ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಕನ್ನಡ ಕವಿಕಾವ್ಯಗೋಷ್ಠಿ ಪಾಕ್ಷಿಕ ಕಾರ್ಯಕ್ರಮ ಪಟ್ಟಣದ ವಸಂತನಗರ ಬಡಾವಣೆಯ ನೀಲಮ್ಮ ಅವರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಿವೃತ್ತ ತಹಸೀಲ್ದಾರ್ ನಾಗರಾಜು ಮಾತನಾಡಿ, ವಚನಕಾರರ ಚಿಂತನೆಗಳನ್ನು ಕುರಿತು ವ್ಯಾಖ್ಯಾನ ನೀಡಿದರು. ಹೋಬಳಿ ಸಾಹಿತ್ಯ ಪರಿಷತ್ ಇಂದಿಗೂ ಸಹ ಇಂತಹ ಕಾರ್ಯವನ್ನು ಮಾಡಿಕೊಂಡು ಕನ್ನಡ ನಾಡು ನುಡಿ ಬಗ್ಗೆ ಜನರಿಗೆ ತಿಳಿಸುತ್ತಿರುವುದು ಶ್ಲಾಘನೀಯ ಎಂದರು. ಈ ಕಾರ್ಯ ಸದಾಕಾಲ ಮುನ್ನೆಡೆಯಲಿ ಎಂದು ಹಾರೈಸಿದರು.
ಶ್ರೀರಾಂಪುರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ವಿರೇಶ್ ಅವರು ಬಸವಣ್ಣನವರ ವಚನಗಳನ್ನು ಕುರಿತ ತಮ್ಮ ಉಪನ್ಯಾಸದಲ್ಲಿ ಕೆಲ ವಚನಗಳನ್ನು ಹಾಡುವ ಮೂಲಕ ಅವುಗಳ ತಾತ್ಪರ್ಯ ತಿಳಿಸಿದರು. ಬಸವಣ್ಣನವರ ಅನುಭವಾಮೃತವನ್ನು ಸ್ಮರಿಸುತ್ತಾ ತಮ್ಮ ಜೀವನವನ್ನು ಉತ್ತಮ ಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.
ಹೋಬಳಿ ಕಸಾಪದ ತ.ಶಿ.ಬಸವಮೂರ್ತಿ ಅವರು ವಚನಕಾರರ ವಚನಗಳನ್ನು ಹಾಡಿದರಲ್ಲದೆ ಅವುಗಳ ಸಾರವನ್ನು ತಿಳಿಸಿದರು. ಈ ವೇಳೆ ಶ್ರೀರಾಂಪುರ ಪ್ರೌಢಶಾಲೆಯ ಶಿಕ್ಷಕ ಚಂದ್ರಶೇಖರಯ್ಯ, ಅವಿನಾಶ್,ಆನಂದ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ