ಹುಳಿಯಾರು ಪಟ್ಟಣದ ನಂದಿಹಳ್ಳಿಯಲ್ಲಿ ತನ್ನ ಮಹೂರ್ತ ಕಾರ್ಯಕ್ರಮ ಆಚರಿಸಿಕೊಂಡ ತುಳುಭಾಷೆಯ ಜೈತುಳುನಾಡ್ ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಹುಳಿಯಾರು ಸೇರಿದಂತೆ ಸುತ್ತಮುತ್ತಲ ಹಳ್ಳಿಗಳ ಲೋಕೇಶನ್ ನಲ್ಲಿ ನಡೆಯಿತು.
ಜೈತುಳುನಾಡ್ ಚಿತ್ರ ತಂಡದೊಂದಿಗೆ ಸಹನಿರ್ಮಾಪಕ ನಂದಿಹಳ್ಳಿ ಶಿವಣ್ಣ, |
ಹುಳಿಯಾರಿನವರೇ ಆದ ಪ್ರಥಮ ದರ್ಜೆ ಗುತ್ತಿಗೆದಾರರು ಹಾಗೂ ಜೆಡಿಎಸ್ ಮುಖಂಡರು ಆದ ನಂದಿಹಳ್ಳಿಯ ಶಿವಣ್ಣ ತೆಗೆಯುತ್ತಿರುವ ಪ್ರಥಮ ಚಿತ್ರ ಇದಾಗಿದ್ದು ಈ ಭಾಗದ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಈ ಚಿತ್ರ ತುಳುಭಾಷೆಯದ್ದಾಗಿದ್ದು ಫ್ರಾಂಕ್ ಫರ್ನಾಡಿಂಸ್, ಅಲಿ ನಿಜಾನ್ ಅಹಮದ್ ಹಾಗೂ ನಂದಿಹಳ್ಳಿಯ ಶಿವಣ್ಣ ಸೇರಿ ಚಿತ್ರ ನಿರ್ಮಿಸುತ್ತಿದ್ದಾರೆ. ಕಡಲ ಮಗೆ ಖ್ಯಾತಿಯ ಪ್ರವೀಣ್ ಈ ಚಿತ್ರ ನಿರ್ದೇಶಿಸಿದ್ದು ಆಕ್ಷನ್ ಕಟ್ ಹೇಳಿದ್ದಾರೆ. ನಾಯಕ ನಟನಾಗಿ ಅವಿನಾಶ್ ಶೆಟ್ಟಿ ಹಾಗೂ ನಾಯಕ ನಟಿಯಾಗಿ ಸೋನಾಲಿ ಮೊಂಥೆರೋ ಕಾಣಿಸಿಕೊಂಡರೆ, ಪೋಷಕ ಪಾತ್ರದಲ್ಲಿ ಭವ್ಯ, ಸ್ವಸ್ತಿಕ್ ಶಂಕರ್,ಅರವಿಂದ್ ಬೋಲಾರ್, ಮನಹೋಹನ ರೈ,ನಯನಗ್ರಹಣ್ ಸೇರಿದಂತೆ ಇತರರು ತಾರಾಗಣದಲ್ಲಿದ್ದಾರೆ. ಜೇಮ್ಸ್ ಮ್ಯೂಸಿಕ್ ನೀಡಿದ್ದು, ಥ್ರಿಲರ್ ಮಂಜು ಹಾಗೂ ಕೌರವ ವೆಂಕಟೇಶ್ ಸಾಹಸ ನೀಡಿದ್ದಾರೆ.
ಹುಳಿಯಾರು ಸಮೀಪದ ಬೋರನಕಣಿವೆ ಬಳಿ ಹಾಡಿನ ಚಿತ್ರೀಕರಣ ನಡೆಸುತ್ತಿರುವ ಚಿತ್ರತಂಡ. |
ಮದನ್ ಹರಿಣಿ ನೃತ್ಯ ನಿರ್ದೇಶನ ಮಾಡುತ್ತಿದ್ದು ಚಿತ್ರದಲ್ಲಿನ ಒಂದು ಹಾಡಿಗೆ ಹುಳಿಯಾರಿನ ಸುತ್ತಮುತ್ತಲಿನ ನಂದಿಹಳ್ಳಿ, ಬೋರನಕಣಿವೆ ಜಲಾಶಯ, ಹಂದನಕೆರೆ, ಗವಿರಂಗನಾಥಸ್ವಾಮಿ ಬೆಟ್ಟ, ಕಂಚೀಪುರದ ಪ್ರದೇಶದಲ್ಲಿ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ.
ಚಿತ್ರದಲ್ಲೇನಿದೆ: ದೇವಿಪುತ್ತೂರ್ ಕಥೆ ಹೆಣೆದಿದ್ದು ಎಸ್.ಎಸ್.ಡೇವಿಡ್ ಸಂಭಾಷಣೆ ನೀಡಿದ್ದಾರೆ. ಗೌರಿವೆಂಕಟೇಶ್ ತಮ್ಮ ಕ್ಯಾಮರಕಣ್ಣಲ್ಲಿ ಚಿತ್ರ ಸೆರೆಹಿಡಿದ್ದಾರೆ. ಉತ್ತಮ ಚಿತ್ರಕಥೆಯಿರುವ ಸಿನಿಮ ಇದಾಗಿದ್ದು, ಚಿತ್ರದಲ್ಲಿ ಸೆಂಟಿಮೆಂಟ್, ಪ್ರೇಮಕಥೆ, ಆಕ್ಷನ್ ಹಾಗೂ ಕಾಮಿಡಿ ಸಹ ಇದ್ದು ವೀಕ್ಷಕರಿಗೆ ಉತ್ತಮ ಸಂದೇಶ ನೀಡಲಿದೆ ಎನ್ನುತ್ತಾರೆ ಇದೇ ಊರಿನವರಾದ ಸಹನಿರ್ಮಾಪಕ ನಂದಿಹಳ್ಳಿಯ ರಾಜಸುಲೋಚನ ಶಿವಣ್ಣ. ಕಳೆದ ಹಲವು ವರ್ಷದಿಂದ ಸಿನಿಮಾ ನಿರ್ಮಾಣ ಮಾಡಬೇಕೆಂಬ ಹಂಬಲ ಈಡೇರಲಿದೆ ಎನ್ನುತಾರೆ ಅವರು. ಅಲ್ಲದೆ ನಮ್ಮ ಊರಿನ ಸುತ್ತಮುತ್ತಲೂ ಸಹ ಚಿತ್ರೀಕರಣಕ್ಕೆ ಉತ್ತಮ ಲೋಕೇಶನ್ ಗಳಿದ್ದು ಈ ಚಿತ್ರದ ಹೆಚ್ಚು ಭಾಗ ಚಿತ್ರೀಕರಣವನ್ನು ಸ್ಥಳೀಯರ ಸಹಕಾರದಿಂದ ಇಲ್ಲಿಯೇ ನಡೆಸುವುದಾಗಿ ತಿಳಿಸಿದರು. ಮೊದಲು ತುಳು ಭಾಷೆಯಲ್ಲಿ ಚಿತ್ರ ತೆರೆಕಾಣಲಿದ್ದು ನಂತರ ಕನ್ನಡ ಭಾಷೆಯಲ್ಲಿ ತಪ್ಪದೇ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.
ಗ್ರಾಮೀಣಭಾಗದಲ್ಲಿ ನಡೆಯುತ್ತಿರುವ ಚಿತ್ರೀಕರಣ ವೀಕ್ಷಿಸಲು ಹಾಗೂ ನಾಯಕನಟ ಅವಿನಾಶ್ ಶೆಟ್ಟಿ ಹಾಗೂ ನಟಿಯಾಗಿ ಸೋನಾಲಿ ಮೊಂಥೆರೋಅವರನ್ನು ನೋಡಲು ಜನ ಮುಗಿಬಿದಿದ್ದಾರೆ.
ಒಟ್ಟಾರೆ ಮೂರುಧರ್ಮೀಯರು ಸೇರಿ ಚಿತ್ರ ನಿರ್ಮಿಸುವ ಮೂಲಕ ಹೊಸ ಪ್ರಯತ್ನ ಮಾಡುತ್ತಿದ್ದು , ಮುಂದಿನ ಕೆಲ ತಿಂಗಳಲ್ಲಿ ಚಿತ್ರ ತೆರೆಕಾಣಲಿದ್ದು, ಪ್ರೇಕ್ಷಕರಿಗೆ ಹಾಗೂ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ ಇದಾಗಿರಲಿ ಎಂದು ಅಶಿಶೋಣ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ