ಹುಳಿಯಾರು ಹೋಬಳಿ ದಬ್ಬಗುಂಟೆಯ ಶ್ರೀತಮ್ಮಣ್ಣಸ್ವಾಮಿ ಸನ್ನಿಧಿಯಲ್ಲಿ ಶಿವರಾತ್ರಿ ಅಂಗವಾಗಿ ತಾ.೧೯ರ ಗುರುವಾರದಂದು ಜಾತ್ರಾಮಹೋತ್ಸವ ನಡೆಯಲಿದೆ.
ಗುರುವಾರ ಬೆಳಿಗ್ಗೆ ಕ್ಯಾತೇಲಿಂಗೇಶ್ವರಸ್ವಾಮಿ ಹಾಗೂ ಕ್ಯಾತದೇವರಹಟ್ಟಿ, ಗಾಣಧಾಳು ಮತ್ತು ದಬ್ಬಗುಂಟೆ ಕೋಲುದೇವರ ವಿಸಲುಗೋಡೆ ಆಗಮನ ನಡೆದು ನಂತರ ಮ್ಧ್ಯಾಹ್ನ ದಬ್ಬಗುಂಟೆ ಗೌಡರ ಮನೆಯ ಮೊದಲವಟ್ಟು, ಹಣ್ಣು ಹರಕೆ ತೀರಿಸುವ ಕಾರ್ಯ ನಡೆದ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಂದು ಸಂಜೆ ರಸಮಂಜರಿ ಕಾರ್ಯಕ್ರಮ ಹಾಗೂ ಕರ್ನಾಟಕ ರಕ್ಷಣಾ ಸೇವೆಯ ಉದ್ಘಾಟನೆ ನಡೆಯಲಿದೆ. ಶುಕ್ರವಾರ ಮುಡಿ ತೆಗೆಯುವಕಾರ್ಯ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ