ವಸತಿ ಪ್ರದೇಶದಲ್ಲಿ ಕೋಳಿ ಅಂಗಡಿ ತೆರೆಯುವುದರಿಂದ ಹತ್ತು ಹಲವಾರು ಸಮಸ್ಯೆಗಳಿಗೆ ದಾರಿಯಾಗುವುದಿದ್ದು ಯಾವುದೇ ಕಾರಣಕ್ಕೂ ತಮ್ಮ ಮನೆ ಮುಂದಿನ ಜಾಗದಲ್ಲಿ ಕೋಳಿ ಅಂಗಡಿ ತೆರೆಯಕೂಡದು ಎಂದು ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಸಿದ್ದಪ್ಪನವರ ಕುಟುಂಬ ವರ್ಗ ಪ್ರತಿಭಟನೆಗೆ ಮುಂದಾದ ಘಟನೆ ಸೋಮವಾರ ನಡೆದಿದೆ.
ಕೋಳಿ ಅಂಗಡಿ ತೆರಯದಂತೆ ಒತ್ತಾಯಿಸಿ ಖಾಲಿ ನಿವೇಶದ ಬಳಿ ಧರಣಿ ನಿರತ ಕುಟುಂಬದವರು. |
ಇತ್ತೀಚೆಗೆ ಬಸ್ ನಿಲ್ದಾಣದ ಅಂಗಡಿಗಳನ್ನು ತೆರವುಗೊಳಿಸಿದ್ದರಿಂದ ಜೀವನೋಪಾಯಕ್ಕಾಗಿ ಹೆದ್ದಾರಿ ಖಾಲಿ ಜಾಗಗಳಲ್ಲಿ ಅಂಗಡಿಗಳನ್ನು ತೆರೆಯಲು ಮುಂದಾಗಿರುವ ಅಂಗಡಿದಾರರು ಪಟ್ಟಣದ ಕೆಇಬಿ ಎದುರಿನ ಹೆದ್ದಾರಿ ಪಕ್ಕದಲ್ಲಿ ಕೋಳಿ ಅಂಗಡಿ ತೆರೆಯಲು ಮುಂದಾಗಿದ್ದು ಸಮಸ್ಯೆಗೆ ಕಾರಣವಾಗಿದೆ . ಮೆಡಿಕಲ್ ದೇವರಾಜ್ ಹಾಗೂ ಯೂಸೂಪ್ ಅವರಿಗೆ ಸೇರಿದ ಖಾಲಿ ನಿವೇಶನದಲ್ಲಿ ಕೋಳಿ ಅಂಗಡಿ ತೆರೆಯಲು ಅಂಗಡಿ ಸಿದ್ದಪಡಿಸುತ್ತಿದ್ದ ವೇಳೆ ಜಾಗದ ಅಕ್ಕಪಕ್ಕ ಇದ್ದ ಕುಟುಂಬದವರೆಲ್ಲಾ ಸೇರಿ ಈ ಜಾಗದಲ್ಲಿ ಕೋಳಿ ಅಂಗಡಿ ಇಡುವುದಕ್ಕೆ ತಮ್ಮ ಒಪ್ಪಿಗೆಯಿಲ್ಲ ಎಂದು ಅಂಗಡಿಯ ಮುಂದೆ ಧರಣಿ ನಡೆಸಲು ಮುಂದಾಗಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ಕೋಳಿ ಮತ್ತಿತರರ ಮಾಂಸದ ಅಂಗಡಿ ತೆರೆಯಿರೆಂದು ಪಂಚಾಯ್ತಿಯ ಹಾಗೂ ಆರೋಗ್ಯ ಇಲಾಖೆ ಅನುಮತಿ ಬೇಕಿದ್ದು ಇದ್ಯಾವುದು ಇಲ್ಲದೆ ಕೋಳಿ ಅಂಗಡಿ ತೆರೆಯಲು ಮುಂದಾಗಿದ್ದಾರೆಂದು ಆರೋಪಿಸಿ, ಸಂಬಂಧಪಟ್ಟವರು ಸ್ಥಳಕ್ಕೆ ಬರುವವರೆಗೂ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಕೋಳಿ ಅಂಗಡಿ ಬಿಟ್ಟು ಬೇರೆ ಯಾವುದೇ ಅಂಗಡಿ ಮಾಡುವುದಕ್ಕೆ ತಮ್ಮ ಅಭ್ಯಂತರವಿಲ್ಲ ಕೋಳಿ ಅಂಗಡಿ ಮಾಡುವುದರಿಂದ ಬಿತ್ಯ ಹೆಚ್ಚಿನ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಅಲ್ಲದೆ ನಾಯಿ,ಹಂದಿಗಳು ಬರುವ ಸಾಧ್ಯತೆ ಹೆಚ್ಚಾಗಿದ್ದು ಆ ವೇಳೆ ಮಕ್ಕಳು ಮರಿಗೆ ಕಚ್ಚಿದರೆ ಯಾರು ಹೊಣೆ. ಅಲ್ಲದೆ ಈಗಾಗಲೇ ಅನೇಕ ರೋಗಗಳು ಉಲ್ಬಣಿಸುತ್ತಿದ್ದು ಕೋಳಿ ಅಂಗಡಿಯ ಕೆಟ್ಟ ವಾಸನೆಯಿಂದ ಸುತ್ತಮುತ್ತಲ ಮನೆಯವರ ಆರೋಗ್ಯದ ಮೇಲೆಯೂ ಸಹ ಕೆಟ್ಟ ಪರಿಣಾಮ ಬೀರಲಿದೆ. ಹಾಗಾಗಿ ಈ ಸ್ಥಳದಲ್ಲಿ ಕೋಳಿ ಅಂಗಡಿ ಬೇಡವೇ ಬೇಡ ಎನ್ನುತ್ತಾರೆ ಸ್ವಾತಂತ್ರ್ಯ ಹೋರಾಟಗಾರರಾದ ಸಿದ್ದಪ್ಪನವರ ಪತ್ನಿ ಲಕ್ಷ್ಮವ್ವ.
ಸಮಸ್ಯೆಯ ಬಗ್ಗೆ ಜಾಗದ ಮಾಲೀಕರಿಗೆ ತಿಳಿಸಿದರೆ ಇದು ನಮ್ಮ ಜಾಗ ಇಲ್ಲಿ ಏನೂ ಬೇಕಾದರೂ ಮಾಡಿಕೊಳ್ಳುತ್ತೇವೆ , ಅಂಗಡಿ ಇಡಲು ಉಆರ ಅಪ್ಪಣೆಯು ಬೇಕಿಲ್ಲವೆಂದು ಉದ್ಘಟತನದಿಂದ ಉತ್ತರಿಸಿದ್ದಾರೆಂದು ಧರಣಿ ನಿರತ ಕುಟುಂಬದ ರಘು ದೂರಿದ್ದಾರೆ.
ಸಮಸ್ಯೆ ಬಗೆ ಹರಿಯುವವರೆಗೂ ಆಹೋರಾತ್ರಿ ಧರಣಿ ನಡೆಸಿರುವುದಾಗಿ ತಿಳಿಸಿರುವ ಕುಟುಂಬದವರ ನೆರವಿಗೆ ರೈತಸಂಘದವರು ಸಹ ಒತ್ತಾಸೆಯಾಗಿ ನಿಂತಿದ್ದು. ಒಟ್ಟಾರೆ ಅಂಗಡಿ ತೆರೆಯುವುದರ ಬಗ್ಗೆ ಪರ ವಿರೋಧ ಹೇಳಿಕೆಗಳು ಕೇಳಿಬರುತ್ತಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ