ವಿಷಯಕ್ಕೆ ಹೋಗಿ

ಊರ ಐತಿಹ್ಯ ಸಾರುವ ನಾಯಿಗಲ್ಲಿನ ಸಂರಕ್ಷಣೆ ಮಾಡಿ ಅನಾಥವಾದ ನಾಯಿಗಲ್ಲಿನ ಅಕ್ಕಪಕ್ಕ ತ್ಯಾಜ್ಯದ ರಾಶಿ

ವರದಿ:ಡಿ.ಆರ್.ನರೇಂದ್ರಬಾಬು
-------------
ಹುಳಿಯಾರು : ಪ್ರತಿಯೊಂದು ಗ್ರಾಮಗಳ ಹಿಂದೆ ಅವುಗಳದ್ದೇ ಆದ ಐತಿಹ್ಯವಿದ್ದು ಅದಕ್ಕೆ ತಕ್ಕಂತೆ ಕೆಲ ಕುರುಹುಗಳು ಇರುತ್ತವೆ. ಅಂತೆಯೇ ಹುಳಿಯಾರಿನ ಇತಿಹಾಸಕ್ಕೆ ಹೊಂದಿಕೊಂಡಂತಿರುವ ನಾಯಿಗಲ್ಲು ಹುಳಿಯಾರು ಕೆರೆ ಏರಿ ದಡದಲ್ಲಿದ್ದು ಅವನತಿಯತ್ತ ಸಾಗಿರುವ ಅದರ ಸಂರಕ್ಷಣೆ ಅತ್ಯಗತ್ಯವಾಗಿದೆ.
ಹುಳಿಯಾರಿನ ಇತಿಹಾಸ ನೆನಪಿಸುವ ನಾಯಿಗಲ್ಲು .
ಹುಳಿಯಾರು ಹೆಸರಿಗೆ ಈ ನಾಯಿಗಲ್ಲು ತಳುಕು ಹಾಕಿಕೊಂಡಿದ್ದು ವೀರರ ಭೂಮಿಯಾಗಿದ್ದ ಈ ನೆಲದಲ್ಲಿ ನಾಯಿಯೂ ಸಹ ಹುಲಿಯನ್ನು ಎದುರಿಸಿದ್ದರಿಂದ ಹುಲಿ ಯಾರು ಎಂಬ ಪ್ರಶ್ನೆ ಹುಟ್ಟಿ ಹುಲಿಯಾರು ಎಂದು ಕರೆಯಲ್ಪಟ್ಟು ಕ್ರಮೇಣ ಹುಳಿಯಾರಾಗಿ ಬದಲಾಗಿದೆ ಎನ್ನುತ್ತದೆ ಇತಿಹಾಸ, ಇದರ ದ್ಯೋತಕವಾಗಿ ಮಾರನಾಯಕ ಆಳ್ವಿಕೆಯಲ್ಲಿ ಗ್ರಾಮದ ಕೆರೆಯಲ್ಲಿ ಕಲ್ಲೊಂದು ಸ್ಥಾಪಿಸಲ್ಪಟ್ಟು ಹುಲಿ ಹಾಗೂ ನಾಯಿ ಕದನವಾಡುತ್ತಿರುವ ದೃಶ್ಯ ಕೆತ್ತಲ್ಪಟ್ಟಿದೆ.

ನಾಯಿಗಲ್ಲಿನ ಐತಿಹ್ಯ : ಈ ನಾಯಿಗಲ್ಲಿನ ಇತಿಹಾಸ ಎಲ್ಲೂ ದಾಖಲಾಗದೆ ಕೇವಲ ಹಿರಿಯ ಬಾಯಲ್ಲೇ ಉಳಿದು ಕೊಂಡಿದ್ದು ಅಂತೆ, ಕಂತೆ ಎನ್ನುವಂತಾಗಿದೆ. ಕೆಲವರ ಪ್ರಕಾರ ಹುಳಿಯಾರು ಕೆರೆ ಕೋಡಿ ಬೀಳುವ ಮುನ್ಸೂಚನೆಯ ಸೂಚಕದ ಕಲ್ಲು ಇದಾಗಿದ್ದು, ಈ ನಾಯಿಗಲ್ಲ ನೆತ್ತಿಯವರೆಗೆ ನೀರು ಬಂತೆಂದರೆ ಕೆರೆ ಕೋಡಿ ಬೀಳುತ್ತದೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಅಲ್ಲದೆ ಈ ಕಲ್ಲಿನ ಮೇಲೆ ಕಾಗೆಯೊಂದು ನೀರು ಕುಡಿಯಲು ಕುಳಿತಾಗ ಅದರ ಕೊಕ್ಕಿಗೆ ನೀರು ಸಿಕ್ಕಿದರೆ ಆಗಲೂ ಸಹ ಕೆರೆ ಕೋಡಿ ಬೀಳುತ್ತದೆ ಎಂದು ಹೇಳಲಾಗುತ್ತದೆ. ಒಟ್ಟಾರೆ ಈ ನಾಯಿಗಲ್ಲು ಕೆರೆಯ ನೀರಿನ ಮಟ್ಟವನ್ನು ತಿಳಿಸುವಲ್ಲಿ ತನ್ನದೇ ಆದ ಪಾತ್ರವನ್ನು ಹೊಂದಿದ್ದಂತಹ ಕುರುಹಾಗಿದೆ ಎಂದು ಕೆಲ ಹಿರಿಯರ ಅಭಿಪ್ರಾಯವಾಗಿದೆ.
ಮತ್ತೆ ಕೆಲವರು ಹೇಳುವಂತೆ ಈ ಹಿಂದೆ ಹುಳಿಯಾರಿನ ಸುತ್ತ ಬೃಹತ್ ಕೋಟೆಯಿದ್ದು ಒಮ್ಮೆ ಬೇಟೆಯ ಸಂದರ್ಭದಲ್ಲಿ ಬೇಟೆಗಾರನ ಜೊತೆಯಲ್ಲಿದ್ದ ನಾಯಿಯೊಂದು ಹುಲಿಯನ್ನು ಬೆನ್ನಟ್ಟಿಕೊಂಡು ಬಂದಾಗ ಹುಲಿ ನಾಯಿಗೆ ಹೆದರಿ ಕೋಟೆಯನ್ನು ಹಾರಿತು. ಅದರ ನೆನಪಾಗಿ ನಾಯಿಗಲ್ಲನ್ನು ಕೆತ್ತಿಸಿ ಕೆರೆಯ ಜಾಗದಲ್ಲಿ ಸ್ಥಾಪಿಸಿದ್ದಾರೆ ಎನ್ನುತ್ತಾರೆ. ಈ ರೀತಿಯ ಹತ್ತಾರೂ ಮಾರ್ಮಿಕ ಐತಿಹ್ಯಗಳು ಈ ನಾಯಿಗಲ್ಲಿಗಿದೆ.
ಕಾಲಕ್ರಮೇಣ ಕೆರೆ ಜಾಗ ಒತ್ತುವರಿಯಾಗಲ್ಪಟ್ಟು ಈ ಕಲ್ಲು ಕೂಡ ಜನರ ನೆನಪಿನಿಂದ ಮಾಸುತ್ತಾ ಬಂದು ಸುಮಾರು ಐದಾರು ಅಡಿಯಷ್ಟಿರುವ ನಾಯಿಗಲ್ಲು ಮಣ್ಣುಮುಚ್ಚಿಕೊಂಡು ಒಂದರಿಂದ ಎರಡು ಅಡಿಯಷ್ಟು ಮಾತ್ರ ಗೋಚರಿಸುತ್ತಿದೆ. ಇದರ ಸುತ್ತಮುತ್ತ ತ್ಯಾಜ್ಯದ ರಾಶಿಯೇ ಬಿದ್ದಿದ್ದು ಇದನ್ನು ಕಂಡವರು ಇದು ಎಂಥದೋ ಕಲ್ಲು ಎಂಬ ಭಾವ ಹುಟ್ಟಿಸುತ್ತಿದೆ. ಆದರೆ ಇದೀಗ ಬಸ್ ನಿಲ್ದಾಣದ ಅಂಗಡಿಗಳೆಲ್ಲಾ ತೆರವಾಗಿ ಕೆರೆಜಾಗ ವಿಶಾಲವಾಗಿದ್ದು ಪ್ರತಿಯೊಬ್ಬರ ಕಣ್ಣಿಗೆ ನಾಯಿಗಲ್ಲು ಕಾಣಿಸುತ್ತಿದೆಯಾದ್ದರಿಂದ ಕೆಲವರು ಸಂರಕ್ಷಣೆಗೆ ಮುಂದಾಗಿದ್ದು ಇದನ್ನು ಎಲ್ಲಿ ಹೇಗೆ ಸಂರಕ್ಷಿಸಬೇಕೆಂಬುದು ಪ್ರಶ್ನೆಯಾಗಿದೆ.
ಇಲಾಖೆಯವರಾಗಲಿ, ಗ್ರಾ.ಪಂ.ನವರಾಗಲಿ, ಸಾರ್ವಜನಿಕರಾಗಿರಲಿ ನಾಯಿಗಲ್ಲಿನ ಕಡೆ ತಿರುಗಿ ನೋಡದೆ ಮಣ್ಣಿನಲ್ಲಿ ಹುದುಗುತ್ತಿದ್ದ ಹಿನ್ನಲೆಯಲ್ಲಿ ಇಲ್ಲಿನ ಕಾಲೇಜು ವಿದ್ಯಾರ್ಥಿಗಳು ನಮ್ಮಊರಿನ ಇತಿಹಾಸ ಹೇಳುವ ಕುರುಹನ್ನು ನಾವೇ ಸಂರಕ್ಷಣೆ ಮಾಡುತ್ತೇವೆ.ಅದನ್ನು ಕಾಲೇಜಿನ ಕ್ಯಾಂಪಸ್ ನಲ್ಲಿ ಇಡುವುದಾಗಿ ಅದನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ. ಆದರೆ ಇಲ್ಲಿನ ಸ್ಥಳಿಯರಾದ ಮೋಹನ್ ಕುಮಾರ್ ರೈ, ಲಿಂಗಪ್ಪನಪಾಳ್ಯದ ನಾಗರಾಜು, ಹೋಟೆಲ್ ಪರಪ್ಪ , ಮೂರ್ತಿ ಸೇರಿದಂತೆ ಇತರರು ಇದನ್ನು ವಿರೋಧಿಸಿದ್ದು ಇತಿಹಾಸ ಸಾರುವ ಕಲ್ಲು ಎಲ್ಲಿಗೂ ತೆಗೆದುಕೊಂಡು ಹೋಗುವುದು ಬೇಡ ನಾಯಿಗಲ್ಲು ಇರುವ ಜಾಗದಲ್ಲೇ ಅದನ್ನು ಸಂರಕ್ಷಣೆ ಮಾಡಬೇಕಿದೆ ಎಂದು ವಿದ್ಯಾರ್ಥಿಗಳನ್ನು ಹಿಂದಕ್ಕೆ ಕಳುಹಿಸಿದ್ದಾರೆ.
ಸದ್ಯ ಕಲ್ಲಿನ ಸುತ್ತಾ ಸ್ವಚ್ಚ ಮಾಡಿದ್ದು ಅಲ್ಲೊಂದು ಸ್ಮಾರಕ ನಿರ್ಮಾಣ ಮಾಡುವ ಯೋಜನೆ ಹೊಂದಿರುವುದಾಗಿ ಮೋಹನ್ ಕುಮಾರ್ ರೈ ತಿಳಿಸುತ್ತಾರೆ.
ಗ್ರಾಮದ ಇತಿಹಾಸ ಹೇಳುವ ನಾಯಿಗಲ್ಲನ್ನು ಸ್ಥಳಿಯರಾದ ನಾವೇ ಸೇರಿ ಸಂರಕ್ಷಣೆ ಮಾಡುತ್ತೇವೆ ಅದನ್ನು ಯಾವುದೇ ಕಾರಣಕ್ಕೂ ಕೀಳಲು ಬಿಡುವುದಿಲ್ಲ. ಅದರ ಸ್ಥಾಪನೆ ಯಾವರೀತಿ ಆಗಿದೆ ಎಂಬುದು ತಮಗ್ಯಾರಿಗೂ ತಿಳಿದಿಲ್ಲ. ಅದನ್ನು ಕಿತ್ತು ಸ್ಥಳಾಂತರಿಸುವ ಬದಲು ಅದು ಇರುವ ಜಾಗದಲ್ಲೇ ಸಂರಕ್ಷಣೆ ಮಾಡಿಸುವೆ : ಜಯಕರ್ನಾಟಕ ಸಂಘದ ಮೋಹನ್ ಕುಮಾರ್ ರೈ.

ಒಟ್ಟಾರೆ ಆಧುನಿಕತೆಯ ಹೆಸರಲ್ಲಿ ಇತಿಹಾಸ ನೆನಪನ್ನು ಸಾರುವ ಅನೇಕ ಕುರುಹುಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು ಇಂತಹ ಕುರುಹುಗಳ ರಕ್ಷಣೆಗೆ ಪುರಾತತ್ವ ಇಲಾಖೆ ಹಾಗೂ ಸ್ಥಳೀಯ ಆಡಳಿತದವರು ಮುಂದಾಗಬೇಕಿದೆ ಎಂಬುದು ಸ್ಥಳೀಯರ ಬಿನ್ನಹ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.