ಹುಳಿಯಾರು ಪಟ್ಟಣದ ಗ್ರಾಮದೇವತೆ ಶ್ರೀ ಹುಳಿಯಾರಮ್ಮದೇವಿಯ ಜಾತ್ರಾಮಹೋತ್ಸವದ ಅಂಗವಾಗಿ ಮಂಗಳವಾರದಂದು ಆರತಿಬಾನ ನಡೆಯಿತು.
|
ಹುಳಿಯಾರು ಗ್ರಾಮದೇವತೆ ಹುಳಿಯಾರಮನಿಗೆ ತಂಬಿಟ್ಟಿನ ಆರತಿ ಮಾಡುತ್ತಿರುವ ಮುತ್ತೈದೆಯರು. |
ಹಳ್ಳಿಗಳಲ್ಲಿ ದೇವಿಯ ಜಾತ್ರೆಗಳಲ್ಲಿ ಮಂಗಳವಾರದಂದು ಆರತಿಬಾನ ನಡೆಸುವ ಸಂಪ್ರದಾಯವಿದೆ.ತಂಬಿಟ್ಟಿನಲ್ಲಿ ಆರತಿ ಬೆಳಗಿ ಮನೆಯಲ್ಲಿ ಮಾಡಿದ ಅಡುಗೆಯನ್ನು ದೇವಿಗೆ ಎಡೆ ನೀಡುವ ಸಂಪ್ರದಾಯವಿದಾಗಿದ್ದು ಇಂದು ನೆಂಟರಿಷ್ಟನ್ನು ಮನೆಗೆ ಕರೆಸಿ ಸಿಹಿಯೂಟ ಮಾಡುವುದು ಗ್ರಾಮೀಣ ಪ್ರದೇಶದಲ್ಲಿ ಚಾಲ್ತಿಯಲ್ಲಿದೆ. ಈನಿಟ್ಟಿನಲ್ಲಿ ಮಂಗಳವಾರ ಬೆಳಿಗ್ಗೆ ಆರತಿಬಾನ ಹಾಗೂ ಎಡೆಸೇವೆ ನಡೆದು,ಪಟ್ಟಣ ಸೇರಿದಂತೆ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಭಕ್ತರು ಅಮ್ಮನವರ ದೇವಾಲಯಕ್ಕೆ ಎಡೆ ತಂದು ಸಮರ್ಪಿಸಿದರಲ್ಲದೆ, ಆರತಿ ಮಾಡುವ ಮೂಲಕ ಅಮ್ಮನವರಿಗೆ ಪೂಜೆ ಸಲ್ಲಿಸಿದರು. ಬೆಳಿಗ್ಗೆಯಿಂದ ಪ್ರಾರಂಭವಾದ ಆರತಿ ಸೇವೆ ಸಂಜೆಯವರೆಗೂ ನಡೆಯುತ್ತಲೇಯಿದ್ದು ದೇವಾಲಯದ ತುಂಬೆಲ್ಲಾ ಮುತೈದೆಯರೇ ಹೆಚ್ಚಾಗಿದ್ದು ಕಂಡುಬಂತು.
|
ಹುಳಿಯಾರಮ್ಮನ ಆರತಿಬಾನದ ಅಂಗವಾಗಿ ಭಕಾಧಿಗಳು ಎಡೆಯನ್ನು ಸಮರ್ಪಿಸುತ್ತಿರುವುದು. |
ಇದಕ್ಕು ಮುನ್ನಾ ಸೋಮವಾರದಂದು ಅಮ್ಮನವರ ಮದುವಣಗಿತ್ತಿ ಸೇವೆ ನಡೆಯಿತು. ಗ್ರಾಮದೇವತೆ ದುರ್ಗಮ್ಮದೇವಿಯ ಸಮ್ಮುಖದಲ್ಲಿ ಪಟೇಲ್ ರಾಜ್ ಕುಮಾರ್ ಅವರ ಮನೆಯಲ್ಲಿ ಹುಳಿಯಾರಮ್ಮನಿಗೆ ಮದುವಣಗಿತ್ತಿ ಅಲಂಕಾರ ಮಾಡಲಾಯಿತು.ನಂತರ ದೇವಿಯ ಮೂಲಸ್ಥಾನಕ್ಕೆ ತೆರಳಿ ಧ್ವಜಾರೋಹಣ ಮತ್ತು ಅಂಕುರಾರ್ಪಣೆ ನಡೆಸಲಾಯಿತು.ನಂತರ ದೇವಿಯ ಪೂಜಾರಿಗೆ ಕಂಕಣಕಟ್ಟುವ ಕಾರ್ಯಕ್ರಮ ನಡೆದು ಅಮ್ಮನವರಿಗೆ ಮದುವಣಗಿತ್ತಿ ಸಂಪ್ರದಾಯವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.ಈವೇಳೆ ಗುಡಿಗೌಡರು ,ಗ್ರಾಮಸ್ಥರು, ಭಕ್ತಾಧಿಗಳು, ನಾದಸ್ವರವಾದ್ಯದವರು,ಪತ್ತಿಡಿಯುವ ಮಡಿವಾಳರು, ಅರೆವಾದ್ಯದವರು ಹಾಜರಿದ್ದು ವಿಧಿವತ್ತಾಗಿ ಸಂಪ್ರದಾಯ ನೆರವೇರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ