ಹುಳಿಯಾರು ಹೋಬಳಿ ಬೆಳ್ಳಾರದ ಹೊಸಕೆರೆಯ ದಡದಲ್ಲಿ ವ್ಯಕ್ತಿಯೊಬ್ಬನ ಶವ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದ್ದು, ಶವವನ್ನು ಕಂಡ ಸ್ಥಳೀಯರು ಪೋಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೋಲೀಸರು ಪರಿಶೀಲಿಸಿದಾಗ ಮೃತ ವ್ಯಕ್ತಿಯ ಜೇಬಲ್ಲಿ ಆಧಾರ್ ಕಾರ್ಡ್ ಕಂಡುಬಂದಿದ್ದು, ಅದರಲ್ಲಿನ ಮಾಹಿತಿ ಅನ್ವಯ ಈತ ಬೆಂಗಳೂರಿನ ನಾಗಶೆಟ್ಟಿಹಳ್ಳಿಯ ಶ್ರೀನಿವಾಸ್ (೩೨) ಎಂದು ಗುರ್ತಿಸಿದ್ದಾರೆ. ಶವದ ಹತ್ತಿರ ವಿಷದ ಬಾಟೆಲ್ ಸಹ ಬಿದಿದ್ದು ಈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಿದ್ದಾರೆ. ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ