ಹುಳಿಯಾರು ಪಟ್ಟಣದ ಕೆಇಬಿ ಎದುರಿನ ವಸತಿ ಪ್ರದೇಶದಲ್ಲಿ ಕೋಳಿ ಅಂಗಡಿ ತೆರೆಯ ಕೂಡದೆಂದು ಪಟ್ಟು ಹಿಡಿದು ಸೋಮವಾರ ಪ್ರಾರಂಭವಾದ ಧರಣಿ ಮಂಗಳವಾರವೂ ಸಹ ಮುಂದುವರೆದಿದ್ದು,
ಸಂಜೆಯಾಗುತ್ತಾ ಬಂದರೂ ಸಹ ಜಾಗದ ಮಾಲೀಕರಾಗಲಿ, ಸಾರ್ವಜನಿಕ ಅಧಿಕಾರಿಗಳಾಗಲಿ ಧರಣಿ ಸ್ಥಳಕ್ಕೆ ಬಾರದೆ. ತಹಸೀಲ್ದಾರ್ ನಿರೀಕ್ಷೆಯಲ್ಲಿ ಧರಣಿ ಮುಂದುವರೆಯಿತು.
![]() |
ಅಧಿಕಾರಿಗಳ ನಿರೀಕ್ಷೆಯಲ್ಲಿ ಮಂಗಳವಾರವೂ ಧರಣಿ ಮುಂದುವರಿಸಿದ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಸಿದ್ದಪ್ಪನವರ ಕುಟುಂಬದವರು . |
ವಸತಿ ಪ್ರದೇಶದಲ್ಲಿ ಕೋಳಿ ಅಂಗಡಿ ಇಡುವುದನ್ನು ವಿರೋದಿಸಿ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಸಿದ್ದಪ್ಪನವರ ಕುಟುಂಬದವರು ಹಾಗೂ ಅಕ್ಕಪಕ್ಕದವ ಮನೆಯವರು ಸೇರಿ ಧರಣಿ ಪ್ರಾರಂಭಿಸಿದ್ದರು. ಧರಣಿ ವಿಷಯ ತಿಳಿದರೂ ಸಹ ಜಾಗದ ಮಾಲೀಕರಾಗಲಿ, ಸಾರ್ವಜನಿಕ ಅಧಿಕಾರಿಗಳಾಗಲಿ ಧರಣಿ ಸ್ಥಳಕ್ಕೆ ಬಾರದೆಯಿದ್ದು ಮಂಗಳವಾರ ಸಂಜೆಯಾಗುತ್ತಾ ಬಂದರೂ ಸಹ ಯಾರೂ ಇತ್ತ ಸುಳಿಯದ ಹಿನ್ನಲೆಯಲ್ಲಿ ಧರಣಿ ಮುಂದುವರೆದಿತ್ತು.
ಧರಣಿ ನಿರತರ ಮನವೋಲಿಸಲು ಕೋಳಿ ಅಂಗಡಿದಾರರು ಮುಂದಾಗಿ, ಸಭೆ ಕರೆದು ಧರಣಿ ನಿರತ ಕುಟುಂಬದ ರಘು ಅವರೊಂದಿಗೆ ಮಾತುಕತೆ ನಡೆಸಲು ಮುಂದಾದರು. ಬಸ್ ಅಂಗಡಿ ತೆರವಿನಿಂದಾಗಿ ಕೋಳಿ ಅಂಗಡಿಯವರಿಗೆ ಪಟ್ಟಣದಲ್ಲಿ ಎಲ್ಲೂ ಸೂಕ್ತ ಜಾಗ ಸಿಗದೆ ಪರದಾಡುತ್ತಿದ್ದೇವೆ. ಈಗ ಸದ್ಯ ಜಾಗ ಸಿಕ್ಕಿದೆ ಇದರಿಂದ ನಮ್ಮ ಜೀವನಕ್ಕೂ ಅನುಕೂಲವಾಗಲಿದೆ. ಯಾವುದೇ ಕಾರಣಕ್ಕೂ ಕೋಳಿ ಅಂಗಡಿಗಳ ಹತ್ತಿರ ಅಸ್ವಚ್ಚತೆಗೆ ಅನುವು ಮಾಡಿಕೊಡುವುದಿಲ್ಲ, ಅಂಗಡಿಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ನಾವುಗಳೆ ಒಂದು ಆಟೋ ಮಾಡಿಕೊಂಡು ಪಟ್ಟಣದ ಹೊರಗೆ ಸಾಸಿಗುತ್ತೇವೆ. ಅಂಗಡಿಯನ್ನು ಶುಚಿಯಾಗಿಟ್ಟುಕೊಳ್ಳುತ್ತೇವೆ ಇದರಿಂದ ಯಾವುದೇ ರೀತಿಯ ವಾಸನೆ ಬಾರದಂತೆ ಎಚ್ಚರವಹಿಸಿಕೊಂಡು ಅಂಗಡಿಯನ್ನು ನಡೆಸುತ್ತೇವೆಂದು ಧರಣಿನಿರತ ಮನವೋಲಿಸಲು ಮುಂದಾಗಿದ್ದರು.
ಧರಣಿನಿರತ ಕುಟುಂಬದ ರಘು ಪ್ರತಿಕ್ರಿಯಿಸಿ ಇಂದು ಅಂಗಡಿಯಿಡುವ ಮೊದಲೇ ಖಾಗದ ಮಾಲೀಕರು ನಮ್ಮ ಮೇಲೆ ಉದ್ಘಟತನದಿಂದ ಮಾತಾಡಿದ್ದಾರೆ. ಈಗ ನಯವಾಗಿ ಮಾತನಾಡಿ ನಂತರ ನಾವೇನಾದರೂ ಕೇಳಲು ಹೋದರೆ ನಮ್ಮೊಂದಿಗೆ ಯಾವರೀತಿ ನಡೆದುಕೊಳ್ಳುತ್ತಾರೆ ಎಂದರು. ಒಂದು ಅಂಗಡಿಯಾಗಿದ್ದರೆ ಪರವಾಗಿಲ್ಲ ಬಸ್ ನಿಲ್ದಾಣದಲ್ಲಿನ ಅನೇಕ ಕೋಳಿ ಅಂಗಡಿಯವರು ಇದೇ ಜಾಗಕ್ಕೆ ಬಂದರೆ ಅಕ್ಕಪಕ್ಕದ ಮನೆಯವರ ಗತಿ ಏನು ಎಂದ ಅವರು ತಹಸೀಲ್ದಾರ್ ಅವರೇ ಸ್ಥಳಕ್ಕೆ ಬಂದು ಈ ಸಮಸ್ಯೆಯನ್ನು ಬಗೆಹರಿಸಲಿ ಎಂದರು.
ಒಟ್ಟಾರೆ ಖಾಸಗಿ ಜಾಗದ ಮಾಲೀಕರಾಗಲಿ , ಸಾರ್ವಜನಿಕ ಅಧಿಕಾರಾಗಿಗಳಾಗಲಿ ಯಾರೊಬ್ಬರು ಸ್ಥಳಕ್ಕೆ ಬಂದು ವಿಷಯದ ಬಗ್ಗೆ ಮಾತನಾಡದೆ ಇರುವುದರಿಂದ ಪ್ರತಿಭಟನೆ ಮುಂದುವರೆಯುವಂತೆ ಮಾಡಿತ್ತು. ಪ್ರತಿಭಟನಾ ನಿರತ ಕುಟುಂಬದವರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ಧರಣಿ ಸ್ಥಳದಲ್ಲಿರಿಸಿ ಪ್ರತಿಭಟನೆ ನಡೆಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ