ಇಲ್ಲಿನ ಗ್ರಾಮದೇವತೆ ಶ್ರೀ ಹುಳಿಯಾರಮ್ಮ ದೇವಿಯ ದ್ವಿತೀಯ ವರ್ಷದ ಜಾತ್ರಾಮಹೋತ್ಸವದ ಅಂಗವಾಗಿ ಗುರುವಾರ ಸಂಜೆ ಅಮ್ಮನವರ ವೈಭವಯುತ ಹೂವಿನ ಉಯ್ಯಾಲೋತ್ಸವ ನಡೆಯಿತು.
![]() |
ಹುಳಿಯಾರಮ್ಮನ ಸನ್ನಿಧಿಯಲ್ಲಿ ನಡೆದ ವೈಭವಯುತ ಉಯ್ಯಾಲೋತ್ಸವ. |
ಹುಳಿಯಾರಮ್ಮನ ಮೂಲ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿದ್ದಲ್ಲದೆ ಉತ್ಸವ ಮೂರ್ತಿಯನ್ನು ಬಗೆಬಗೆಯ ಹೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಕನಕ ಯುವಕರ ಬಳಗದವತಿಯಿಂದ ಉತ್ಸವಮೂರ್ತಿಯನ್ನು ಅಲಂಕೃತ ಉಯ್ಯಾಲೆಯಲ್ಲಿ ಕುಳ್ಳಿರಿಸಿ ಉಯ್ಯಾಲೋತ್ಸವ ನಡೆಸಲಾಯಿತು. ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತಾಧಿಗಳು ಅಮ್ಮನವರನ್ನು ತುಗೂಯ್ಯಾಲೆಯಲ್ಲಿ ತೂಗುವ ಮೂಲಕ ತಮ್ಮ ಭಕ್ತಭಾವ ಮೆರೆದರು. ಈ ವೇಳೆ ದೇವಾಲಯ ಸಮಿತಿಯವರು ಸೇರಿದಂತೆ ಅಕ್ಕಪಕ್ಕದ ಹಳ್ಳಿಗಳ ಅಪಾರ ಸಂಖ್ಯೆಯ ಭಕ್ತಾಧಿಗಳು ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ