ಹುಳಿಯಾರು: ಪಟ್ಟಣದ ಗ್ರಾಮದೇವತೆ ಶ್ರೀಹುಳಿಯಾರಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಪಟ್ಟದಕಳಸ ಮಹೋತ್ಸವ ನೂರಾರು ಭಕ್ತರ ಹರ್ಷೋದ್ಘಾರದೊಂದಿಗೆ ವೈಭವಯುತವಾಗಿ ಜರುಗಿತು.
ಹುಳಿಯಾರಮ್ಮನ ಕಳಸಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡಿರುವುದು |
ಬೆಳಗಿನಜಾವ ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ, ಕೆಂಚಮ್ಮ, ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ, ದೊಡ್ಡಬಿದರೆ ಕರಿಯಮ್ಮ ದೇವರುಗಳೊಂದಿಗೆಕೂಡೂ ಭೇಟಿ ಕಾರ್ಯಕ್ರಮ ನಡೆಯಿತು.ನಂತರ ಕೆರೆಯ ಬಾವಿಹತ್ತಿರ ಬಂದು ಫಲಾಹಾರ ಸೇವಾಕಾರ್ಯದೊಂದಿಗೆ ಕಳಸಕ್ಕೆ ಚಾಲನೆ ನೀಡಲಾಯಿತು.ಹುಳಿಯಾರು,ಲಿಂಗಪ್ಪನಪಾಳ್ಯ,ಕೆ.ಸಿ.ಪಾಳ್ಯ,ಸೋಮಜ್ಜನಪಾಳ್ಯ ಭಾಗದ 63 ಬಾಲಕಿಯರು ಪಟ್ಟದ ಕಳಸ ಹೊತ್ತವರೊಂದಿಗೆ ವಾದ್ಯ ಮೇಳಕ್ಕೆ ನಡೆಮುಡಿಯೊಂದಿಗೆ ಹೆಜ್ಜೆಹಾಕುತ್ತಾ ಅಮ್ಮನವರ ಮೂಲದೇವಸ್ಥಾನಕ್ಕೆ ಆಗಮಿಸಿದರು.ಗುಡೀಯಲ್ಲಿ ಪೂಜಾಕೈಂಕರ್ಯಗಳು ನಡೆದು ಮಹಾಮಂಗಳಾರತಿ ನಂತರ ಕಳಸಗಳನ್ನು ವಿಸರ್ಜಿಸಲಾಯಿತು. ನಂತರ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಅಮ್ಮನವರ ಉಯ್ಯಾಲೋತ್ಸವ ಕಾರ್ಯ ನಡೆಸಲಾಯಿತು.
ದೇವಾಲಯ ಸಮಿತಿಯ ಅಧ್ಯಕ್ಷ ನರೇಂದ್ರಬಾಬು, ಬಡಡಗಿರಾಮಣ್ಣ, ದುರ್ಗಯ್ಯ, ಸ್ಟುಡಿಯೊ ದುರ್ಗರಾಜು, ಪಾಳ್ಯನಾಗರಾಜು, ಬೀರಪ್ಪ, ಶಿವಣ್ಣ ,ಶಿವನಂಜಪ್ಪ ಸೇರಿದಂತೆ ಅಪಾರ ಸಂಖ್ಯೆ ಭಕ್ತಾದಿಗಳು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ