ಹುಳಿಯಾರು ಪಟ್ಟಣದ ಶ್ರೀ ಮಲ್ಲೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ತಾ.೧೭ರ ಮಂಗಳವಾರ ರಾತ್ರಿ ಮಹಾರುದ್ರಾಭಿಷೇಕ ಕಾರ್ಯ ನಡೆಯಲಿದೆ.
ಹಬ್ಬದ ಅಂಗವಾಗಿ ಈಶ್ವರಸ್ವಾಮಿಗೆ ಅಭಿಷೇಕ ,ಅರ್ಚನೆ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳೊಂದಿಗೆ ಮಹಾಮಂಗಳಾರತಿ ನಡೆಯಲಿದೆ. ಇದೇ ದಿನ ರಾತ್ರಿ ಜಾಗರಣೆ ಕಾರ್ಯಕ್ರಮವಿದ್ದು ಸ್ವಾಮಿಗೆ ರುದ್ರಾಭಿಷೇಕ ಕಾರ್ಯ ಹಾಗೂ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಸಹ ಏರ್ಪಡಿಸಲಾಗಿದೆ. ರುದ್ರಾಭಿಷೇಕಕ್ಕೆ ಭಾಗವಹಿಸುವಂತಹ ಭಕ್ತರು ೧೦೧ರೂಗಳನ್ನು ನೀಡಿ ರಸೀದಿ ಪಡೆಯುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮಲ್ಲಿಕಾರ್ಜುನಯ್ಯ(೯೭೪೨೪೮೨೧೩೯) ಮತ್ತು ಚನ್ನಬಸವಯ್ಯ(೯೯೪೫೭೩೯೬೦೫) ಸಂಪರ್ಕಿಸುವಂತೆ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ