ಹುಳಿಯಾರು ಪಟ್ಟಣದ ಶ್ರೀಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮಂಗಳವಾರ ರಾತ್ರಿ ಮಹಾಶಿವರಾತ್ರಿ ಜಾಗರಣೆ ಅಂಗವಾಗಿ ಸ್ವಾಮಿಗೆ ಮಹಾರುದ್ರಾಭಿಷೇಕ ಕಾರ್ಯ , ಭಜನೆ ಮತ್ತು ವಿವಿಧ ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ಹುಳಿಯಾರಿನ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಜಾಗರಣೆ ಅಂಗವಾಗಿ ಅಯೋಜಿಸಿದ್ದ ಆಟೋಟಗಳಲ್ಲಿ ವಿಜೇತರಾದವರಿಗೆ ಸಂಘದವತಿಯಿಂದ ನೆನಪಿನಕಾಣಿಕೆ ನೀಡಲಾಯಿತು. |
ಮ್ಯೂಸಿಕಲ್ ಛೇರ್, ಮಡಿಕೆ ಹೊಡೆಯುವುದು, ಲೋಟಗಳನ್ನು ಒಂದರ ಮೇಲೊಂದರಂತೆ ಜೋಡಿಸುವುದು,ಕೆರೆದಡ ಸೇರಿದಂತೆ ಇನ್ನಿತರ ವಿನೋದಮಯ ಆಟಗಳನ್ನು ಅಯೋಜಿಸಿದ್ದು ಸುಮಾರು ೬೦ ರಿಂದ ೭೦ ಮಂದಿ ಆಟೋಟದಲ್ಲಿ ಪಾಲ್ಗೊಂಡಿದ್ದರು. ವಿಜೇತರಾದವರಿಗೆ ಟ್ರಸ್ಟ್ ವತಿಯಿಂದ ನೆನಪಿನಕಾಣಿಕೆ ವಿತರಿಸಲಾಯಿತು.
ಹುಳಿಯಾರಿನ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಜಾಗರಣೆ ಅಂಗವಾಗಿ ಸಾರ್ವಜನಿಕರಿಗೆ ವಿವಿಧ ಆಟಗಳನ್ನು ನಡೆಸಲಾಯಿತು. |
ಅಕ್ಕಮಹಾದೇವಿ ಮಹಿಳಾ ಭಜನಾ ತಂಡದವರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು. ಸಂಜೆಯಿಂದ ಪ್ರಾರಂಭವಾದ ದರ್ಶನದಲ್ಲಿ ಅಲಂಕೃತ ಸ್ವಾಮಿಯನ್ನು ನೋಡಲು ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿದ್ದು , ಸರದಿ ಸಾಲಿನಲ್ಲಿ ಸಾಗುವ ಮೂಲಕ ಸ್ವಾಮಿಯ ದರ್ಶನ ಪಡೆದು ಹಣ್ಣುಕಾಯಿ ಮಾಡಿಸಿದರು. ಸಂಜೆ ೬ ರಿಂದ ರಾತ್ರಿ ೧೧ ರ ವರೆಗೂ ತಂಡೋಪತಂಡವಾಗಿ ಜನ ಆಗಮಿಸುತ್ತಿದ್ದು ಕಂಡುಬಂತು. ಬೆಳಗಿನಜಾವ ೩ ರಿಂದ ೭ ಗಂಟೆವರೆಗೆ ಮಲ್ಲಿಕಾರ್ಜುನಯ್ಯ ಹಾಗೂ ವಿರೇಶ್ ಅವರ ಪೌರೋಹಿತ್ಯದಲ್ಲಿ ಸ್ವಾಮಿಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು. ಆಗಮಿಸಿದ್ದ ಭಕ್ತಾಧಿಗಳಿಗೆ ಪ್ರಸಾದವಾಗಿ ಕಡ್ಲೆಕಾಳು ಹುಸ್ಲಿ ವಿತರಿಸಿದರು. ಈ ವೇಳೆ ಮಲ್ಲೇಶ್ವರಸ್ವಾಮಿ ದೇವಾಲಯ ಸಮಿತಿ ಹಾಗೂ ಟ್ರಸ್ಟ್ ನ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದು ಶಿವರಾತ್ರಿಯನ್ನು ಸಡಗರ ಸಂಭ್ರಮದಿಂದ ಆಚರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ