ಹುಳಿಯಾರು ಸಮೀಪದ ದೊಡ್ಡಎಣ್ಣೇಗೆರೆ ಶ್ರೀ ಗವೀರಂಗನಾಥ ವಿದ್ಯಾಪೀಠ ಪ್ರೌಢಶಾಲೆಯಲ್ಲಿ ಎಂಟನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಲಾಯಿತು.
ಹುಳಿಯಾರು ಸಮೀಪದ ದೊಡ್ಡಎಣ್ಣೇಗೆರೆ ಶ್ರೀ ಗವೀರಂಗನಾಥ ವಿದ್ಯಾಪೀಠ ಪ್ರೌಢಶಾಲೆಯ ಎಂಟನೇ ತರಗತಿ ಮಕ್ಕಳಿಗೆ ಉಚಿತ ಸೈಕಲ್ ವಿತರಿಸಲಾಯಿತು. |
ದೊಡ್ಡಎಣ್ಣೇಗೆರೆ ಗ್ರಾ.ಪಂ.ಯ ಮಾಜಿ ಉಪಾಧ್ಯಕ್ಷೆ ಉಮಾದೇವಿ ಮಕ್ಕಳಿಗೆ ಸೈಕಲ್ ವಿತರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಬಸವಲಿಂಗಯ್ಯ ಮಾತನಾಡಿ ಸರ್ಕಾರ ಉಚಿತವಾಗಿ ನೀಡಿರುವ ಸೈಕಲನ್ನು ಸಮರ್ಪಕವಾಘಿ ಬಳಕೆ ಮಾಡಿಕೊಳ್ಳಬೇಕು ಹಾಗೂ ಆ ಸೈಕಲ್ ನಲ್ಲೇ ಶಾಲೆಗೆ ಸರಿಯಾಗಿ ಬರುವಂತೆ ತಿಳಿಸಿದರು. ಈ ವೇಳೆ ಶಿಕ್ಷಕರಾದ ಜ್ಞಾನರಾಜಯ್ಯ, ನಾಗರಾಜು,ವೆಂಕಟೇಶನಾಯ್ಕ, ನಟರಾಜು ಸೇರಿದಂತೆ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ