ರಾಷ್ಟ್ರಾದ್ಯಂತ ಲೈಂಗಿಕ ಹಿಂಸಾಚಾರ ಹಾಗೂ ಮಹಿಳೆಯ ಮೇಲಿನ ದೌರ್ಜನ್ಯ ಖಂಡಿಸಿ ರಾಜ್ಯಾದ್ಯಂತ ಮಹಿಳಾ ಜಾಥಾ ನಡೆಸುತ್ತಿದ್ದು, ಈ ಹಿನ್ನಲೆಯಲ್ಲಿ ಹೋಬಳಿಯ ಸೃಜನ ಮಹಿಳಾ ವೇದಿಕೆವತಿಯಿಂದ (ತಾ.೨೨) ಭಾನುವಾರ ಬೆಳಿಗ್ಗೆ ಜಾಥಾ ಹಾಗೂ ಗ್ರಾ.ಪಂ. ಆವರಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.
ದಿನೇ ದಿನೇ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳು ಹೆಚ್ಚುತ್ತಿದ್ದು, ಇಂತಹ ಕೃತ್ಯವೆಸಗುವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಹಾಗೂ ಮಹಿಳೆಯರ ಸುರಕ್ಷತೆಗಾಗಿ ಕಾನೂನುಗಳ ರಚನೆಯ ದೃಷ್ಠಿಯಿಂದ ಈ ಜಾಥಾ ಹಾಗೂ ಸಭೆ ನಡೆಸುತ್ತಿರುವುದಾಗಿ ವೇದಿಕೆಯ ಸಂಚಾಲಕಿ ಜಯಲಕ್ಷ್ಮಿ ತಿಳಿಸಿದ್ದಾರೆ. ಜಾಥಾದ ನಂತರ ಗ್ರಾ.ಪಂ.ಆವರಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು ಮಹಿಳಾ ಸಂಘಟನೆಯವರು ಸೇರಿದಂತೆ ವಿವಿಧ ಸಂಘಟನೆಯವರು ಪಾಲ್ಗೊಳ್ಳುವಂತೆ ಪೂರ್ಣಮ್ಮ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ