ಪಠ್ಯಕ್ಕೆ ಪೂರಕವಾಗಿ ಪಠ್ಯೇತರ ಚಟುವಟಿಕೆಗಳಿರಬೇಕು ಹಾಗೂ ಪಠ್ಯೇತರ ಚಟುವಟಿಕೆಗಳಾದ ಬಗೆಬಗೆಯ ಕ್ರೀಡೆಗಳಿಂದ ವಿದ್ಯಾರ್ಥಿಗಳ ಮನಸ್ಸು ಹಾಗೂ ಅವರ ಬೌಧಿಕ ಶಕ್ತಿ ಸದೃಢವಾಗುತ್ತದೆ ಎಂದು ಸಾಹಿತಿ ಹಾಗೂ ಪ್ರಾಚಾರ್ಯ ಬಿಳಿಗೆರೆ ಕೃಷ್ಣಮೂರ್ತಿ ತಿಳಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜುವತಿಯಿಂದ ಕಾಲೇಜು ಆವರಣದಲ್ಲಿ ಮಂಗಳವಾರ ಪ್ರಾರಂಭಗೊಂಡ ತುಮಕೂರು ವಿಶ್ವವಿದ್ಯಾಲಯದ ಅಂತರ್ ಕಾಲೇಜು ಮಟ್ಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗಳು ಉದ್ಘಾಟನಾ ಸಮಾರಂಭದಾಧ್ಯಕ್ಷತೆವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಓದು ಎಷ್ಟು ಮುಖ್ಯವೋ ಅಂತೆಯೇ ಅವರು ನಮ್ಮ ದೇಹಾರೋಗ್ಯ ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದ್ದು ನಿತ್ಯ ಕೆಲ ಸಮಯವನ್ನು ಕ್ರೀಡೆಗೆ ಮೀಸಲಿರಿಸುವಂತೆ ತಿಳಿಸಿದರು. ಪದವಿ ಹಂತದ ಕಾಲೇಜುಗಳಲ್ಲಿ ಕ್ರೀಡೆ ಎಂದರೆ ಬೆರಳೆಣಿಕೆಯಷ್ಟು ಮಾತ್ರ ವಿದ್ಯಾರ್ಥಿಗಳು ಮುಂದೆಬರುತ್ತಾರೆ ಉಳಿದ ಹಲವು ವಿದ್ಯಾರ್ಥಿಗಳಿಗೆ ಕ್ರೀಡೆ ಎಂದರೆ ಆಸಕ್ತಿ ಇಲ್ಲದಂತಾಗಿದೆ ಎಂದು ವಿಷಾಧಿಸಿದರು. ಉಪನ್ಯಾಸಕರಾಗಲಿ , ವಿದ್ಯಾರ್ಥಿಗಳಾಗಲಿ ಪ್ರತಿಯೊಬ್ಬರು ನಿತ್ಯ ಯೋಗ, ವಾಕಿಂಗ್ ಮಾಡಿ ಎಂದು ಸಲಹೆ ನೀಡಿದರು.
ತುಮಕೂರು ವಿಶ್ವವಿದ್ಯಾಲಯದ ಕ್ರೀಡಾ ಕಾರ್ಯದರ್ಶಿಗಳಾದ ಡಾ.ಎ.ಎಂ. ಮಂಜುನಾಥ್ ಮಾತನಾಡಿ ಪದವಿ ಹಂತದ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಬೇಕು ಹಾಗೂ ಪದವಿ ಕಾಲೇಜಿನ ದೈಹಿಕ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಕ್ರೀಡೆಯಿಂದ ಆಗುವ ಪ್ರಯೋಜನದ ಬಗ್ಗೆ ಮನವರಿಕೆ ಮಾಡಿಕೊಡುವ ಮೂಲಕ ಅವರ ಮನಸ್ಸನ್ನು ಕ್ರೀಡೆಯತ್ತ ಕರೆದೊಯ್ಯಬೇಕು ಎಂದರು.
ಮುಖಂಡರಾದ ನಂದಿಹಳ್ಳಿ ಶಿವಣ್ಣ ಕಾರ್ಯಕ್ರಮ ಉದ್ಘಾಟಿಸಿದರು.ದೈಹಿಕ ಶಿಕ್ಷಣ ನಿರ್ದೇಶಕಾರದ ಸುನಿಲ್,ದಯಾನಂದ್, ತುಮಕೂರು ವಿ.ವಿಯ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಬಾಷಾ, ಸಿದಾರ್ಥ ಕಾಲೇಜಿಕ ದೈಹಿಕ ಶೀಕ್ಷಕ ರಾಮಾನಾಯಕ್, ಬಿಎಂಎಸ್ ಕಾಲೇಜಿನ ದೈಹಿಕ ಸಂಯೋಜಕ ಶಿವಯ್ಯ, ಉಪನ್ಯಾಸಕರಾದ ಅಶೋಕ್,ಇಬ್ರಾಹಿಂ,ಗ್ರಂಥಪಾಲಕ ಲೋಕೇಶ್ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ