ಹುಳಿಯಾರು ಪಟ್ಟಣದ ಗ್ರಾ.ಪಂ.ವತಿಯಿಂದ ನಾಲ್ಕನೇ ವಾರ್ಡ್ ನ ಪರಿಶಿಷ್ಟ ಜಾತಿ/ಪಂಗಡದ ಅರ್ಹ ಫಲಾನುಭವಿಗಳಿಗೆ ಗ್ರಾ.ಪಂ.ಸದಸ್ಯರಾದ ಧನುಷ್ ರಂಗನಾಥ್ ಹಾಗೂ ಫರಾನಾ ಅವರು ಸೋಲಾರ್ ದೀಪಗಳನ್ನು ಶ್ರೀದುರ್ಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಸೋಮವಾರ ವಿತರಿಸಿದರು.
ಹುಳಿಯಾರಿನ ೪ ನೇ ಬ್ಲಾಕ್ ನ ಪರಿಶಿಷ್ಟ ಜಾತಿ/ಪಂಗಡದ ಅರ್ಹ ಫಲಾನುಭವಿಗಳಿಗೆ ಪಂಚಾಯ್ತಿವತಿಯಿಂದ ಗ್ರಾ.ಪಂ.ಸದಸ್ಯರಾದ ಧನುಷ್ ರಂಗನಾಥ್ ಹಾಗೂ ಫರಾನಾ ಅವರು ಸೋಲಾರ್ ದೀಪಗಳನ್ನು ವಿತರಿಸಿದರು. |
ಈ ವೇಳೆ ಧನುಷ್ ರಂಗನಾಥ್ ಮಾತನಾಡಿ ೨೦೧೪-೧೫ನೇ ಸಾಲಿನ ಪಂಚಾಯ್ತಿಯ ಶೇ.೨೨.೫ ಅನುದಾನದಡಿ ಅರ್ಹರನ್ನು ಗುರುತಿಸಿ ಸೋಲಾರ್ ದೀಪಗಳನ್ನು ವಿತರಿಸುತ್ತಿರುವುದಾಗಿ ತಿಳಿಸಿದರು. ನನ್ನ ಮೇಲೆ ನಂಬಿಕೆಯಿಟ್ಟಿರುವ ಈ ಬ್ಲಾಕ್ ನ ಮತದಾರರು ನನ್ನನ್ನು ಸತತ ಮೂರು ಬಾರಿ ಗ್ರಾ.ಪಂ. ಸದಸ್ಯನನ್ನಾಗಿ ಆಯ್ಕೆ ಮಾಡಿದ್ದಾರೆ ಅವರ ನಂಬಿಕೆಯನ್ನು ಹುಸಿ ಮಾಡದಂತೆ ಅವರ ಸಮಸ್ಯೆಗಳ ನಿವಾರಣೆ ತಾವು ಬದ್ದರಾಗಿರುವುದಾಗಿ ತಿಳಿಸಿದರು. ನಾಲ್ಕನೇ ಬ್ಲಾಕ್ ನ ಮತದಾರ ಅಶೀರ್ವಾದ ನನ್ನ ಮೇಲೆ ಸದಾ ಈರೀತಿಯೇ ಇರಲಿ ಹಾಗೂ ಪಂಚಾಯ್ತಿವತಿಯಿಂದ ವಿತರಿಸಿರುವ ಈ ದೀಪಗಳನ್ನು ಅನಗತ್ಯವಾಗಿ ಬಳಸದೆ ಸುರಕ್ಷಿತವಾಗಿ ಉಪಯೋಗಿಸಿಕೊಳ್ಳುವಂತೆ ತಿಳಿಸಿದರು. ಒಟ್ಟು ೩೫ ಜನರಿಗೆ ಸೋಲಾರ್ ದೀಪಗಳನ್ನು ವಿತರಿಸಿದರು. ಈ ವೇಳೆ ಗ್ರಾ.ಪಂ.ಸದಸ್ಯರಾದ ಭೈರೇಶ್, ಕಾಂಗ್ರೆಸ್ ಮುಖಂಡ ವೆಂಕಟೇಶ್, ಗ್ರಾ.ಪಂ.ಸಿಬ್ಬಂದಿ ಕೃಷ್ಣಮೂರ್ತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ