ಶಾಸಕ ಸಿ.ಬಿ.ಸುರೇಶ್ ಬಾಬು ಅವರ ನೇ ವರ್ಷದ ಹುಟ್ಟುಹಬ್ಬವನ್ನು ಪಟ್ಟಣದ ವಿವಿಧೆಡೆ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಹುಳಿಯಾರಿನ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಏಜೆಂಟರ ಹಾಗೂ ಮಾಲೀಕರ ಸೇವಾಛಾರಿಟಬಲ್ ಟ್ರಸ್ಟ್ ನಿಂದ ಆಚರಿಸಲಾದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿರುವ ಶಾಸಕರು. |
ಖಾಸಗಿ ಬಸ್ ಏಜೆಂಟರ ಹಾಗೂ ಮಾಲೀಕರ ಸೇವಾಛಾರಿಟಬಲ್ ಟ್ರಸ್ಟ್ ನಿಂದ ಬಸ್ ನಿಲ್ದಾಣದಲ್ಲಿ ಬಸ್ ಏಜೆಂಟರ್ ಗಳು ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಚಾಲನೆ ನೀಡಿದರು. ನಂತರ ರಾಂಗೋಪಾಲ್ ಸರ್ಕಲ್ ನಲ್ಲಿ ಸಿಬಿಸ್ ಅಭಿಮಾನಿ ಬಳಗ ಹಾಗೂ ಜೆಡಿಎಸ್ ಕಾರ್ಯಕರ್ತರೆಲ್ಲಾ ಸೇರಿ ಆಚರಿಸಿದರೆ, ಗ್ರಾ.ಪಂ.ಸದಸ್ಯರುಗಳಾದ ಪಟಾಕಿ ಶಿವಣ್ಣ, ಅಶೋಕ್ ಬಾಬು,ಹೇಮಂತ್,ಬಾಲರಾಜ್ ಇನ್ನಿತರರು ತಿಪಟೂರು ರಸ್ತೆಯಲ್ಲಿ ಆಚರಿಸಿದರು. ಉರ್ದುಶಾಲೆ ದೇವಾಂಗದಾರರ ಸಂಘ,ಪೋಟೋ ಗ್ರಾಫರ್ ಸಂಘ ಕೂಡ ಶಾಸಕರ ಹುಟ್ಟುಹಬ್ಬದ ಪ್ರಯುಕ್ತ ಶುಭಕೋರಿದರು.
ಹುಳಿಯಾರಿನ ಉರ್ದುಶಾಲೆಯಲ್ಲಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಮುತುವಲ್ಲಿ ಜಬೀಉಲ್ಲಾ,ಜಹೀರ್ ಸಾಬ್,ಇಮ್ರಾಜ್ ಹಾಗೂ ಶಾಲಾ ಶಿಕ್ಷಕರು ಇದ್ದರು. |
ಎಲ್ಲರ ಅಭಿಮಾನಕ್ಕೆ ತಾವು ಚಿರಋಣಿ ಎಂದ ಶಾಸಕ ಸುರೇಶ್ ಬಾಬು , ತನ್ನ ಮೇಲೆ ಅಭಿಮಾನವಿಟ್ಟು ಹುಟ್ಟುಹಬ್ಬ ಆಚರಿಸುತ್ತಿರುವುದಕ್ಕೆ ತಾವು ಅಬಾರಿಯಾಗಿದ್ದು, ತಮ್ಮ ಈ ಕಾರ್ಯವನ್ನು ಎಂದಿಗೂ ಮರೆಯುವುದಿಲ್ಲ ಎಂದರು.
ಶಾಸಕರೇ ಸ್ವಯಂ ಎಲ್ಲರಿಗೂ ಕೇಕ್ ತಿನ್ನಿಸುವ ಮೂಲಕ ಹುಟ್ಟುಹಬ್ಬದಲ್ಲಿ ಸಂಭ್ರಮಿಸಿದರು.
ಈ ವೇಳೆ ಸಂಘದ ಲೋಕೇಶಣ್ಣ, ವಿಶ್ವನಾಥ್, ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ,ಗ್ರಾ.ಪಂ.ಸದಸ್ಯರಾದ ಗಂಗಣ್ಣ, ಜಹೀರ್ ಸಾಬ್, ವೆಂಕಟಮ್ಮ, ಬಾಲಣ್ಣ,ಏಜೆಂಟ್ ಕುಮಾರ್, ಅನ್ನದಾನ ಬಸ್ ಮಾಲೀಕ ಪ್ರಸಾದ್, ಆರ್ಯವೈಶ್ಯಮಂಡಳಿಯ ನಟರಾಜ್ ಗುಪ್ತ, ಕಲಾವಿದ ಗೌಡಿರಂಗನಾಥ್ ಸೇರಿದಂತೆ ಸಂಘದ ಸದಸ್ಯರು, ಸಿಬಿಎಸ್ ಅಭಿಮಾನಿ ಬಳಗದವರು, ಜೆಡಿಎಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ