ಕುರಿ ಮೇಯಿಸಲು ಹೋಗಿದ್ದ ಯುವಕರಿಬ್ಬರು ಅವುಗಳಿಗೆ ಸ್ನಾನ ಮಾಡಿಸುವ ವೇಳೆ ಕಟ್ಟೆಗೆ ಜಾರಿಬಿದ್ದು ಸಾವನಪ್ಪಿರುವ ಘಟನೆ ಇಲ್ಲಿಗೆ ಸಮೀಪದ ಬಾಲದೇವರಹಟ್ಟಿ ಬಳಿ ಶುಕ್ರವಾರ ನಡೆದಿದೆ.
ಲೋಕೇಶ್(೨೦) ಹಾಗೂ ಪ್ರಕಾಶ್(೨೦) ಮೃತರು. ಗ್ರಾಮದ ಸಮೀಪವೇ ಇದ್ದ ವಡ್ಡನಏರಿ ಕಟ್ಟೆ ಬಳಿ ಕುರಿ ಮೇಯಿಸಿಕೊಂಡು ಹೋದಾಗ ೧೨ ಗಂಟೆ ಸುಮಾರಿಗೆ ದುರ್ಘಟನೆ ಜರುಗಿದೆ. ಮಧ್ಯಾಹ್ನದ ವೇಳೆಗೆ ಕಟ್ಟೆಯಲ್ಲಿ ಕುರಿಗಳನ್ನು ಸ್ನಾನ ಮಾಡಿಸುವ ವೇಳೆ ನೀರಿನೊಳಕ್ಕೆ ಜಿಗಿದ ಕುರಿಯನ್ನು ಹೊರಕ್ಕೆಳೆದು ಕೊಳ್ಳಲು ಹೋದ ಪ್ರಕಾಶ್ ಗುಂಡಿಯೊಳಕ್ಕೆ ಜಾರಿದ್ದಾನೆ. ಈಜು ಬಾರದ ಪ್ರಕಾಶ್ ನೀರಿನೊಳಗೆ ಮುಳುಗುತ್ತಿದ್ದಂತೆಯೇ ತಕ್ಷಣವೇ ಜೊತೆಯಲ್ಲಿದ್ದ ಲೋಕೇಶ್ ಆತನನ್ನು ರಕ್ಷಿಸಲು ಹೋದಾಗ ಬಿಗಿದಪ್ಪಿಕೊಂಡಿದ್ದರಿಂದ ಇಬ್ಬರೂ ನೀರಲಿ ಮುಳುಗಿ ಸಾವನಪ್ಪಿದ್ದಾರೆ. ಅಗ್ನಿಶಾಮಕದಳದವರು ಸ್ಥಳಕ್ಕಾಗಮಿಸಿ ಶವ ಹೊರತೆಗೆದಿದ್ದಾರೆ. ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದರು. ಎ ಎಸ್ ಐ ರಾಜಣ್ಣ ಹಾಗೂ ಹೆಡ್ ಕಾನ್ಸ್ ಸ್ಟೇಬಲ್ ಎ . ರಾಮಾಂಜನಪ್ಪ ಸ್ಥಳದಲ್ಲಿದ್ದು ಕಾರ್ಯಾಚರಣೆ ನಡೆಸಿದ್ದಾರೆ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ