ಹುಳಿಯಾರು ಪಟ್ಟಣದ ಹೃದಯಭಾಗದಲ್ಲಿ ಹಾದು ಹೋಗಿರುವ ಹೆದ್ದಾರಿ ತುಂಬೆಲ್ಲಾ ಗುಂಡಿಗಳು ಬಿದ್ದು ವರ್ಷಗಳು ಕಳೆಯುತ್ತಾ ಬಂದು ಸಂಚಾರ ದುಸ್ಥರವಾಗಿದ್ದು ಇದೀಗ ಹೆದ್ದಾರಿಯ ಗುಂಡಿಗಳನ್ನು ಮುಚ್ಚುವ ಕಾರ್ಯ ಚಾಲನೆಗೊಂಡಿದ್ದು ಸಂಚಾರಕ್ಕೆ ತಕ್ಕ ಮಟ್ಟಿಗೆ ಅನುಕೂಲ ಕಲ್ಪಿಸಿಕೊಟ್ಟಂತಾಗಿದೆ.
ಹುಳಿಯಾರು ಪಟ್ಟಣದಲ್ಲಿ ಹಾದುಗೋಗಿರುವ ಹೆದ್ದಾರಿಯ ಗುಂಡಿಗಳಿಗೆ ಜೆಲ್ಲಿ ಹಾಕಿ ಮುಚ್ಚಿರುವುದು. |
ಹುಳಿಯಾರು ಮಾರ್ಗವಾಗಿ ಮಂಗಳೂರು - ತಮಿಳುನಾಡಿನ ವಿಲ್ಲುಪುರಂವರೆಗಿನ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು ರಸ್ತೆ ಅಭಿವೃದ್ದಿ ಕಾಮಗಾರಿ ಪ್ರಾರಂಭಗೊಂಡು ಅಲ್ಲಲ್ಲಿ ಸೇತುವೆಗಳ ನಿರ್ಮಾಣ ನಡೆದಿದ್ದು ಬಿಟ್ಟರೆ ಮತ್ಯಾವುದೇ ಕಾರ್ಯ ನಡೆಯದೆ ಸ್ಥಗಿತಗೊಂಡಿತ್ತು. ರಸ್ತೆ ತುಂಬ ಗುಂಡಿಗಳು ಬಿದ್ದು ವಾಹನ ಸವಾರರು ಪರದಾಡುವಂತಾಗಿತ್ತಲ್ಲದೆ, ಈ ಗುಂಡಿಗಿಳಿದ ಹಲವು ವಾಹನಗಳ ಬಿಡಿಭಾಗಗಳು ತುಂಡಾಗಿ ರಸ್ತೆ ಮಧ್ಯೆಯೇ ನಿಂತು ಸಂಚಾರಕ್ಕೆ ಮತ್ತಷ್ಟು ಅಡ್ಡಿಯುಂಟುಮಾಡಿದ್ದವು. ಈ ಬಗ್ಗೆ ಪಿಡಬ್ಯೂಡಿ ಇಲಾಖೆಯವರಿಗೆ ತಿಳಿಸಿದರೆ ಹೆದ್ದಾರಿಯ ಕಾರ್ಯ ನಡೆಯುತ್ತಿದೆ ಎಂದು ಹೇಳುತ್ತಿದ್ದರೆ ಹೊರತು ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಿರಲಿಲ್ಲ.
ಕಳೆದ ವಾರ ಸಂಸದರು ಪಟ್ಟಣಕ್ಕೆ ಭೇಟಿ ನೀಡಿದ ವೇಳೆ ರಸ್ತೆಯಲ್ಲಿನ ಗುಂಡಿಗಳ ಬಗ್ಗೆ ಜನರು ತಿಳಿಸಿದಾಗ ಕೆಲ ದಿನಗಳಲ್ಲಿ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಮಾಡಿಸುವ ಭರವಸೆ ನೀಡಿದ್ದರು. ಅದರಂತೆ ಈಗ ಪಟ್ಟಣದಿಂದ ಹೊಸಹಳ್ಳಿ ಪಾಳ್ಯದ ಹ್ಯಾಂಡ್ ಪೋಸ್ಟ್ ವರೆಗೂ ರಸ್ತೆಯಲ್ಲಿನ ಗುಂಡಿಗಳಿಗೆ ಜೆಲ್ಲಿ ಹಾಕಿ ಮುಚ್ಚುತ್ತಿದ್ದಾರೆ. ಯಾರು ಹೇಳಿ ರಸ್ತೆ ಗುಂಡಿ ಮುಚ್ಚಿಸುತ್ತಿದ್ದಾರೋ ಗೊತ್ತಿಲ್ಲ ಒಟ್ಟಾರೆ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವುದು ವಾಹನ ಹಾಗೂ ಜನ ಸಂಚಾರಕ್ಕೆ ಅನುಕೂಲವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ