ಪದವಿ ಹಂತದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಮಕೂರು ವಿವಿಯ ಸಹಯೋಗದಲ್ಲಿ ಅಂತರ್ ಕಾಲೇಜು ಮಟ್ಟದ ಕಾವ್ಯ ಸ್ಪರ್ಧೆ ಏರ್ಪಡಿಸಿದ್ದಾರೆ.
ಪದವಿ ಹಂತದ ವಿದ್ಯಾರ್ಥಿಗಳು ಸ್ವರಚಿತ ೩ ಕಾವ್ಯ ಅಥವಾ ಕವನಗಳನ್ನು ಹುಳಿಯಾರ್-ಕೆಂಕೆರೆ ಕಾಲೇಜಿಗೆ ಫೆ.೨೮ರ ಒಳಗಾಗಿ ಕಳುಹಿಸನಹುದಾಗಿದೆ. ಸ್ಪರ್ಧೆಗೆ ಬಂದ ಕಾವ್ಯಗಳಲ್ಲಿ ಅತ್ಯುನತ್ತ ೩ ಕಾವ್ಯಗಳಿಗೆ ತಲಾ ೧ ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ , ಪಾರಿತೋಷಕ ನೀಡಲಾಗುತ್ತದೆ. ತೀರ್ಪುಗಾರರ ಮೆಚುಗೆ ಪಡೆದ ೪ ಕವನಗಳಿಗೆ ತಲಾ ೨೫೦ರೂ ನಗದು, ಪ್ರಶಸ್ತಿ ಪತ್ರ ಹಾಗೂ ಪಾರಿತೋಷ ವಿತರಿಸಲಿದ್ದಾರೆ. ವಿದ್ಯಾರ್ಥಿಗಳು ತಾವು ರಚಿಸಿದ ಕವನ ಅಥವಾ ಕಾವ್ಯವನ್ನು ತಾವು ಓದುತ್ತಿರುವ ಕಾಲೇಜಿನ ಪ್ರಾಚಾರ್ಯರಿಂದ ದೃಢೀಕರಿಸಿದ ನಂತರ ಪ್ರಿನ್ಸಿಪಾಲರು , ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಚಿ.ನಾ.ಹಳ್ಳಿ ತಾಲ್ಲೂಕು, ತುಮಕೂರು ಜಿಲ್ಲೆ , ಪಿನ್ : ೫೭೨೨೧೮ ವಿಳಾಸಕ್ಕೆ ನಿಗದಿತ ತಾರೀಕಿನೊಳಗಾಗಿ ಕಳುಹಿಸುವಂತೆ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ