ಆರೋಗ್ಯ ಇಲಾಖೆ ಹಾಗೂ ರೋಟರಿ ಸಹಯೋಗದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಭಾನುವಾರದಂದು ಹಮ್ಮಿಕೊಂಡಿದ್ದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಹುಳಿಯಾರು ಬಸ್ ನಿಲ್ದಾಣದ ಪೋಲಿಯೋ ಬೂತ್ ನಲ್ಲಿ ಆಶಾಕಾರ್ಯಕರ್ತೆಯರು ಮಕ್ಕಳಿಗೆ ಲಸಿಕೆ ಹಾಕುತ್ತಿರುವುದು. |
ಪಟ್ಟಣದ ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ, ಮಾರುತಿನಗರ ಕೇಶವ ಸ್ಕೂಲ್, ಉರ್ದುಶಾಲೆ,ಅಜಾದ್ ನಗರದ ಅಂಗನವಾಡಿ ಕೇಂದ್ರಗಳಲ್ಲಿ ಪೋಲಿಯೋ ಬೂತ್ ಗಳನ್ನು ತೆರೆದು ಬೆಳೆಗ್ಗಿನಿಂದ ಸಂಜೆಯವರೆಗೂ ಮಕ್ಕಳಿಗೆ ಲಸಿಕೆ ಹಾಕಲಾಯಿತು. ಹೋಬಳಿಯ ವಿವಿಧ ಗ್ರಾ.ಪಂಯ ಅಂಗನವಾಡಿ ಕೇಂದ್ರಗಳಲ್ಲೂ ಸಹ ಬೂತ್ ಗಳನ್ನು ತೆರೆದಿದ್ದರು. ಪಟ್ಟಣದ ಬಸ್ ನಿಲ್ದಾಣದ ಬೂತ್ ನಲ್ಲಿ ಆಶಾಕಾರ್ಯರ್ತೆಯರು ಸುತ್ತಮುತ್ತಲಿನ ಹಳ್ಳಿಗಳಿಂದ ಬಸ್ ನಲ್ಲಿ ಯಾರಾದರೂ ೫ವರ್ಷ ಒಳಪಟ್ಟ ಮಕ್ಕಳೊಂದಿಗೆ ಬಂದರೆ ಅವರನ್ನು ಬೂತ್ ನಲ್ಲಿಗೆ ಕರೆತಂದು ಲಸಿಕೆ ಹಾಕುವಕಾರ್ಯದಲ್ಲಿ ತೊಡಗಿದ್ದರು.
ರೋಟರಿ ಅಧ್ಯಕ್ಷ ಈ. ರವೀಶ್, ಸದಸ್ಯ ಗಂಗಾಧರ್, ಪೋಲಿಯೋ ಲಸಿಕಾ ಕಾರ್ಯಕ್ರಮದ ಮೇಲ್ವಿಚಾರಕರಾದ ಅನಿಲ್ ಹಾಗೂ ಧನಂಜಯ್ ಅವರು ಸೂಕ್ತ ವ್ಯವಸ್ಥೆ ಮಾಡಿಕೊಟ್ಟು ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗುವಂತೆ ಮಾಡಿದ್ದಾರೆ. ಲಸಿಕಾ ಕಾರ್ಯಕ್ರಮ ಇನ್ನೆರಡು ದಿನ ಮುಂದುವರೆಯಲಿದ್ದು ಮನೆಮನೆಗಳಿಗೆ ತೆರಳಿ ಯಾರಾದರೂ ಮಕ್ಕಳು ಲಸಿಕೆ ಹಾಕಿಸದೆ ಹೋಗಿದ್ದರೆ ಅಂತಹವರಿಗೂ ಲಸಿಕೆ ಹಾಕುವಕಾರ್ಯ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ