಪರದಾಡುತ್ತಿದ್ದೇವೆ. ಈಗ ಸದ್ಯ ಜಾಗ ಸಿಕ್ಕಿದೆ ಇದರಿಂದ ನಮ್ಮ ಜೀವನಕ್ಕೂ ಅನುಕೂಲವಾಗಲಿದೆ. ಯಾವುದೇ ಕಾರ

ಬರಕನಹಾಳ್ ವಿಎಸ್ಎಸ್ಎನ್ ಗೆ ಆಯ್ಕೆ

ಹುಳಿಯಾರು ಹೋಬಳಿಯ ಬರಕನಹಾಳ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆಗೆ ಭಾನುವಾರ ಚುನಾವಣೆ ನಡೆಯಿತು. ಸಾಲಗಾರರ ಕ್ಷೇತ್ರದಿಂದ ಜಿ.ಎಸ್.ಶಿವಕುಮಾರಸ್ವಾಮಿ, ಬೈರೇಶ್, ಕೇಶವಮೂರ್ತಿ, ಶಾಂತಕುಮಾರ್, ರಾಜಣ್ಣ, ನಾಗರಾಜು, ಪದ್ಮಾಕ್ಷಮ್ಮ, ನಿಂಗಮ್ಮ ಹಾಗೂ ಧನಂಜಯ ಆಯ್ಕೆಯಾಗಿದ್ಧಾರೆ. 

ತಾ.೨೮ ರಿಂದ ಕಾರೇಹಳ್ಳಿ ರಂಗನಾಥಸ್ವಾಮಿ ಜಾತ್ರೆ ಪ್ರಾರಂಭ

ಹುಳಿಯಾರು  ಹೋಬಳಿ ಕಾರೇಹಳ್ಳಿಯ ಪುರಾಣಪ್ರಸಿದ್ದ ಶ್ರೀಕಾರೇಹಳ್ಳಿರಂಗನಾಥಸ್ವಾಮಿಯ ಜಾತ್ರಾಮಹೋತ್ಸವ ಹಾಗೂ ಬಾರಿ ದನಗಳ ಜಾತ್ರೆ ತಾ.೨೮ರ ಶನಿವಾರದಿಂದ ಮಾ.೧೦ರ ಮಂಗಳವಾರದವರೆಗೆ ಹತ್ತುದಿನಗಳ ಕಾಲ ನಡೆಯಲಿದೆ. ಕಾರೇಹಳ್ಳಿ ಶ್ರೀರಂಗನಾಥಸ್ವಾಮಿ. ತಾ.೨೮ರ ಶನಿವಾರ ಮಾರುಹೊಳೆ ಗ್ರಾಮಸ್ಥರಿಂದ ಸ್ವಾಮಿಯ ಕಂಕಣ ಸೇವೆ,ಅಂಕುರಾರ್ಪಣೆ,ಧ್ವಜಾರೋಹಣ, ಉಯ್ಯಾಲೋತ್ಸವ, ತಾ.೧ರ ಭಾನುವಾರ ಗಾಣಧಾಳು ಗ್ರಾಮಸ್ಥರಿಂದ ಗಜಾರೋಹಣಕಾರ್ಯ, ತಾ.೨ರ ಸೋಮವಾರ ತಿಮ್ಮನಹಳ್ಳಿ ಗ್ರಾಮಸ್ಥರಿಂದ ಗರುಡವಾಹನೋತ್ಸವ ನಡೆಯಲಿದೆ. ತಾ.೩ರ ಮಂಗಳವಾರ ದಸೂಡಿಯ ಕೊಟ್ಟಿಗೆ ರಂಗೇಗೌಡರು ಹಾಗೂ ಸಮಿತಿವತಿಯಿಂದ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ.ಇದೇ ದಿನ ವಸಂತ ಬ್ರಾಹ್ಮಣರಿಗೆ ಹಾಗೂ ಆರ್ಯವೈಶ್ಯ ಮಂಡಳಿಯವರಿಗೆ ಅನ್ನಸಂತರ್ಪಣೆ ನಡೆಯಲಿದೆ,. ತಾ.೪ರ ಬುಧವಾರ ಅಡ್ಡಪಲ್ಲಕ್ಕಿ ಉತ್ಸವ, ತಾ.೫ರ ಗುರುವಾರ ಓಕಳಿ, ಮಂಗಳಸ್ನಾನ, ಶಯನೋತ್ಸವ, ತಾ.೬ರ ಶುಕ್ರವಾರ ಸರ್ಪವಾಹನೋತ್ಸವ,ತಾ.೭ರ ಶನಿವಾರ ಚಂದ್ರಮಂಡಲೋತ್ಸವ, ತಾ.೮ರ ಭಾನುವಾರ ಪುಷ್ಪವಾಹನೋತ್ಸವ,ತಾ.೯ರ ಸೋಮವಾರ ಸೂರ್ಯಮಂಡಲೋತ್ಸವ, ತಾ.೧೦ರ ಮಂಗಳವಾರ ಸ್ವಾಮಿಗೆ ಪಂಚಾಮೃತಾಭಿಷೇಕ ಹಾಗೂ ಮಹಾಮಂಗಳಾರತಿ ನಡೆಯುವ ಮೂಲಕ ಜಾತ್ರೆಗೆ ತೆರೆ ಬೀಳಲಿದ್ದು ಹುಳಿಯಾರು ಹಾಗೂ ಸುತ್ತಮುತ್ತಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯ ಸಮಿತಿಯವರು ಕೋರಿದ್ದಾರೆ.

ಉಚಿತ ಸೈಕಲ್ ವಿತರಣೆ

ಹುಳಿಯಾರು ಸಮೀಪದ ದೊಡ್ಡಎಣ್ಣೇಗೆರೆ ಶ್ರೀ ಗವೀರಂಗನಾಥ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಲಾಯಿತು. ಹುಳಿಯಾರು ಸಮೀಪದ ದೊಡ್ಡಎಣ್ಣೇಗೆರೆ ಶ್ರೀ ಗವೀರಂಗನಾಥ ವಿದ್ಯಾಪೀಠ ಪ್ರೌಢಶಾಲೆಯ ಎಂಟನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಲಾಯಿತು. ದೊಡ್ಡಎಣ್ಣೇಗೆರೆ ಗ್ರಾ.ಪಂ.ಯ ಮಾಜಿ ಉಪಾಧ್ಯಕ್ಷೆ ಉಮಾದೇವಿ ಮಕ್ಕಳಿಗೆ ಸೈಕಲ್ ವಿತರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಬಸವಲಿಂಗಯ್ಯ ಮಾತನಾಡಿ ಸರ್ಕಾರ ಉಚಿತವಾಗಿ ನೀಡಿರುವ ಸೈಕಲನ್ನು ಸಮರ್ಪಕವಾಘಿ ಬಳಕೆ ಮಾಡಿಕೊಳ್ಳಬೇಕು ಹಾಗೂ ಆ ಸೈಕಲ್ ನಲ್ಲೇ ಶಾಲೆಗೆ ಸರಿಯಾಗಿ ಬರುವಂತೆ ತಿಳಿಸಿದರು. ಈ ವೇಳೆ ಶಿಕ್ಷಕರಾದ ಜ್ಞಾನರಾಜಯ್ಯ, ನಾಗರಾಜು,ವೆಂಕಟೇಶನಾಯ್ಕ, ನಟರಾಜು ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಅಡಿಕೆ ,ತೆಂಗು ಬೆಂಕಿಗಾವುತಿ

ಹುಳಿಯಾರು  ಹೋಬಳಿ ದಸೂಡಿ ಸಮೀಪದ ರಾಮನಗರದ ತೋಟವೊಂದರಲ್ಲಿ ನಿರಂತರ ಜ್ಯೋತಿ ವಿದ್ಯುತ್ ಲೈನ್ ನಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ತೆಂಗು, ಅಡಿಕೆ ಸೇರಿದಂತೆ ಇನ್ನಿತರ ಮರಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಸೋಮವಾರ ಮಧ್ಯಾಹ್ನ ಘಟಿಸಿದೆ. ರಾಜಲಕ್ಷ್ಮಿ ಕೋಂ ಮಲ್ಲಿಕಾರ್ಜುನಯ್ಯ ಹಾಗೂ ಕ್ಯಾತಪ್ಪ ಎಂಬುವರಿಗೆ ಸೇರಿದ್ದ ತೋಟದಲ್ಲಿ ಒಟ್ಟು ೧೫ ತೆಂಗು, ೭೫ ಅಡಿಕೆ ಮರ, ೨ ಹಲಸು, ೩ ಮಾವಿನ ಮರಗಳಿಗೆ ಬೆಂಕಿತಗುಲಿ ಸುಟ್ಟಿವೆ. ಸ್ಥಳೀಯರು ಸೇರಿ ಬೆಂಕಿ ಆರಿಸಿದ್ದು ಸ್ಥಳಕ್ಕೆ ಕಂದಾಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ವಸತಿ ಪ್ರದೇಶದಲ್ಲಿ ಕೋಳಿ ಅಂಗಡಿ ವಿರೋಧಿಸಿ ಧರಣಿ

ವಸತಿ ಪ್ರದೇಶದಲ್ಲಿ ಕೋಳಿ ಅಂಗಡಿ ತೆರೆಯುವುದರಿಂದ ಹತ್ತು ಹಲವಾರು ಸಮಸ್ಯೆಗಳಿಗೆ ದಾರಿಯಾಗುವುದಿದ್ದು ಯಾವುದೇ ಕಾರಣಕ್ಕೂ ತಮ್ಮ ಮನೆ ಮುಂದಿನ ಜಾಗದಲ್ಲಿ ಕೋಳಿ ಅಂಗಡಿ ತೆರೆಯಕೂಡದು ಎಂದು ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಸಿದ್ದಪ್ಪನವರ ಕುಟುಂಬ ವರ್ಗ ಪ್ರತಿಭಟನೆಗೆ ಮುಂದಾದ ಘಟನೆ ಸೋಮವಾರ ನಡೆದಿದೆ. ಕೋಳಿ ಅಂಗಡಿ ತೆರಯದಂತೆ ಒತ್ತಾಯಿಸಿ ಖಾಲಿ ನಿವೇಶದ ಬಳಿ ಧರಣಿ ನಿರತ ಕುಟುಂಬದವರು. ಇತ್ತೀಚೆಗೆ ಬಸ್ ನಿಲ್ದಾಣದ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ಜೀವನೋಪಾಯಕ್ಕಾಗಿ ಹೆದ್ದಾರಿ ಖಾಲಿ ಜಾಗಗಳಲ್ಲಿ ಅಂಗಡಿಗಳನ್ನು ತೆರೆಯಲು ಮುಂದಾಗಿರುವ ಅಂಗಡಿದಾರರು ಪಟ್ಟಣದ ಕೆಇಬಿ ಎದುರಿನ ಹೆದ್ದಾರಿ ಪಕ್ಕದಲ್ಲಿ ಕೋಳಿ ಅಂಗಡಿ ತೆರೆಯಲು ಮುಂದಾಗಿದ್ದು ಸಮಸ್ಯೆಗೆ ಕಾರಣವಾಗಿದೆ . ಮೆಡಿಕಲ್ ದೇವರಾಜ್ ಹಾಗೂ ಯೂಸೂಪ್ ಅವರಿಗೆ ಸೇರಿದ ಖಾಲಿ ನಿವೇಶನದಲ್ಲಿ ಕೋಳಿ ಅಂಗಡಿ ತೆರೆಯಲು ಅಂಗಡಿ ಸಿದ್ದಪಡಿಸುತ್ತಿದ್ದ ವೇಳೆ ಜಾಗದ ಅಕ್ಕಪಕ್ಕ ಇದ್ದ ಕುಟುಂಬದವರೆಲ್ಲಾ ಸೇರಿ ಈ ಜಾಗದಲ್ಲಿ ಕೋಳಿ ಅಂಗಡಿ ಇಡುವುದಕ್ಕೆ ತಮ್ಮ ಒಪ್ಪಿಗೆಯಿಲ್ಲ ಎಂದು ಅಂಗಡಿಯ ಮುಂದೆ ಧರಣಿ ನಡೆಸಲು ಮುಂದಾಗಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಕೋಳಿ ಮತ್ತಿತರರ ಮಾಂಸದ ಅಂಗಡಿ ತೆರೆಯಿರೆಂದು ಪಂಚಾಯ್ತಿಯ ಹಾಗೂ ಆರೋಗ್ಯ ಇಲಾಖೆ ಅನುಮತಿ ಬೇಕಿದ್ದು ಇದ್ಯಾವುದು ಇಲ್ಲದೆ ಕೋಳಿ ಅಂಗಡಿ ತೆರೆಯಲು ಮುಂದಾಗಿದ್ದಾರೆಂದು ಆರೋಪಿಸಿ, ಸಂಬಂಧಪಟ್ಟವರು ಸ್ಥಳಕ್ಕೆ ಬರುವವರೆಗ

ಡ್ರೈ ಪ್ರೂಟ್ಸ್ ಅಲಂಕಾರ.

ಹುಳಿಯಾರಿನ ಅನಂತಶಯನ ಶ್ರೀರಂಗನಾಥಸ್ವಾಮಿಗೆ ಅಮವಾಸ್ಯೆ ಅಂಗವಾಗಿ ಡ್ರೈ ಪ್ರೂಟ್ಸ್ ನಿಂದ ಮಾಡಿರುವ ವಿಶೇಷ ಅಲಂಕಾರ.

ಪಲ್ಸ್ ಪೋಲಿಯೋ ಬಗ್ಗೆ ನಿರ್ಲಕ್ಷ್ಯ : ಸಾರ್ವಜನಿಕರ ಅಸಮಾಧಾನ

ಪಲ್ಸ್ ಪೋಲಿಯೋದಂತಹ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಸ್ಥಳೀಯ ಪಂಚಾಯ್ತಿ ಹಾಗೂ ಜವಬ್ದಾರಿ ಹೊತ್ತ ರೋಟರಿ ಸಂಸ್ಥೆಯವರು ನಿರ್ಲಕ್ಷ್ಯವಹಿಸಿದ ಕಾರಣ ಮುಂಜಾನೆ ಕೆಲ ಸಮಯ ಪೋಲಿಯೋ ಹನಿ ಹಾಕಲು ಬಂದ ಕಾರ್ಯಕರ್ತೆಯರು ಸೂಕ್ತ ಸ್ಥಳ ದೊರೆಯದೆ ಪರದಾಡಿದರು. ಹುಳಿಯಾರು ಬಸ್ ನಿಲ್ದಾಣದಲ್ಲಿನ ತಂಗುದಾಣ ಸ್ವಚ್ಚಗೊಳಿಸದ್ದರಿಂದ ಪುಟ್ ಪಾತಲ್ಲೆ ಕಾಯುತ್ತಿದ್ದ ಆಶಾಕಾರ್ಯಕರ್ತೆಯರು  ಕಳೆದ ಹಲವಾರು ವರ್ಷಗಳಿಂದ ರೋಟರಿ ಸಂಸ್ಥೆಯವರ ಉಪಸ್ಥಿತಿಯಲ್ಲಿ ಯಶಸ್ವಿಯಾಗಿ ನಡೆದುಕೊಂಡು ಬರುತ್ತಿದ್ದ ಪೋಲಿಯೋ ಕಾರ್ಯಕ್ರಮದ ಬಗ್ಗೆ ಇತ್ತೀಚೆಗೆ ಸಂಘ ಸಂಸ್ಥೆಗಳು ಸೇರಿದಂತೆ ಎಲ್ಲರೂ ನಿರ್ಲಕ್ಷ್ಯ ತಾಳುತ್ತಿದ್ದಾರೆಂಬ ಭಾವನೆ ಉಂಟಾಗಿದೆ.ಈ ಹಿಂದೆ ಪಲ್ಸ್ ಪೋಲಿಯೋ ದಿನ ರೋಟರಿ ಸಂಸ್ಥೆಯವರು ಸಾಕಷ್ಟು ಪ್ರಚಾರ ಸಾಮಗ್ರಿಗಳೊಂದಿಗೆ ಆಗಮಿಸಿ ಗ್ರಾಮದ ಪ್ರತಿಯೊಂದು ಕೇಂದ್ರಗಳಲ್ಲೂ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದರು. ಅಲ್ಲದೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಪ್ರತ್ಯೇಕ ಸ್ಟಾಲ್ ಹಾಕಿ, ಪೋಲಿಯೋ ಬಗೆಗಿನ ಹಾಡುಗಳನ್ನು ಹಾಕಿ ಜನರಲ್ಲಿ ಪೋಲಿಯೋ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಪಂಚಾಯ್ತಿಯವರೂ ಸಹ ಬಸ್ ನಿಲ್ದಾಣದ ತಂಗುದಾಣವನ್ನು ಮುಂಚಿತವಾಗಿಯೇ ಸ್ವಚ್ಚಗೊಳಿಸಿ ಕೂತುಕೊಳ್ಳಲು ಸಜ್ಜುಗೊಳಿಸುತ್ತಿದ್ದರು. ಆದರಿಂದು ತಂಗುದಾಣದ ತುಂಬ ಎಲ್ಲೆಂದರಲ್ಲಿ ಕಸತುಂಬಿ ಕಾಲಿಡಲು ಸಹ ಅಸಹ್ಯವಾಗಿತ್ತು. ಈ ಬಗ್ಗೆ ಗಮನಿಸಿದ ಸಾರ್ವಜನಿಕರು ಪಂಚಾಯ

ಹುಳಿಯಾರು ; ಪಲ್ಸ್ ಪೋಲಿಯೋ

ಆರೋಗ್ಯ ಇಲಾಖೆ ಹಾಗೂ ರೋಟರಿ ಸಹಯೋಗದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಭಾನುವಾರದಂದು ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.   ಹುಳಿಯಾರು ಬಸ್ ನಿಲ್ದಾಣದ ಪೋಲಿಯೋ ಬೂತ್ ನಲ್ಲಿ ಆಶಾಕಾರ್ಯಕರ್ತೆಯರು ಮಕ್ಕಳಿಗೆ ಲಸಿಕೆ ಹಾಕುತ್ತಿರುವುದು.  ಪಟ್ಟಣದ ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಮಾರುತಿನಗರ ಕೇಶವ ಸ್ಕೂಲ್, ಉರ್ದುಶಾಲೆ,ಅಜಾದ್ ನಗರದ ಅಂಗನವಾಡಿ ಕೇಂದ್ರಗಳಲ್ಲಿ ಪೋಲಿಯೋ ಬೂತ್ ಗಳನ್ನು ತೆರೆದು ಬೆಳೆಗ್ಗಿನಿಂದ ಸಂಜೆಯವರೆಗೂ ಮಕ್ಕಳಿಗೆ ಲಸಿಕೆ ಹಾಕಲಾಯಿತು. ಹೋಬಳಿಯ ವಿವಿಧ ಗ್ರಾ.ಪಂಯ ಅಂಗನವಾಡಿ ಕೇಂದ್ರಗಳಲ್ಲೂ ಸಹ ಬೂತ್ ಗಳನ್ನು ತೆರೆದಿದ್ದರು. ಪಟ್ಟಣದ ಬಸ್ ನಿಲ್ದಾಣದ ಬೂತ್ ನಲ್ಲಿ ಆಶಾಕಾರ್ಯರ್ತೆಯರು ಸುತ್ತಮುತ್ತಲಿನ ಹಳ್ಳಿಗಳಿಂದ ಬಸ್ ನಲ್ಲಿ ಯಾರಾದರೂ ೫ವರ್ಷ ಒಳಪಟ್ಟ ಮಕ್ಕಳೊಂದಿಗೆ ಬಂದರೆ ಅವರನ್ನು ಬೂತ್ ನಲ್ಲಿಗೆ ಕರೆತಂದು ಲಸಿಕೆ ಹಾಕುವಕಾರ್ಯದಲ್ಲಿ ತೊಡಗಿದ್ದರು. ರೋಟರಿ ಅಧ್ಯಕ್ಷ ಈ. ರವೀಶ್, ಸದಸ್ಯ ಗಂಗಾಧರ್, ಪೋಲಿಯೋ ಲಸಿಕಾ ಕಾರ್ಯಕ್ರಮದ ಮೇಲ್ವಿಚಾರಕರಾದ ಅನಿಲ್ ಹಾಗೂ ಧನಂಜಯ್ ಅವರು ಸೂಕ್ತ ವ್ಯವಸ್ಥೆ ಮಾಡಿಕೊಟ್ಟು ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗುವಂತೆ ಮಾಡಿದ್ದಾರೆ. ಲಸಿಕಾ ಕಾರ್ಯಕ್ರಮ ಇನ್ನೆರಡು ದಿನ ಮುಂದುವರೆಯಲಿದ್ದು ಮನೆಮನೆಗಳಿಗೆ ತೆರಳಿ ಯಾರಾದರೂ ಮಕ್ಕಳು ಲಸಿಕೆ ಹಾಕಿಸದೆ ಹೋಗಿದ್ದರೆ ಅಂತಹವರಿಗೂ ಲಸಿಕೆ ಹಾಕುವಕಾರ್ಯ

ಗಾಣಧಾಳು ಸೊಸೈಟಿ ಅಧ್ಯಕ್ಷರಾಗಿ ಜಿಎಂಎನ್ ಆಯ್ಕೆ

ಹುಳಿಯಾರು  ಹೋಬಳಿ ಗಾಣಧಾಳು ಕೃಷಿ ಸಹಕಾರ ಸಂಘದ ಅಧ್ಯಕ್ಷರ ಆಯ್ಕೆ ಶನಿವಾರ ನಡೆದಿದ್ದು, ನಿರ್ದೇಶಕರ ಸಹಮತದೊಂದಿಗೆ ಕಳೆದ ಬಾರಿ ಅಧ್ಯಕ್ಷರಾಗಿದ್ದ ಜಿ.ಎಂ.ನೀಲಕಂಠಯ್ಯ ಅವರನ್ನೇ ಮತ್ತೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಉಪಾಧ್ಯಕ್ಷರಾಗಿ ಮೇಲನಹಳ್ಳಿಯ ನಂಜೇಗೌಡ ಅವರು ಆಯ್ಕೆಯಾಗಿದ್ದಾರೆ.   ಜಿ.ಎಂ.ನೀಲಕಂಠಯ್ಯ.

ಕೋಲಾಟ ನೃತ್ಯ.

ಹುಳಿಯಾರಿನ ಶ್ರೀಮಾರುತಿ ಶಾಲೆಯಲ್ಲಿ ನಡೆದ ಶಾಲಾವಾರ್ಷಿಕೋತ್ಸವದಲ್ಲಿ ಮಕ್ಕಳು ಪ್ರದರ್ಶಿಸಿದ ಕೋಲಾಟ ನೃತ್ಯ.

ತಾ.೨೨ - ಲೈಂಗಿಕ ಹಿಂಸೆ ವಿರೋಧಿಸಿ ಜಾಥಾ

ರಾಷ್ಟ್ರಾದ್ಯಂತ ಲೈಂಗಿಕ ಹಿಂಸಾಚಾರ ಹಾಗೂ ಮಹಿಳೆಯ ಮೇಲಿನ ದೌರ್ಜನ್ಯ ಖಂಡಿಸಿ ರಾಜ್ಯಾದ್ಯಂತ ಮಹಿಳಾ ಜಾಥಾ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಹೋಬಳಿಯ ಸೃಜನ ಮಹಿಳಾ ವೇದಿಕೆವತಿಯಿಂದ (ತಾ.೨೨) ಭಾನುವಾರ ಬೆಳಿಗ್ಗೆ ಜಾಥಾ ಹಾಗೂ ಗ್ರಾ.ಪಂ. ಆವರಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ದಿನೇ ದಿನೇ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿದ್ದು, ಇಂತಹ ಕೃತ್ಯವೆಸಗುವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಮಹಿಳೆಯರ ಸುರಕ್ಷತೆಗಾಗಿ ಕಾನೂನುಗಳ ರಚನೆಯ ದೃಷ್ಠಿಯಿಂದ ಈ ಜಾಥಾ ಹಾಗೂ ಸಭೆ ನಡೆಸುತ್ತಿರುವುದಾಗಿ ವೇದಿಕೆಯ ಸಂಚಾಲಕಿ ಜಯಲಕ್ಷ್ಮಿ ತಿಳಿಸಿದ್ದಾರೆ. ಜಾಥಾದ ನಂತರ ಗ್ರಾ.ಪಂ.ಆವರಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು ಮಹಿಳಾ ಸಂಘಟನೆಯವರು ಸೇರಿದಂತೆ ವಿವಿಧ ಸಂಘಟನೆಯವರು ಪಾಲ್ಗೊಳ್ಳುವಂತೆ ಪೂರ್ಣಮ್ಮ ಕೋರಿದ್ದಾರೆ.

ಪಲ್ಸ್ ಪೋಲಿಯೋ ಲಸಿಕೆ

ಹುಳಿಯಾರು : ಪಟ್ಟಣ ಸೇರಿದಂತೆ ಹೋಬಳಿಯ ವಿವಿಧ ಗ್ರಾಮಗಳ ಅಂಗನವಾಡಿ ಕೇಂದ್ರದಲ್ಲಿ (ತಾ.೨೩) ಭಾನುವಾರ ೨ನೇ ಹಂತದ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದ್ದು, ೫ ವರ್ಷ ಒಳಪಟ್ಟ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ರೋಟರಿ ಅಧ್ಯಕ್ಷ ಈ.ರವೀಶ್ ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಲಸಿಕೆ ಹಾಕುವ ಕಾರ್ಯ ನಡೆಯಲಿದ್ದು ಪಟ್ಟಣದ ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ಇಂದಿರಾನಗರ, ಮಾರುತಿನಗರದ ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಹೋಬಳಿಯ ವಿವಿಧ ಹಳ್ಳಿಗಳ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಹಾಕಲಿದ್ದು ಪೋಷಕರು ತಮ್ಮ ಮಗುವನ್ನು ಲಸಿಕಾ ಕೇಂದ್ರದಲ್ಲಿಗೆ ತಪ್ಪದೆ ಕರೆತಂದು ಲಸಿಕೆ ಹಾಕಿಸುವಂತೆ ತಿಳಿಸಿದ್ದಾರೆ.

ಅಂದಾನಪ್ಪ ಸೊಸೈಟಿಗೆ ರಾಮಣ್ಣ ಮತ್ತೊಮ್ಮೆ ಆಯ್ಕೆ

ಹುಳಿಯಾರು  ಪಟ್ಟಣದ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ಆಯ್ಕೆಗಾಗಿ ಶನಿವಾರ ನಿರ್ದೇಶಕರ ಸಭೆ ನಡೆದಿದ್ದು, ನಿರ್ದೇಶಕರ ಸಹಮತದೊಂದಿಗೆ ಮತ್ತೊಮ್ಮೆ ಬಳ್ಳೆಕಟ್ಟೆ ರಾಮಣ್ಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಬಳ್ಳೆಕಟ್ಟೆ ರಾಮಣ್ಣ. ಈ ಬಾರಿಯ ಸೊಸೈಟಿಯ ಚುನಾವಣೆ ರಂಗುಪಡೆದಿದ್ದು ಗ್ರಾ.ಪಂ.,ಯ ಚುನಾವಣೆಗಳಂತೆ ಈ ಚುನಾವಣೆಯೂ ನಡೆಯಿತು. ೧೦ ನಿರ್ದೇಶಕರ ಆಯ್ಕೆಗೆ ೨೧ ಮಂದಿ ಸ್ಪರ್ಧಿಸಿದ್ದು ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ನಡೆದಿದ್ದಿತ್ತು.ಇದನ್ನು ಕಂಡ ಮತದಾರರು ಹಾಗೂ ಸಾರ್ವಜನಿಕರಲ್ಲಿ ಯಾರು ಗೆಲುತ್ತಾರೆಂಬ ಕುತೂಹಲವನ್ನುಂಟುಮಾಡಿತ್ತು. ಆ ಪೈಕಿ ಸಾಲಪಡೆದವರ ಕ್ಷೇತ್ರದಿಂದ ಆಯ್ಕೆಯಾದ ಬಳ್ಳೆಕಟ್ಟೆ ರಾಮಣ್ಣ ಕಳೆದ ಬಾರಿ ಬಾರಿಯೂ ಸೊಸೈಟಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಈ ಬಾರಿಯ ಅಧ್ಯಕ್ಷ ಗಾಧಿ ಅವರಿಗೆ ಒಲಿದು ಬಂದಿದೆ. ಉಪಾಧ್ಯಕ್ಷರಾಗಿ ಕಲ್ಲಳ್ಳಿಯ ಎಂ.ನಾಗರಾಜು ಆಯ್ಕೆಯಾಗಿದ್ದಾರೆ ಎಂದು ಸೊಸೈಟಿಯ ಕಾರ್ಯನಿರ್ವಾಹಣಾಧಿಕಾರಿ ಶಿವಣ್ಣ ತಿಳಿಸಿದ್ದಾರೆ. ೨ ನೇ ಬಾರಿಯೂ ಅಧ್ಯಕ್ಷರಾಗಿ ಆಯ್ಕೆಯಾದ ರಾಮಣ್ಣ ಅವರ ಬೆಂಬಲಿಗರು ರಾಮಣ್ಣಅವರಿಗೆ ಹಾರಹಾಕಿ, ಪಟಾಕಿಸಿಡಿಸಿ ,ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಮಾಡಿದರು.

ಇನ್ನೆರಡು ವಾರದಲ್ಲಿ ರಸ್ತೆಯ ಪ್ಯಾಚ್ ವರ್ಕ್ ಪ್ರಾರಂಭ : ಸಂಸದ

ಹುಳಿಯಾರು-ಶಿರಾ ಹಾಗೂ ಹುಳಿಯಾರು-ಪಂಚನಹಳ್ಳಿ ರಸ್ತೆ ಮಾರ್ಗ ದುಸ್ಥರವಾಗಿದ್ದು ಸಂಚಾರಕ್ಕೆ ತೊಡಕಾಗಿದೆ ಎಂಬುದು ತಮ್ಮ ಗಮನಕ್ಕೆ ಬಂದಿದ್ದು ಈಗಾಗಲೇ ಪಿಡಬ್ಯೂಡಿ ಇಂಜಿನಿಯರ್ ಅವರೊಂದಿಗೆ ಚರ್ಚಿಸಿದ್ದೇನೆ. ಇನ್ನೆರಡು ವಾರದಲ್ಲಿ ಈ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆಯುತ್ತದೆ ಎಂದು ಸಂಸದ ಎಸ್.ಪಿ.ಮುದ್ದುಹನುಮೇಗೌಡ ತಿಳಿಸಿದರು. ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಎಸ್.ಪಿ.ಮುದ್ದುಹನುಮೇಗೌಡ ಹಾಗೂ ಕಾಂಗ್ರೆಸ್ಸ್ ಮುಖಂಡ ಸಾಸಲು ಸತೀಶ್. ಹುಳಿಯಾರಿನ ಪರಿವೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಮಂಗಳೂರಿನಿಂದ ತಮಿಳುನಾಡಿನ ವಿಲ್ಲುಪುರಂಗೆ ಸಂಪರ್ಕ ಕಲ್ಪಿಸುವ ಈ ರಾಷ್ಟ್ರೀಯ ಹೆದ್ದಾರಿ ಹುಳಿಯಾರು ಮಾರ್ಗವಾಗಿ ಹಾದು ಹೋಗಿದ್ದು ಈಗಾಗಲೇ ರಸ್ತೆ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿ ಅಲ್ಲಲ್ಲಿ ನಡೆದಿದೆ.ಆದರೆ ಟೆಂಡರ್ ಪಡೆದ ಕಂಟ್ರಾಕ್ಟರ್ ರಸ್ತೆ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಿರುವುದರಿಂದ ಆತನನ್ನು ಸರ್ಕಾರ ಬ್ಲಾಕ್ ಲಿಸ್ಟ್ ಗೆ ಸೇರಿಸಿದ್ದು, ರೀ ಟೆಂಡರ್ ಕರೆಯಲು ಯೋಜನೆ ರೂಪಿಸಿದೆ ಎಂದರು. ಸದ್ಯ ಹೊಸ ಟೆಂಡರ್ ಆಗುವತನಕ ರಸ್ತೆಯಲ್ಲಿನ ಗುಂಡಿಗಳನ್ನು ಡಾಂಬಾರ್ ಹಾಕಿ ಮುಚ್ಚುವಂತೆ ಪಿಡಬ್ಯೂಡಿ ಇಂಜಿನಿಯರ್ ಗೆ ತಿಳಿಸಿದ್ದು ಕೆಲಸ ಶೀಘ್ರದಲ್ಲೇ ನಡೆಯಲಿದೆ ಎಂದರು. ಹುಳಿಯಾರು ಮಾರ್ಗವಾಗಿ ರೈಲ್ವೆ ಮಾರ್ಗದ ಕಾಮಗಾರಿ ನಡೆಯಲಿದ್ದು ಈ

ಗಾಣಧಾಳು ಗ್ರಾ.ಪಂ. ಬೀಗ : ಹಣ ಬಿಡುಗಡೆಗೆ ಒತ್ತಾಯ

ಹುಳಿಯಾರು  ಹೋಬಳಿ ಗಾಣಧಾಳು ಗಾಮಪಂಚಾಯ್ತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ಯೋಜನೆಯಡಿ ಕೈಗೊಂಡಿದ್ದ ಕಾಮಗಾರಿಗಳ ಹಣವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಸೇರಿ ಗ್ರಾ.ಪಂ.ಗೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ಶುಕ್ರವಾರ ಘಟಿಸಿದೆ. ಹುಳಿಯಾರು ಹೋಬಳಿ ಗಾಣಧಾಳು ಗ್ರಾಮದಲ್ಲಿ ಖಾತ್ರಿಹಣ ಬಿಡುಗಡೆಗೆ ಒತ್ತಾಯಿಸಿ ಸಾರ್ವಜನಿಕರು ಗ್ರಾ.ಪಂ ಕಛೇರಿಗೆ ದಿಢೀರ್ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಈ ಭಾಗದ ಅನೇಕ ರೈತರು ಖಾತ್ರಿ ಯೋಜನೆಯಡಿ ಶೌಚಾಲಯ, ಹಿಂಗುಗುಂಡಿ, ದನದಕೊಟ್ಟಿಗೆ, ಕೃಷಿ ಹೊಂಡ,ಚೆಕ್ ಡ್ಯಾಂ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಗಿಸಿದ್ದು ಸೂಕ್ತ ದಾಖಲೆಗಳನ್ನು ನೀಡಿದ್ದರೂ ಸಹ ಹಣ ಬಿಡುಗಡೆ ಮಾಡುವಲ್ಲಿ ಅಧಿಕಾರಿಗಳು ಹಿಂದೇಟಾಕುತ್ತಿದ್ದಾರೆ. ಈ ಸಂಬಂಧ ಈಗಾಗಲೇ ತಾಲ್ಲೂಕು ಪಂಚಾಯ್ತಿ ಇಓ ಅವರು ಗ್ರಾ.ಪಂ. ಅಧಿಕಾರಿಗಳಿಗೆ ಎನ್.ಎಂ.ಆರ್. ತೆಗೆಯಲು ಆದೇಶ ನೀಡಿ, ಅದರಂತೆ ಕೆಲವು ರೈತರು ಈಗಾಗಲೇ ಎನ್.ಎಂ.ಆರ್ ತೆಗೆದು ತಿಂಗಳು ಕಳೆಯುತ್ತಾ ಬಂದರೂ ಸಹ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಕಾಮಗಾರಿಗಳ ಅನುಷ್ಠಾನಗೊಳಿಸಿಲ್ಲ. ಈ ಬಗ್ಗೆ .ಪಂಚಾಯ್ತಿ ಪಿಡಿಓ ಅವರನ್ನು ಕೇಳಿದರೆ ಅನುಷ್ಠಾನಾಧಿಕಾರಿ ಥಮ್ ಇಂಪ್ರೆಷನ್ ಕೊಡಬೇಕು ಅದುವರೆಗೂ ಹಣ ಬಿಡುಗಡೆಯಾಗುವುದಿಲ್ಲ ಎಂದು ಸಬೂಬು ಹೇಳುತ್ತಾರೆ. ಸಾಲಸೂಲ ಮಾಡಿ ಕಾಮಗಾರಿಗಳನ್ನು ಮುಗಿಸಿದ ತಾಳ್ಮೆಗೆಟ್ಟ ರ

ಬೋರ್ ವೆಲ್ ಹಾವಳಿಯಿಂದ ಪುರಾತನ ಬಾವಿಗಳು ಮಾಯ : ದೇವರಾಜರೆಡ್ಡಿ ನೀರಿನ ಸಂರಕ್ಷಣೆಗೆ ಮಳೆ ಕೊಯ್ಲು ಸೂಕ್ತ ಮಾರ್ಗ

ನೀರಿನ ಅಶ್ರಯ ತಾಣಗಳಾಗಿದ್ದ ಕೆರೆ,ಕಟ್ಟೆ,ಬಾವಿಗಳು ಬರಿದಾಗಿ ನೀರಿಗಾಗಿ ಜನ ಹಾಹಾಕಾರ ಪಡುವಂತಹ ಚಿಂತಾಜನಕ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಹೆಚ್ಚುತ್ತಿರುವ ಬೋರ್ ವೆಲ್ ಗಳು ಕಾರಣವಾಗಿದ್ದು ಅಂತರ್ಜಲ ಬತ್ತಿ ನೀರಿನ ಆಶ್ರಯತಾಣಗಳು ಮಾಯವಾಗುತ್ತಿವೆ ಎಂದು ಚಿತ್ರದುರ್ಗದ ಖ್ಯಾತ ಭೂಗರ್ಭ ಶಾಸ್ತ್ರಜ್ಞ ದೇವರಾಜರೆಡ್ಡಿ ವಿಷಾಧಿಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಮಳೆ ನೀರು ಕೊಯ್ಲು-ಕೃತಕ ಬರಕ್ಕೆ ಶಾಶ್ವತ ಪರಿಹಾರ" ವಿಷಯ ಕುರಿತು ಭೂಗರ್ಭ ಶಾಸ್ತ್ರಜ್ಞ ದೇವರಾಜರೆಡ್ಡಿ ಉಪನ್ಯಾಸ ನೀಡಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಂಗಳೂರಿನ ಬಿ.ಕೃಷ್ಣಪ್ಪ ಟ್ರಸ್ಟ್, ರೈತಸಂಘದ ಸಹಯೋಗದಲ್ಲಿ " ನೀರು-ನೀರು-ನೀರು, ನೀರೆಲ್ಲವೂ ತೀರ್ಥ- ತೀರ್ಥವೆಲ್ಲವೂ ನೀರು " ವಿಷಯದಡಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ : ಮಳೆ ನೀರು ಕೊಯ್ಲು-ಕೃತಕ ಬರಕ್ಕೆ ಶಾಶ್ವತ ಪರಿಹಾರ" ವಿಷಯ ಕುರಿತು ಉಪನ್ಯಾಸ ನೀಡಿದರು. ಅತಿ ಹೆಚ್ಚು ಬೋರ್ ವೆಲ್ ಗಳನ್ನು ಕೊರೆಸಿ ಭೂಮಿಯಲ್ಲಿನ ನೀರನ್ನು ಹೀರುವ ಮೂಲಕ ಭೂಮಿಯನ್ನು ಬರಡಾಗುವಂತೆ ಮಾಡುತ್ತಿದ್ದೇವೆ ಹಾಗೂ ಇದರಿಂದಾಗಿ ಭೂಮಿಯಲ್ಲಿ ಫಲವತ್ತತೆ ಕಡಿಮೆಯಾಗುವಂತೆ ಮಾಡುತ್ತಿದ್ದೇವೆ ಎಂದರು. ಕಳೆದ ೪೦ ವರ್ಷದಿಂದ ಈಚೆಗೆ ಬೋರ್ ವೆಲ್ ಗ

ಅಭಿನಂದನೆ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಪಿಎಲ್ ಡಿ ಬ್ಯಾಂಕ್ ನ ಚುನಾವಣೆಯಲ್ಲಿ ಸಾಲಪಡೆದವರ ಕ್ಷೇತ್ರದಿಂದ ಆಯ್ಕೆಯಾದ ಹುಳಿಯಾರು ಹೋಬಳಿ ಕೆಂಕೆರೆಯ ಕೆ.ಸಿ. ಶಿವಕುಮಾರ್ ಅವರನ್ನು ಸಂಸದ ಮುದ್ದುಹನುಮೇಗೌಡರು ಅಭಿನಂದಿಸಿದರು.

ಉಚಿತ ಸೋಲಾರ್ ಲೈಟ್

ಹುಳಿಯಾರು ಗ್ರಾ.ಪಂ.ನ ಮೂರನೇ ಬ್ಲಾಕ್ ನ ಪರಿಶಿಷ್ಟ ಜಾತಿ , ಪಂಗಡದ ಅರ್ಹ ಫಲಾನುಭವಿಗಳಿಗೆ ಸದಸ್ಯ ಭೈರೇಶ್ ಉಚಿತ ಸೋಲಾರ್ ಲೈಟ್ ಗಳನ್ನು ವಿತರಿಸಿದರು.

ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳು ಮುಖ್ಯ

ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಮುಖ್ಯವಾಗಿದ್ದು ,ಶಾಲಾ ವಾರ್ಷಿಕೋತ್ಸವ ,ಕ್ರೀಡೆ,ಪ್ರತಿಭಕಾರಂಜಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ಕಲ್ಪಿಸಿದಂತಾಗುತ್ತದೆ ಎಂದು ಛಾಯಾಗ್ರಾಹಕ ಈಶ್ವರ್ ತಿಳಿಸಿದರು. ಹುಳಿಯಾರಿನ ಎಂಜಿಎಂ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವವನ್ನು ಛಾಯಾಗ್ರಾಹಕ ಈಶ್ವರ್ ಉದ್ಘಾಟಿಸಿದರು. ಹುಳಿಯಾರಿನ ವಿಜಯನಗರ ಬಡಾವಣೆಯ ಎಂಜಿಎಂ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ೨೦೧೪-೧೫ ನೇ ಸಾಲಿನ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಿಗೆ ಹೊಲಿಸಿದರೆ ಖಾಸಗಿ ಶಾಲೆಗಳ ನಡುವೆ ಹೆಚ್ಚು ಪೈಪೋಟಿ ನಡೆಯುತ್ತಿದ್ದು ಅನೇಕ ವಿಭಿನ್ನ ಕಾರ್ಯಕ್ರಮಗಳನ್ನು ಅಯೋಜಿಸುತ್ತಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲೂ ಸಹ ವಿನೂತನ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಲಿ ಎಂದು ಆಶಿಸಿದರು. ಈ ವೇಳೆ ಮುಖ್ಯ ಶಿಕ್ಷಕಿ ಜಯಮ್ಮ, ಶಿರಾ ಹೆಚ್.ಪಿ.ಎಸ್.ಶಾಲೆಯ ಸಹ ಶಿಕ್ಷಕ ಗಿರೀಶ್, ಪೊಲೀಸ್ ರಂಗಸ್ವಾಮಿ, ಚರ್ಚ್ ನ ಫಾದರ್ ಕುಮಾರ್, ನಂದೀಶ್ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

ಸೂಕ್ತ ಯೋಜನೆಗಳಿಲ್ಲದೆ ನೀರಿನ ಸದ್ಬಳಕೆ ವಿಫಲ : ಸಂಸದ

ನೀರು ಅತ್ಯಮೂಲ್ಯ ಜೀವ ಜಲವಾಗಿದ್ದು ನೀರಿನ ಸಂರಕ್ಷಣೆ ಮುಖ್ಯ. ಆ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಕೈಗೊಂಡಿದ್ದರೂ ಸಹ ನೀರಿನ ಸದ್ಬಳಕೆ ಮಾಡುವವಲ್ಲಿ ನಾವು ವಿಫಲಾಗುತ್ತಿದ್ದೇವೆ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡರು ವಿಷಾಧಿಸಿದರು. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಸಂಸದ ಎಸ್.ಪಿ.ಮುದ್ದಹನುಮೇಗೌಡರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿದರು. ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಇತರರಿದ್ದಾರೆ. ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಂಗಳೂರಿನ ಬಿ.ಕೃಷ್ಣಪ್ಪ ಟ್ರಸ್ಟ್, ರೈತಸಂಘದ ಸಹಯೋಗದಲ್ಲಿ " ನೀರು-ನೀರು-ನೀರು, ನೀರೆಲ್ಲವೂ ತೀರ್ಥ- ತೀರ್ಥವೆಲ್ಲವೂ ನೀರು " ವಿಷಯದಡಿ ಗುರುವಾರ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ದೇಶದ ಭದ್ರತೆಗೆ ಹಣ ವಿನಿಯೋಗಿಸುವಂತೆ ನೀರಿನ ಸಂರಕ್ಷಣೆಯೂ ಮುಖ್ಯವಾಗಿದ್ದು ಅದಕ್ಕಾಗಿ ಸರ್ಕಾರ ಇಂತಿಷ್ಟು ಹಣವನ್ನು ಸರ್ಕಾರ ಮೀಸಲಿಡಬೇಕು ಎಂದರು. ತಾವು ಭೇಟಿ ನೀಡಿದ ಅನೇಕ ಹಳ್ಳಿಗಳಲ್ಲಿ ಮೊದಲ ಸಮಸ್ಯೆ ಎಂದರೆ ಅದು ನೀರಿನ ಸಮಸ್ಯೆಯೇ ಆಗಿರುತ್ತದೆ. ಪ್ರಸ್ತುತದಲ್ಲಿ ಉತ್ತಮ ಮಳೆಗಾಲವಿಲ್ಲದೆ ಅಂತರ್ಜಲ ಬತ್ತಿರುವುದು ನೀರಿನ ಸಮಸ್ಯೆಯನ್ನು ಉಲ್ಬಣಗೊಳ್ಳುವಂತೆ ಮಾಡಿದೆ ಎಂದರು. ಹೇಮಾವತಿ, ತುಂಗಭದ್ರ

ಬ್ಯಾಂಕ್ ಸಿಬ್ಬಂದಿಗೆ ಆತ್ಮೀಯ ಬಿಳ್ಕೊಡುಗೆ

ಕೆನರಾ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವೈ.ಜಿ.ಲಕ್ಷ್ಮಿನಾರಾಯಣಶೆಟ್ಟಿ ಹಾಗೂ ಎಸ್.ಟಿ.ರಾಮಣ್ಣ ಅವರಿಗೆ ಬ್ಯಾಂಕ್ ಸಿಬ್ಬಂದಿಯರು ನೆನಪಿನ ಕಾಣಿಕೆ ನೀಡಿ ಬೀಳ್ಕೊಟ್ಟರು. ಹುಳಿಯಾರಿನ ಕೆನರಾಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವೈ.ಜಿ.ಲಕ್ಷ್ಮಿನಾರಾಯಣಶೆಟ್ಟಿ ಹಾಗೂ ಎಸ್.ಟಿ.ರಾಮಣ್ಣ ಅವರನ್ನು ಬ್ಯಾಂಕ್ ಸಿಬ್ಬಂದಿ ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಬೀಳ್ಕೊಟ್ಟರು. ಹುಳಿಯಾರು ಶಾಖೆಯ ಮ್ಯಾನೇಜರ್ ವಿಜಯ್ ಕುಮಾರ್ ಮಾತನಾಡಿ, ವೈ.ಜೆ.ಎಲ್ ಹಾಗೂ ರಾಮಣ್ಣನವರು ಕೆನರಾ ಬ್ಯಾಂಕ್ ಗೆ ತಮ್ಮದೇ ಆದ ಸೇವೆ ನೀಡಿದ್ದು, ಈಗ ನಿವೃತ್ತಿ ಹೊಂದಿದ್ದಾರೆ. ಇಂತಹ ವ್ಯಕ್ತಿಗಳ ಸೇವೆ ನಮ್ಮ ಬ್ಯಾಂಕ್ ಗೆ ಬೇಕಿದೆ. ಇವರ ಮುಂದಿನ ಜೀವನ ಹರ್ಷದಾಯಕವಾಗಿರಲಿ ಎಂದು ಹಾರೈಸಿದರು. ಈ ವೇಳೆ ಬ್ಯಾಂಕ್ ಸಿಬ್ಬಂದಿಗಳಾದ ಜಯಶಂಕರ್, ರೂಪ್ ರಾಮ್ ಯಾದವ್,ಅಕ್ಷಯ್,ಅನಿಲ್,ಶಿವಣ್ಣ,ಬಸವರಾಜು ಇತರರಿದ್ದರು.

ಶಿವರಾತ್ರಿ ಜಾಗರಣೆ ಅಂಗವಾಗಿ ಭಜನೆ, ಆಟೋಟ ಸ್ಪರ್ಧೆ

ಹುಳಿಯಾರು  ಪಟ್ಟಣದ ಶ್ರೀಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ರಾತ್ರಿ ಮಹಾಶಿವರಾತ್ರಿ ಜಾಗರಣೆ ಅಂಗವಾಗಿ ಸ್ವಾಮಿಗೆ ಮಹಾರುದ್ರಾಭಿಷೇಕ ಕಾರ್ಯ , ಭಜನೆ ಮತ್ತು ವಿವಿಧ ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಹುಳಿಯಾರಿನ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಜಾಗರಣೆ ಅಂಗವಾಗಿ ಅಯೋಜಿಸಿದ್ದ ಆಟೋಟಗಳಲ್ಲಿ ವಿಜೇತರಾದವರಿಗೆ ಸಂಘದವತಿಯಿಂದ ನೆನಪಿನಕಾಣಿಕೆ ನೀಡಲಾಯಿತು. ಮ್ಯೂಸಿಕಲ್ ಛೇರ್, ಮಡಿಕೆ ಹೊಡೆಯುವುದು, ಲೋಟಗಳನ್ನು ಒಂದರ ಮೇಲೊಂದರಂತೆ ಜೋಡಿಸುವುದು,ಕೆರೆದಡ ಸೇರಿದಂತೆ ಇನ್ನಿತರ ವಿನೋದಮಯ ಆಟಗಳನ್ನು ಅಯೋಜಿಸಿದ್ದು ಸುಮಾರು ೬೦ ರಿಂದ ೭೦ ಮಂದಿ ಆಟೋಟದಲ್ಲಿ ಪಾಲ್ಗೊಂಡಿದ್ದರು. ವಿಜೇತರಾದವರಿಗೆ ಟ್ರಸ್ಟ್ ವತಿಯಿಂದ ನೆನಪಿನಕಾಣಿಕೆ ವಿತರಿಸಲಾಯಿತು. ಹುಳಿಯಾರಿನ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಜಾಗರಣೆ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಆಟಗಳನ್ನು ನಡೆಸಲಾಯಿತು. ಅಕ್ಕಮಹಾದೇವಿ ಮಹಿಳಾ ಭಜನಾ ತಂಡದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಸಂಜೆಯಿಂದ ಪ್ರಾರಂಭವಾದ ದರ್ಶನದಲ್ಲಿ ಅಲಂಕೃತ ಸ್ವಾಮಿಯನ್ನು ನೋಡಲು ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿದ್ದು , ಸರದಿ ಸಾಲಿನಲ್ಲಿ ಸಾಗುವ ಮೂಲಕ ಸ್ವಾಮಿಯ ದರ್ಶನ ಪಡೆದು ಹಣ್ಣುಕಾಯಿ ಮಾಡಿಸಿದರು. ಸಂಜೆ ೬ ರಿಂದ ರಾತ್ರಿ ೧೧ ರ ವರೆಗೂ ತಂಡೋಪತಂಡವಾಗಿ ಜನ ಆಗಮಿಸುತ್ತಿದ್ದು ಕಂಡುಬಂತು. ಬೆಳಗಿನಜಾವ ೩ ರಿ

ಸರ್ಕಾರಿ ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ವಿರಳ : ಜಿಪಂ ಸದಸ್ಯೆ ಮಂಜುಳಾ

ಪ್ರಸ್ತುತದಲ್ಲಿ ಅನೇಕ ಸರ್ಕಾರಿ ಶಾಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ವಿರಳವಾಗುತ್ತಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯು ಗಮನ ಹರಿಸಬೇಕು. ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಸಾಂಸ್ಕೃತಿಕಕಾರ್ಯಕ್ರಮಗಳನ್ನು ಕಡ್ಡಾಯ ಮಾಡಬೇಕು ಎಂದು ಜಿ.ಪಂ.ಸದಸ್ಯೆ ಮಂಜುಳಾಗವಿರಂಗಯ್ಯ ತಿಳಿಸಿದರು. ಹುಳಿಯಾರಿನ ಎಂಪಿಎಸ್ ಶಾಲೆಯ ೨೦೧೪-೧೫ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಜಿ.ಪಂ.ಸದಸ್ಯೆ ಮಂಜುಳಾ ಉದ್ಘಾಟಿಸಿದರು. ಹುಳಿಯಾರಿನ ಎಂಪಿಎಸ್ ಶಾಲೆಯ ಅಯೋಜಿಸಿದ್ದ ೨೦೧೪-೧೫ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಖಾಸಗಿ ಶಾಲೆಯವರು ನಾಮೇಲೂ, ತಾಮೇಲೂ ಎಂಬಂತೆ ಸಾಂಸ್ಕೃತಿಕಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಆದರೆ ಸರ್ಕಾರಿ ಶಾಲೆಗಳಲ್ಲಿ ಇಂತಹ ಆಚರಣೆಗಳು ಕಡಿಮೆ ಎಂದು ವಿಷಾಧಿಸಿದರು. ಪಠ್ಯದಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿನ ಪ್ರತಿಭೆಯನ್ನು ಗುರ್ತಿಸಬಹುದಾಗಿದೆ ಹಾಗೂ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿದಂತಾಗುತ್ತದೆ ಎಂದರು.ಸರ್ಕಾರ ಉಚಿತ ಶಿಕ್ಷಣದ ಜೊತೆಗೆ ಪುಸ್ತಕ,ಬಟ್ಟೆ, ಬಿಸಿಯೂಟ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಿದ್ದು ಮಕ್ಕಳು ಚೆನ್ನಾಗಿ ಓದಬೇಕು ಎಂದರು. ಸಿ.ಆರ್.ಪಿ ಪ್ರೇಮಲೀಲಾ ಕ್ರೀಡಾ ವಿಜೇತಮಕ್ಕಳಿಗೆ ಬಹುಮಾನ ವಿತರಿಸಿದರು. ಶಾಲೆಯ ಮುಖ್ಯಶಿಕ್ಷಕ ನಂದವಾಡಗಿ,ಮುಖಂ

ತಾ.೧೯- ರಾಜ್ಯಮಟ್ಟದ ವಿಚಾರ ಸಂಕಿರಣ

ಇಲ್ಲಿನ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಬೆಂಗಳೂರಿನ ಬಿ.ಕೃಷ್ಣಪ್ಪ ಟ್ರಸ್ಟ್, ರೈತಸಂಘದ ಸಹಯೋಗದಲ್ಲಿ " ನೀರು-ನೀರು-ನೀರು, ನೀರೆಲ್ಲವೂ ತೀರ್ಥ- ತೀರ್ಥವೆಲ್ಲವೂ ನೀರು " ವಿಷಯದಡಿ ರಾಜ್ಯಮಟ್ಟದ ವಿಚಾರ ಸಂಕಿರಣ ತಾ.೧೯ರ ಗುರುವಾರ ಬೆಳಿಗ್ಗೆ ನಡೆಯಲಿದೆ. ವಿಚಾರ ಸಂಕಿರಣವನ್ನು ಸಂಸದ ಎಸ್.ಪಿ.ಮುದ್ದಹನುಮೇಗೌಡ ಉದ್ಘಾಟಿಸಲಿದ್ದು, ಶಾಸಕ ಸಿ.ಬಿ.ಸುರೇಶ್ ಬಾಬು ಅಧ್ಯಕ್ಷತೆವಹಿಸುವರು. ಭೂಗರ್ಭ ಶಾಸ್ತ್ರಜ್ಞರಾದ ದೇವರಾಜರೆಡ್ಡಿಅವರು ಮಳೆನೀರು ಕೊಯ್ಲು-ಕೃತಕ ಬರಕ್ಕೆ ಶಾಶ್ವತ ಪರಿಹಾರ" ವಿಷಯ ಕುರಿತ ಉಪನ್ಯಾಸ ನೀಡಲಿದ್ದಾರೆ.. ಇದೇ ದಿನ ಮಧ್ಯಾಹ್ನ ಪ್ರಾಚಾರ್ಯ ಬಿಳಿಗಿರಿ ಕೃಷ್ಣಮೂರ್ತಿ ಹಾಗೂ ರುದ್ರಪ್ಪ ಅವರ ಉಪಸ್ಥಿತಿಯಲ್ಲಿ ತಿಪಟೂರಿನ ಅಕ್ಷಯಕಲ್ಪದ ಎಂಡಿ ಆಗಿರುವ ಡ.ಜಿ.ಎಸ್.ಎಸ್.ರೆಡ್ಡಿ ಅವರಿಂದ " ಮರಕ್ಕೆ ಬೇಸಾಯ-ಮೈಲನಹಳ್ಳಿ ಪ್ರಯೋಗ" ವಿಷಯ ಕುರಿತು ಉಪನ್ಯಾಸ ಅಯೋಜಿಸಲಾಗಿದೆ. ಈ ಭಾಗದ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾಹಿತಿ ಪಡೆಯುವಂತೆ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಳಿಯಾರಿನ ವಿವಿಧೆಡೆ ಶಿವ ಸ್ಮರಣೆ

ಹುಳಿಯಾರು  ಪಟ್ಟಣ ಸೇರಿದಂತೆ ಹೋಬಳಿಯ ವಿವಿಧ ದೇವಾಲಯಗಳಲ್ಲಿ ಮಂಗಳವಾರ ಶಿವರಾತ್ರಿಯ ಅಂಗವಾಗಿ ವಿಶೇಷ ಪೂಜೆ,ಅಭಿಷೇಕ,ಅಲಂಕಾರ ಹಾಗೂ ಜಾಗರಣೆ ಕಾರ್ಯ ಶ್ರದ್ದಾಭಕ್ತಿಯಿಂದ ನಡೆಯುವ ಮೂಲಕ ಎಲ್ಲೆಲ್ಲೂ ಶಿವ ಸ್ಮರಣೆ ಮಾಡುತ್ತಿದ್ದು ಕಂಡುಬಂತು. ಹುಳಿಯಾರಿನ ಮಲ್ಲೇಶ್ವರಸ್ವಾಮಿಗೆ ಶಿವರಾತ್ರಿ ಅಂಗವಾಗಿ ಮಾಡಿರುವ ವಿಶೇಷ ಅಲಂಕಾರ. ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿಯ ಅಂಗವಾಗಿ ಮಲ್ಲಿಕಾರ್ಜುನಯ್ಯ ಮತ್ತು ವಿರೇಶ್ ಅವರ ಪೌರೋಹಿತ್ಯದಲ್ಲಿ ಮುಂಜಾನೆಯಿಂದಲೇ ಸ್ವಾಮಿಗೆ ಅಭಿಷೇಕ,ಸಹಸ್ರನಾಮಾರ್ಚನೆ,ಬಿಲ್ವಾರ್ಚನೆ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳನ್ನು ನಡೆಸಿದ್ದಲ್ಲದೆ, ಮಹಾರುದ್ರಾಭಿಷೇಕ ಹಾಗೂ ಭಜನಾ ಕಾರ್ಯ ಹಾಗೂ ಮಕ್ಕಳಿಗೆ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ವಾಮಿಯ ದರ್ಶನಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಿದ್ದು ಪಟ್ಟಣ ಸೇರಿದಂತೆ ಸುತ್ತಮುತ್ತಲಿನವರು ಆಗಮಿಸಿ ಸ್ವಾಮಿಯ ದರ್ಶನಪಡೆದರು. ಗಣಪತಿದೇವಾಲಯದಲ್ಲಿ ಹಬ್ಬ ಅಂಗವಾಗಿ ವಿನಾಯಕನಿಗೆ ವಿಶೇಷ ಪೂಜೆ ಹಾಗೂ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಹುಳಿಯಾರಿನ ಶ್ರೀಗಣಪತಿ ದೇವಾಲಯದಲ್ಲಿ ಶಿವರಾತ್ರಿ ಅಂಗವಾಗಿ ವಿನಾಯಕನಿಗೆ ಮಾಡಿದ್ದ ವಿಶೇಷ ಬೆಣ್ಣೆ ಅಲಂಕಾರ . ಗಾಂಧಿಪೇಟೆಯ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಆರ್ಯವೈಶ್ಯಮಂಡಳಿಯಿಂದ ನಗರೇಶ್ವರಸ್ವಾಮಿಗೆ ಅರ್ಚನೆ, ಅಭಿಷೇಕ ನಡೆಯಿತು. ಹೋಬಳಿ ಕೆಂಕೆರೆ ಗ್ರಾಮದ ಶ್ರೀಕ

ಕೆರೆದಡದಲ್ಲಿ ವ್ಯಕ್ತಿಯ ಶವಪತ್ತೆ

ಹುಳಿಯಾರು  ಹೋಬಳಿ ಬೆಳ್ಳಾರದ ಹೊಸಕೆರೆಯ ದಡದಲ್ಲಿ ವ್ಯಕ್ತಿಯೊಬ್ಬನ ಶವ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದ್ದು, ಶವವನ್ನು ಕಂಡ ಸ್ಥಳೀಯರು ಪೋಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೋಲೀಸರು ಪರಿಶೀಲಿಸಿದಾಗ ಮೃತ ವ್ಯಕ್ತಿಯ ಜೇಬಲ್ಲಿ ಆಧಾರ್ ಕಾರ್ಡ್ ಕಂಡುಬಂದಿದ್ದು, ಅದರಲ್ಲಿನ ಮಾಹಿತಿ ಅನ್ವಯ ಈತ ಬೆಂಗಳೂರಿನ ನಾಗಶೆಟ್ಟಿಹಳ್ಳಿಯ ಶ್ರೀನಿವಾಸ್ (೩೨) ಎಂದು ಗುರ್ತಿಸಿದ್ದಾರೆ. ಶವದ ಹತ್ತಿರ ವಿಷದ ಬಾಟೆಲ್ ಸಹ ಬಿದಿದ್ದು ಈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಿದ್ದಾರೆ. ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.

ತಾ.೧೯ - ೩೮೮ನೇ ಶಿವಾಜಿ ಜಯಂತ್ಯೋತ್ಸವ

ತುಮಕೂರು ಜಿಲ್ಲಾ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಕ್ಷತ್ರಿಯ ಮರಾಠ ಜನಾಂಗದ ಸಹೋಗದಲ್ಲಿ ನಾಳೆ(ತಾ.೧೯) ಗುರುವಾರ ತುಮಕೂರಿನ ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಛತ್ರಪತಿ ಶಿವಾಜಿಯ ೩೮೮ನೇ ಶಿವಾಜಿ ಜಯಂತ್ಯೋತ್ಸವ ನಡೆಯಲಿದ್ದು ಹುಳಿಯಾರು ಹಾಗೂ ಸುತ್ತಮುತ್ತಲಿನ ಮರಾಠ ಸಮುದಾಯದವರು ಆಗಮಿಸುವಂತೆ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನ ತಾಲ್ಲೂಕು ಅಧ್ಯಕ್ಷ ಗಂಗಾಧರರಾವ್ ಕರ್ಮೊರೆ ತಿಳಿಸಿದ್ದಾರೆ. ಜಯಂತ್ಯೋತ್ಸವದ ಅಂಗವಾಗಿ ಜಾನಪದ ಕಲಾತಂಡಗಳ ಜೊತೆ ಶಿವಾಜಿಯ ಭಾವಚಿತ್ರದ ವೈಭವಯುತ ಮೆರವಣಿಗೆ ನಡೆಯಲಿದ್ದು ಚಿಕ್ಕನಾಯಕನಹಳ್ಳಿ ಭಾಗದಿಂದ ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಹೋಬಳಿಯ ವಳಗೇರಹಳ್ಳಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಿದ್ದು , ಮರಾಠ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದ್ದಾರೆ.

ಮಕ್ಕಳಿಗೆ ನೀಡಿದ ಸೈಕಲ್ ಗಳನ್ನು ಗೃಹ ಕೆಲಸಕ್ಕೆ ಬಳಸಬೇಡಿ

ಮಕ್ಕಳನ್ನು ಶಾಲೆಯತ್ತ ಅಕರ್ಷಿಸುವ ನಿಟ್ಟಿನಲ್ಲಿ ಸರ್ಕಾರ ಪ್ರೌಢಶಾಲಾ ಮಕ್ಕಳಿಗೆ ಉಚಿತ ಸೈಕಲ್ ನೀಡುತ್ತಿದ್ದು, ಮಕ್ಕಳು ತಾವು ಪಡೆದ ಸೈಕಲನ್ನು ಮನೆಕೆಲಸಕ್ಕೆ ಬಳಸದೆ ನಿತ್ಯ ಶಾಲೆಗೆ ಸೈಕಲ್ ನಲ್ಲೇ ಬರುವಂತೆ ತಾ.ಪಂ.ಸದಸ್ಯ ಕೆಂಕೆರೆ ನವೀನ್ ತಿಳಿಸಿದರು.   ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ೮ ನೇ ತರಗತಿಯ ಮಕ್ಕಳಿಗೆ ತಾ.ಪಂ.ಸದಸ್ಯ ಕೆಂಕೆರೆ ನವೀನ್ ಉಚಿತ ಸೈಕಲ್ ವಿತರಿಸಿದರು. ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆಯ ೮ ನೇ ತರಗತಿಯ ಮಕ್ಕಳಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಸೈಕಲ್ ವಿತರಿಸಿ ಮಾತನಾಡಿದರು. ಸರ್ಕಾರ ಮಕ್ಕಳ ವಿದ್ಯಾಭ್ಯಾಸಕ್ಕೆಂದು ಕೋಟ್ಯಾಂತರ ರೂ ಖರ್ಚುಮಾಡುವ ಮೂಲಕ ಬಿಸಿಯೂಟ, ಸೈಕಲ್ ವಿತರಣೆ, ಪಠ್ಯಪುಸ್ತಕ , ಸಮವಸ್ತ್ರ, ಸ್ಕಾಲರ್ ಶಿಪ್ ನೀಡುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುತ್ತಿದೆ ಎಂದರು. ಸರ್ಕಾರ ನೀಡುವ ಸೌಲಭ್ಯಗಳನ್ನು ಮಕ್ಕಳು ಪಡೆಯುವುದು ಎಷ್ಟು ಮುಖ್ಯವೋ ಅಂತೆಯೇ ತಪ್ಪದೇ ನಿತ್ಯ ಶಾಲೆಗೆ ಬರುವುದು ಅಗತ್ಯವಾಗಿದೆ ಹಾಗೂ ಪೋಷಕರು ತಮ್ಮ ಮಕ್ಕಳನ್ನು ಕೂಲಿ ಕೆಲಸಕ್ಕೆ ಕಳುಹಿಸದೆ ಶಾಲೆಗೆ ಕಳುಹಿಸಿ ಎಂದರು. ಸೈಕಲ್ ವಿತರಣಾ ಸಮಾರಂಭದಲ್ಲಿ ಉಪಪ್ರಾಂಶುಪಾಲರಾದ ಇಂದಿರಾ, ಎಸ್ಡಿಎಂಸಿ ಉಪಾಧ್ಯಕ್ಷ ರಂಗನಕೆರೆ ಮಹೇಶ್, ಗ್ರಾ.ಪಂ.ಉಪಾಧ್ಯಕ್ಷೆ ಅಬಿದುನ್ನಿಸಾ,ಕೆಂಕೆರೆ ಗ್ರಾ.ಪಂ.ಸದಸ್ಯೆ ರೇಣುಕಮ್ಮ,ಮುಖಂಡ ಜಲಾಲ್ ಸಾಬ್,ದೈ

ತಾ.೧೯ಕ್ಕೆ ತಮ್ಮಣ್ಣಸ್ವಾಮಿ ಜಾತ್ರೆ

ಹುಳಿಯಾರು  ಹೋಬಳಿ ದಬ್ಬಗುಂಟೆಯ ಶ್ರೀತಮ್ಮಣ್ಣಸ್ವಾಮಿ ಸನ್ನಿಧಿಯಲ್ಲಿ ಶಿವರಾತ್ರಿ ಅಂಗವಾಗಿ ತಾ.೧೯ರ ಗುರುವಾರದಂದು ಜಾತ್ರಾಮಹೋತ್ಸವ ನಡೆಯಲಿದೆ. ಗುರುವಾರ ಬೆಳಿಗ್ಗೆ ಕ್ಯಾತೇಲಿಂಗೇಶ್ವರಸ್ವಾಮಿ ಹಾಗೂ ಕ್ಯಾತದೇವರಹಟ್ಟಿ, ಗಾಣಧಾಳು ಮತ್ತು ದಬ್ಬಗುಂಟೆ ಕೋಲುದೇವರ ವಿಸಲುಗೋಡೆ ಆಗಮನ ನಡೆದು ನಂತರ ಮ್ಧ್ಯಾಹ್ನ ದಬ್ಬಗುಂಟೆ ಗೌಡರ ಮನೆಯ ಮೊದಲವಟ್ಟು, ಹಣ್ಣು ಹರಕೆ ತೀರಿಸುವ ಕಾರ್ಯ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಂಜೆ ರಸಮಂಜರಿ ಕಾರ್ಯಕ್ರಮ ಹಾಗೂ ಕರ್ನಾಟಕ ರಕ್ಷಣಾ ಸೇವೆಯ ಉದ್ಘಾಟನೆ ನಡೆಯಲಿದೆ. ಶುಕ್ರವಾರ ಮುಡಿ ತೆಗೆಯುವಕಾರ್ಯ ನಡೆಯಲಿದೆ.

ಹುಳಿಯಾರಿನ ವಿವಿಧೆಡೆ ಶಾಸಕ ಸಿಬಿಎಸ್ ಹುಟ್ಟುಹಬ್ಬ

ಶಾಸಕ ಸಿ.ಬಿ.ಸುರೇಶ್ ಬಾಬು ಅವರ ನೇ ವರ್ಷದ ಹುಟ್ಟುಹಬ್ಬವನ್ನು ಪಟ್ಟಣದ ವಿವಿಧೆಡೆ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಹುಳಿಯಾರಿನ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಏಜೆಂಟರ ಹಾಗೂ ಮಾಲೀಕರ ಸೇವಾಛಾರಿಟಬಲ್ ಟ್ರಸ್ಟ್ ನಿಂದ ಆಚರಿಸಲಾದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿರುವ ಶಾಸಕರು. ಖಾಸಗಿ ಬಸ್ ಏಜೆಂಟರ ಹಾಗೂ ಮಾಲೀಕರ ಸೇವಾಛಾರಿಟಬಲ್ ಟ್ರಸ್ಟ್ ನಿಂದ ಬಸ್ ನಿಲ್ದಾಣದಲ್ಲಿ ಬಸ್ ಏಜೆಂಟರ್ ಗಳು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಚಾಲನೆ ನೀಡಿದರು. ನಂತರ ರಾಂಗೋಪಾಲ್ ಸರ್ಕಲ್ ನಲ್ಲಿ ಸಿಬಿಸ್ ಅಭಿಮಾನಿ ಬಳಗ ಹಾಗೂ ಜೆಡಿಎಸ್ ಕಾರ್ಯಕರ್ತರೆಲ್ಲಾ ಸೇರಿ ಆಚರಿಸಿದರೆ, ಗ್ರಾ.ಪಂ.ಸದಸ್ಯರುಗಳಾದ ಪಟಾಕಿ ಶಿವಣ್ಣ, ಅಶೋಕ್ ಬಾಬು,ಹೇಮಂತ್,ಬಾಲರಾಜ್ ಇನ್ನಿತರರು ತಿಪಟೂರು ರಸ್ತೆಯಲ್ಲಿ ಆಚರಿಸಿದರು. ಉರ್ದುಶಾಲೆ ದೇವಾಂಗದಾರರ ಸಂಘ,ಪೋಟೋ ಗ್ರಾಫರ್ ಸಂಘ ಕೂಡ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಶುಭಕೋರಿದರು. ಹುಳಿಯಾರಿನ ಉರ್ದುಶಾಲೆಯಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಮುತುವಲ್ಲಿ ಜಬೀಉಲ್ಲಾ,ಜಹೀರ್ ಸಾಬ್,ಇಮ್ರಾಜ್ ಹಾಗೂ ಶಾಲಾ ಶಿಕ್ಷಕರು ಇದ್ದರು. ಎಲ್ಲರ ಅಭಿಮಾನಕ್ಕೆ ತಾವು ಚಿರಋಣಿ ಎಂದ ಶಾಸಕ ಸುರೇಶ್ ಬಾಬು , ತನ್ನ ಮೇಲೆ ಅಭಿಮಾನವಿಟ್ಟು ಹುಟ್ಟುಹಬ್ಬ ಆಚರಿಸುತ್ತಿರುವುದಕ್ಕೆ ತಾವು ಅಬಾರಿಯಾಗಿದ್ದು, ತಮ್ಮ ಈ ಕಾರ್ಯವನ್ನು ಎಂದಿಗೂ ಮರೆಯುವುದಿಲ್ಲ ಎಂದರು. ಶಾಸಕರೇ ಸ್ವಯ

ಶಿವರಾತ್ರಿ ಹಬ್ಬ ಸಂತೆ ಜೋರು

ಹುಳಿಯಾರು  ಪಟ್ಟಣದಲ್ಲಿ ಮಂಗಳವಾರದ ಶಿವರಾತ್ರಿ ಹಬ್ಬದ ಅಂಗವಾಗಿ ಸೋಮವಾರ ಹಬ್ಬ ಸಂತೆ ನಡೆಯಿತು. ಹೋಬಳಿಯ ಸುತ್ತಮುತ್ತಲ ಹಳ್ಳಿಗರು ಹಬ್ಬಕ್ಕೆ ಬೇಕಾದ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದು ಸಾಮಾನ್ಯವಾಗಿತ್ತು.  ಹುಳಿಯಾರಿನಲ್ಲಿ ಸಂತೆ ಮುಗಿಸಿ ವಾಪಸ್ಸ್ ಹೋಗುತ್ತಿರುವುದು. ಶಿವರಾತ್ರಿ ಹಬ್ಬದ ವಿಶೇಷ ಅಡುಗೆ ಎಂದು ಬಿಂಬಿತವಾಗಿರುವ ಹುರಿಗಡಲೆ ಹಿಟ್ಟಿನ ತಮಟ(ತಂಬಿಟ್ಟು) ಮಾಡಲು ಬೇಕಾದ ಕಡಲೆ ಹಾಗೂ ಬೆಲ್ಲಕೊಂಡುಕೊಳ್ಳುವಲ್ಲಿ ಜನ ದಿನಸಿ ಅಂಗಡಿ ತುಂಬಿಲ್ಲಾ ತುಂಬಿದ್ದರು. ಶಿವ ಪೂಜೆಗೆ ಬೇಕಾದ ಮಡಿವಸ್ತ್ರಕೊಳ್ಳುವಲ್ಲಿ ಬಟ್ಟೆಅಂಗಡಿಗಳಲ್ಲಿ ಜನ ಕಂಡುಬಂದರೂ, ಸಂತೆಯಲ್ಲೂ ಸಹ ಶಿವರಾತ್ರಿಯ ವಸ್ತ್ರ ಎಂದು ಕೂಗುತ್ತಾ ಮಾರಾಟ ಮಾಡುತ್ತಿದ್ದರು. ಕಡ್ಲೆ ಬೆಲ್ಲದ ಬೆಲೆ ತುಸು ಹೆಚ್ಚಿದ್ದರೂ ಸಹ ಹಬ್ಬದ ಹಿನ್ನಲೆಯಲ್ಲಿ ಕೊಳ್ಳುತ್ತಿದ್ದರು. ಸಂತೆಯ ಹಿನ್ನಲೆಯಲ್ಲಿ ಅಕ್ಕಪಕ್ಕದ ಹಳ್ಳಿಗಳಿಂದ ಜನ ಆಗಮಿಸಿದ್ದರಿಂದ ಪಟ್ಟಣದ ಬಸ್ ನಿಲ್ದಾಣ, ರಾಜ್ ಕುಮಾರ್ ರಸ್ತೆ ಹಾಗೂ ರಾಂಗೋಪಾಲ್ ಸರ್ಕನ್ ನಲ್ಲಿ ಹೆಚ್ಚು ಜನದಟ್ಟಣೆ ಕಂಡುಬಂತು ಹಾಗೂ ಸಂಜೆಯಾಗುತ್ತಲೇ ಜನ ವಾಪಸ್ಸ್ ತಮ್ಮ ಹಳ್ಳಿಗಳತ್ತ ಹೊರಟಿದ್ದರಿಂದ ಬಸ್ ಗಳು ಜನರಿಂದ ತುಂಬಿದ್ದವು. ಒಟ್ಟಾರೆ ಈ ಬಾರಿ ಉತ್ತಮ ಮಳೆಯಾಗಿದ್ದರ ಪರಿಣಾಮ ಫಸಲು ಸಹ ಉತ್ತಮವಾಗಿ ಬೆಳೆದು ರೈತರ ಕೈಹತ್ತಿದ್ದು ಶಿವರಾತ್ರಿ ಹಬ್ಬವನ್ನು ಕಳೆಗಟ್ಟುವಂತೆ ಮಾಡಿದೆ.

ಪರೀಕ್ಷಾರ್ಥಿಗಳಿಗೆ ಆರೋಗ್ಯ ಸ್ವಾಸ್ಥ್ಯ ಬಹುಮುಖ್ಯ : ವೈದ್ಯ ಸಿದ್ದರಾಮಯ್ಯ

ಐ.ಎ.ಎಸ್ ಹಾಗೂ ಕೆ.ಎ.ಎಸ್ ಸೇರಿದಂತೆ ಇನ್ನಿತರ ಉನ್ನತ ಪರೀಕ್ಷೆಗಳನ್ನು ಬರೆಯುವಂತೆ ಪರೀಕ್ಷಾರ್ಥಿಗಳು ಉತ್ತಮ ಆರೋಗ್ಯ ಸ್ವಾಸ್ಥ್ಯವನ್ನು ಹೊಂದಿದ್ದಾಗ ಮಾತ್ರ ಹೆಚ್ಚಿನ ಅಭ್ಯಾಸ ಮಾಡಲು ಸಾಧ್ಯವಾಗುತ್ತದೆ ಎಂದು ತಾಲ್ಲೂಕು ವೈದ್ಯರ ಸಂಘದ ಸಿದ್ದಶ್ರೀಕ್ಲಿನಿಕ್ ನ ವೈದ್ಯ ಸಿದ್ದರಾಮಯ್ಯ ತಿಳಿಸಿದರು. ಹುಳಿಯಾರು ಹೋಬಳಿ ವೀರಶೈವ ಸಮಾಜದವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗಾಗಿ ಅಯೋಜಿಸಿದ್ದ ಉಚಿತ ಮಾರ್ಗದರ್ಶನ ಶಿಬಿರವನ್ನು ವೈದ್ಯ ಸಿದ್ದರಾಮಯ್ಯ ಉದ್ಘಾಟಿಸಿದರು. ಹುಳಿಯಾರು ಹೋಬಳಿ ವೀರಶೈವ ಸಮಾಜ, ಬಸವಸಮಿತಿ, ಶ್ರೀಬಸವೇಶ್ವರ ಪತ್ತಿನ ಸಹಕಾರ ಸಂಘ ಹಾಗೂ ಶ್ರೀ ಶಿವ ವಿವಿದೋದ್ದೇಶ ಸಹಕಾರ ಸಂಘದವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುವ ವಿದ್ಯಾರ್ಥಿಗಳಿಗಾಗಿ ಬಸವಭವನದಲ್ಲಿ ಭಾನುವಾರ ಅಯೋಜಿಸಿದ್ದ ಉಚಿತ ಮಾರ್ಗದರ್ಶನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಸಮಾಜದಲ್ಲಿ ಸುಶಿಕ್ಷಿತರ ಸಂಖ್ಯೆ ಹೆಚ್ಚಾದಂತೆ ನಮ್ಮ ಸಂಸ್ಕೃತಿ ವಿನಾಶದತ್ತ ಸಾಗುತ್ತಿದ್ದು ಮುಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಕಣ್ಮರೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ವಿಷಾಧಿಸಿದರು. ಯಾರು ಸಮಾಧಾನ, ಕ್ಷಮಾಗುಣ, ತಾಳ್ಮೆ ಹಾಗೂ ವಿನಮ್ರತೆಯನ್ನು ಮೈಗೂಡಿಸಿಕೊಂಡು ನಡೆಯುತ್ತಾರೋ ಅಂತಹವರು ಮಾತ್ರ ತಮ್ಮ ಗುರಿಯನ್ನು ತಲುಪುತ್ತಾರೆ ಎಂದರು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ವೇಳೆ ಹಾಗೂ ಪರೀಕ್ಷೆಗಳಿಗೆ ತಯಾರಿ

ತಾ.೧೭- ಮಹಾರುದ್ರಾಭಿಷೇಕ

ಹುಳಿಯಾರು  ಪಟ್ಟಣದ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ತಾ.೧೭ರ ಮಂಗಳವಾರ ರಾತ್ರಿ ಮಹಾರುದ್ರಾಭಿಷೇಕ ಕಾರ್ಯ ನಡೆಯಲಿದೆ. ಹಬ್ಬದ ಅಂಗವಾಗಿ ಈಶ್ವರಸ್ವಾಮಿಗೆ ಅಭಿಷೇಕ ,ಅರ್ಚನೆ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳೊಂದಿಗೆ ಮಹಾಮಂಗಳಾರತಿ ನಡೆಯಲಿದೆ. ಇದೇ ದಿನ ರಾತ್ರಿ ಜಾಗರಣೆ ಕಾರ್ಯಕ್ರಮವಿದ್ದು ಸ್ವಾಮಿಗೆ ರುದ್ರಾಭಿಷೇಕ ಕಾರ್ಯ ಹಾಗೂ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಸಹ ಏರ್ಪಡಿಸಲಾಗಿದೆ. ರುದ್ರಾಭಿಷೇಕಕ್ಕೆ ಭಾಗವಹಿಸುವಂತಹ ಭಕ್ತರು ೧೦೧ರೂಗಳನ್ನು ನೀಡಿ ರಸೀದಿ ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮಲ್ಲಿಕಾರ್ಜುನಯ್ಯ(೯೭೪೨೪೮೨೧೩೯) ಮತ್ತು ಚನ್ನಬಸವಯ್ಯ(೯೯೪೫೭೩೯೬೦೫) ಸಂಪರ್ಕಿಸುವಂತೆ ಕೋರಿದ್ದಾರೆ.