ಇಲ್ಲಿನ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ತುಮಕೂರು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಮಟ್ಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಿಪಟೂರಿನ ಪ್ರಥಮ ದರ್ಜೆ ಕಾಲೇಜಿನ ಬಾಲಕರು ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟೂರ್ನಿಯಲ್ಲಿ ಒಟ್ಟು ೧೦ ತಂಡವರು ಸ್ಪರ್ಧಿಸಿದ್ದರು. ತುಮಕೂರು ವಿಶ್ವವಿದ್ಯಾಲಯದ ಕ್ರೀಡಾ ಕಾರ್ಯದರ್ಶಿಗಳಾದ ಡಾ.ಎ.ಎಂ. ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಪಂದ್ಯಾವಳಿಗಳು ನಡೆದವು. ತಿಪಟೂರು ಹಾಗೂ ಶಿರಾ ಕಾಲೇಜಿನ ತಂಡಗಳು ಫೈನಲ್ ಪ್ರವೇಶಿಸಿ ಪ್ರಥಮ ಬಹುಮಾನಕ್ಕೆ ಸೆಣಸಾಟ ನಡೆಯಿತು. ಶಿರಾ ಕಾಲೇಜಿನ ತಂಡವರು ಎಷ್ಟೇ ಪೈಪೋಟಿ ನೀಡಿದರೂ ಸಹ ತಿಪಟೂರು ಕಾಲೇಜಿನ ತಂಡವನ್ನು ಮಣಿಸುವಲ್ಲಿ ವಿಫಲವಾಗುವ ಮೂಲಕ ರನ್ನರ್ ಅಪ್ ತಂಡವಾಗಿ ಎರಡನೇ ಸ್ಥಾನಕ್ಕೆ ತೃಪ್ತಿಪಡೆಯಿತು. ವಿಜೇತ ತಂಡಗಳಿಗೆ ಗ್ರಾ.ಪಂ.ಸದಸ್ಯ ಧನುಷ್ ರಂಗನಾಥ್ ಹಾಗೂ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ಟ್ರೋಫಿ ವಿತರಿಸಿದರು. ಈ ವೇಳೆ ದೈಹಿಕ ಶಿಕ್ಷಣ ಸಂಯೋಜಕ ಶಿವಯ್ಯ, ದೈಹಿಕ ಶಿಕ್ಷಣ ನಿರ್ದೇಶಕಾರದ ಸುನಿಲ್,ದಯಾನಂದ್, ತುಮಕೂರು ವಿ.ವಿಯ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಬಾಷಾ, ಸಿದಾರ್ಥ ಕಾಲೇಜಿನ ದೈಹಿಕ ಶೀಕ್ಷಕ ರಾಮಾನಾಯಕ್, ಉಪನ್ಯಾಸಕರಾದ ಅಶೋಕ್,ಇಬ್ರಾಹಿಂ,ಗ್ರಂಥಪಾಲಕ ಲೋಕೇಶ್ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ