ಶೈಕ್ಷಣಿಕ ರಂಗದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯೆಯೆಷ್ಟು ಮುಖ್ಯವೋ ಅಂತೆಯೇ ಮಾನವೀಯ ಗುಣಗಳು ಅಷ್ಟೇ ಮುಖ್ಯವಾಗುತ್ತವೆ. ಇಂತಹ ಗುಣಗಳನ್ನು ಕಲಿಸುವಲ್ಲಿ ಶಿಕ್ಷಕರು ಮುಂದಾಗಬೇಕು ಎಂದು ನಿವೃತ್ತ ಮುಖ್ಯಶಿಕ್ಷಕ ಆರ್.ರುದ್ರಪ್ಪ ತಿಳಿಸಿದರು.
ಹುಳಿಯಾರಿನ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಸಂಜೆ ನಡೆದ ಸಾಂಸ್ಕೃತಿಕ ನೃತ್ಯ ರಸಂಜೆ-೨೦೧೫ ಕಾರ್ಯಕ್ರಮವನ್ನು ಕಾರ್ಯದರ್ಶಿ ಎಸ್.ಸುಧಾ ಉದ್ಘಾಟಿಸಿದರು. |
ಪಟ್ಟಣದ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ಶುಕ್ರವಾರ ಸಂಜೆ ಅಯೋಜಿಸಿದ್ದ ೨೦೧೪-೧೫ನೇ ಸಾಲಿನ ಸಾಂಸ್ಕೃತಿಕ ನೃತ್ಯ ರಸಂಜೆ-೨೦೧೫ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಸ್ತು,ಸಂಯಮವನ್ನು ಮೈಗೂಡಿಸಿಕೊಳ್ಳುವುದರಿಂದ ಉತ್ತಮ ವಿದ್ಯಾವಂತರಾಗುವುದರ ಜೊತೆಗೆ ತಾವು ಓದಿದ ಶಾಲೆ ಹಾಗೂ ಪೋಷಕರಿಗೆ ಹೆಸರನ್ನು ತರಬಹುದು ಎಂದರು. ಪೋಷಕರು ಆಸ್ತಿ ಅಂತಸ್ತಿನ ಲೆಖ್ಖ ಹಾಕುವುದರ ಬದಲು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸುವ ಮೂಲಕ ಮಕ್ಕಳನ್ನು ಉತ್ತಮ ಪ್ರಜೆಗಳಾಗಿ ಬೆಳೆಸಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕಾರ್ಯದರ್ಶಿ ಸುಧಾ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಾಲೆಯನ್ನು ನಡೆಸುವುದು ಕಷ್ಟದಾಯಕವಾಗಿದ್ದರೂ ಸಹ ನಮ್ಮ ಶಾಲೆ ಇತರ ಶಾಲೆಗಳ ಮಟ್ಟದಲ್ಲಿ ಮುನ್ನೆಡೆಯುತ್ತಿದೆ ಇದಕ್ಕೆ ಶಾಲಾ ಸಂಸ್ಥೆ, ಶಾಲಾ ಸಿಬ್ಬಂದಿ ಹಾಗೂ ಪೋಷಕರ ಸಹಕಾರವೇ ಕಾರಣವಾಗಿದ್ದು ಅದಕ್ಕೆ ತಾವು ಅಬಾರಿಯಾಗಿರುವುದಾಗಿ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಅಧ್ಯಕ್ಷ ಕೆ.ಸಿ.ಶಿವಣ್ಣ ಅಧ್ಯಕ್ಷತೆವಹಿಸಿದ್ದು, ಶ್ರೀರಾಂಪುರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ದೇವೇಂದ್ರ, ವೈಷ್ಣವಿಚೇತನ ಶಾಲೆಯ ಸುಬ್ಬಾರೆಡ್ಡಿ, ಶ್ರೀಕಾಂತ್ ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಸಹಕಾರ್ಯದರ್ಶಿ ಎಸ್.ಲಿಖಿತ ಅವರು ಥ್ರೋಬಾಲ್ ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವಿತರಿಸಿದರು. ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ