ಹುಳಿಯಾರು ಪಟ್ಟಣದ ಜ್ಞಾನಜ್ಯೋತಿ ವಿದ್ಯಾಸಂಸ್ಥೆಯಲ್ಲಿ ೨೦೧೪-೧೫ನೇ ಸಾಲಿನ ಸಾಂಸ್ಕೃತಿಕ ನೃತ್ಯ ರಸಂಜೆ-೨೦೧೫ ಕಾರ್ಯಕ್ರಮ (ತಾ.೧೩) ಶುಕ್ರವಾರ ಸಂಜೆ ಶಾಲೆಯ ಆವರಣದಲ್ಲಿ ನಡೆಯಲಿದೆ.
ಸಂಸ್ಥೆಯ ಅಧ್ಯಕ್ಷ ಕೆ.ಸಿ.ಶಿವಣ್ಣ ಅಧ್ಯಕ್ಷತೆವಹಿಸಲಿದ್ದು, ಕಾರ್ಯದರ್ಶಿ ಎಸ್.ಸುಧಾ ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ ಮುಖ್ಯಶಿಕ್ಷಕ ಆರ್.ರುದ್ರಪ್ಪ, ಸಂಸ್ಥೆಯ ನಿರ್ದೇಶಕ ಕೆ.ಸಿ.ಚಂದ್ರಯ್ಯ, ಶ್ರೀರಾಂಪುರ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ದೇವೇಂದ್ರ, ಸಹಕಾರ್ಯದರ್ಶಿ ಎಸ್.ಲಿಖಿತ ಅವರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಮಕ್ಕಳಿಂದ ಬಗೆಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು, ನಗೆ ನಾಟಕಗಳು,ನೃತ್ಯರೂಪಕಗಳು ನಡೆಯಲಿದ್ದು ಸಾರ್ವಜನಿಕರು ಹಾಗೂ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಂಸ್ಥೆಯ ಕಾರ್ಯದರ್ಶಿ ಸುಧಾ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ